
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.10: ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವ ಮೂಲಕ ಪುರುಷರಿಗೆ ಸಮಾನವಾಗಿದ್ದಾರೆ ಎಂದು ನ್ಯಾಯವಾದಿ ಅಕ್ಕಮಹಾದೇವಿ ಹೇಳಿದರು. ಹಿರೇಜಂತಕಲ್ 29 ನೇ ವಾರ್ಡ್ ಬಸವ ಭವನದಲ್ಲಿ ಶ್ರೀ ನಿಮಿಷಾಂಭ ಮತ್ತು ಶ್ರೀ ವರಮಹಾಲಕ್ಷ್ಮಿ ಮಹಿಳಾ ಸ್ವ ಸಹಾಯ ಸಂಘದಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಈಗಿನ ಕಾಲದಲ್ಲಿ ಮಹಿಳೆಯರು ವಾಯು ಸಾರಿಗೆ ಉನ್ನತ ಅಧಿಕಾರ ರಾಜಕಾರಣ,ಉಪಗ್ರಹ ಮೆಟ್ರೋ ಟ್ರೇನ್,ಚಲನೆ ಪೈಲಟ್ ಮುಂತಾದ ಎಲ್ಲಾ ರಂಗದಲ್ಲೂ ಅಪ್ರತಿಮ ಸಾಧನೆಯನ್ನು ಮಾಡಿ,ಪುರುಷ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ನಂತರ ಮಾತನಾಡಿದ ಆಶಾ ಕಾರ್ಯಕರ್ತೆ ಕೆ.ಲಲಿತಾ ಮಹಿಳೆಯರು ಎಲ್ಲಾ ರಂಗದಲ್ಲಿ ಮೇಲುಗೈ ಸಾಧಿಸಿದ್ದಾರೆ ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ದೊಡ್ಡ ದೊಡ್ಡ ಹುದ್ದೆಯಲ್ಲಿ ಒಳ್ಳೆಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳನ್ನು ಸರ್ಕಾರದ ಒದಗಿಸಬೇಕು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಆದಕಾರಣ ಹೆಣ್ಣಿನು ಭೂಮಿತಾಯಿಗೆ ಹೋಲಿಸಿದ್ದಾರೆ ಮತ್ತು ಒಂದು ಕುಟುಂಬದಲ್ಲಿ ಹೆಣ್ಣು ಹುಟ್ಟಿದರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಸತತವಾಗಿ ಆರು ವರ್ಷದಿಂದ ಮಹಿಳಾ ದಿನಾಚರಣೆ ಮಾಡುತ್ತಾ ಬಂದಿದ್ದಾರೆ ಮಹಿಳಾ ದಿನಾಚರಣೆ ಪ್ರಯುಕ್ತ ರಂಗೋಲಿ ಸ್ಪರ್ಧೆ,ನಿಂಬೆಹಣ್ಣಿನ ಆಟ,ಚೇರ್ ಆಟ ಇನ್ನೂ ಹಲವಾರು ಸ್ಪರ್ಧೆಗಳನ್ನು ಆಯೋಜಿ ಅದರಲ್ಲಿ ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ನೀಡುತ್ತಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ವಿಜಯಲಕ್ಷ್ಮಿ, ಪದಾಧಿಕಾರಿಗಳಾದ ದ್ರಾಕ್ಷಿಯಣಿ ಉಪ್ಪಾರ,ರೇಣುಕಾ ಸೊಕೇರ,ಶಾಂತಮ್ಮ
ಸೊಕೇರ,ಲಕ್ಷ್ಮೀ,ಶ್ರೀದೇವಿ,ರೂಪಾ,ಅಯ್ಯಮ್ಮ,ರೇಖಾ,ಬೇಗಂ, ನೀಲಮ್ಮ,ಸೇರಿದಂತೆ ಇತರರು ಇದ್ದರು
One attachment • Scanned by Gmail