ಮಹಿಳೆಯರು ಅಬಲೆಯರಲ್ಲ ಸಬಲರು:ಭಾರತಿ ವಸ್ತ್ರದ

ಬೀದರ:ಏ.6:ಮಹಿಳೆಯರು ಅಬಲೇಯರಲ್ಲ ಸಬಲರು ಅವರು ಕೂಡ ಪುರಷರಿಗೆ ಸರಿ ಸಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಬೀದರನ ಅಧ್ಯಕ್ಷರಾದ ಶೀಮತಿ. ಭಾರತಿ ವಸ್ತ್ರದ ಅವರು ನಗರದ ನೌಬಾದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜದಲ್ಲಿ ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದರು. ಮುಂದುವರೆದು ಮಹಿಳೆಯರಿಗೆ ಸಂವಿಧಾನಾತ್ಮಕ ಅನೇಕ ಸೌಲಬ್ಯಗಳು ಇವೆ ಅವೆಲ್ಲದರ ಸದುಪಯೋಗ ಮಾಡಿಕೊಂಡು ಮುಂದುವರೆದು ತಮ್ಮ ಗುರಿಯನ್ನು ತಲುಪಬೇಕು ಎಂದರು.
ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಅಗಮಿಸಿದ ಕಲಬುರಗಿ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ಮಾತನಾಡುತ್ತ ಇಂದಿನ ಯುವತಿಯರ ಮೇಲೆ ಗುರುತನರ ಜವಾಬ್ದಾರಿ ಇದೆ ಸ್ವತಂತ್ರ ಪೂರ್ವದಲ್ಲಿ ಸ್ತ್ರೀಯರಿಗೆ ಅಷ್ಷೊಂದು ಅವಕಾಶಗಳು ಇರಲಿಲ್ಲ ನಿಮ್ಮ ಮುಂದೆ ಅನೇಕ ಮಹಿಳಾ ಸಾಧಕಿಯರ ದೊಡ್ಡ ಪಟ್ಟನೇ ಇದೆ ಅದನ್ನು ತಾವು ವೀಕ್ಷಿಸಿ ತಮ್ಮ ಇತಿ ಮಿತಿಯೊಳಗೆ ತಾವು ಇರಬೇಕು. ಎಲ್ಲಕ್ಕಿಂತ ತಮ್ಮ ವ್ಯಕ್ತಿತ್ವ ಮುಖ್ಯಜಿವನದಲ್ಲಿ ಅನೇಕ ಕಷ್ಟ ನಷ್ಟಗಳು ಎದುರಾಗುತ್ತವೆ. ಆದರೆ ಎದುರಾಗುವ ಸಮಸ್ಯಗಳನ್ನು ಮೆಟ್ಟಿ ನಿಂತು ತಮ್ಮ ಗುರಿ ಸಾಧನೆಯುತ್ತ ದಾಪುಗಾಲು ಹಾಕಬೇಕಾಗಿದೆ ಎಂದರು.

ಸಮಾರಂಭದ ಅದ್ಯಕ್ಷತೆ ವಹಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ ಬೀದರನ ಪ್ರಾಂಶುಪಾಲರಾದ ಪೆÇ: ಜಯಶ್ರೀಪ್ರಭಾ ಅವರು ಮಾತನಾಡುತ್ತಾ ಮಹಿಳೆಯರು ಕೌಟಂಬಿಕ ಜವಾಬ್ದಾರಿಯೊಂದಿಗೆ. ಸಾಮಾಜಿಕ ಅನೇಕ ರಂಗಗಳಲ್ಲಿ ತಮ್ಮದೇ ಆದ ಬಾಪು ಮೂಡಿಸಿದ್ದಾರೆ ಹೆಣ್ಣು ಬರೀ
ಅಲಂಕಾರಿಕ, ಭೋಗದ ವಸ್ತುವಲ್ಲ, ಅವಳಿಗೂ ಪುರಷರ ಸರಿಸಮ ನಿಲ್ಲುವ ಎಲ್ಲ ಶಕ್ತಿ ಸಾಮಥ್ರ್ಯಗಳಿವೆ, ಸಾಧನೆಗೆ ಕೊನೆ ಇಲ್ಲ ಆದರೆ ಈ ಶರೀರಕ್ಕೆ ಕೊನೆ ಇದೆ ಎಂದರು, ಇಲ್ಲ ವಿದ್ಯಾರ್ಥಿನಿಯರು ತಮ್ಮಗೆ ಸಿಕ್ಕ ಅವಕಾಶಗಳು ಬಳಸಿಕೊಂಡು ಹೆತ್ತ ಮನೆಗೂ ಈ ಸಮಾಜಕ್ಕೂ ತಮ್ಮದೇ ಕಾಣಿಕೆ ನೀಡುವುದರ ಕಡೆ
ಚಿಂತಿಸಿ ಮುಂದೆ ಸಾಗಬೇಕಾಗಿದೆ. ಅಲ್ಲದೆ ಯುವತಿಯರು ಸರಿಯಾದ ವಸ್ತ್ರ ಸಂಹಿತೆ ಪಾಲನೆ ಮಾಡಬೇಕು , ಯುವಕರೊಂದಿಗೆ ತಮ್ಮ ಅಂತರ ಕಾಯ್ದುಕೋಳ್ಳಬೇಕು ತಮಗೆ ಯಾವುದೇ ತೊಂದರೆಯಾದರೆ ಪಾಂಶುಪಾಲರ ಇಲ್ಲ ಪೆÇೀಲಿಸ್ ಇಲಾಖೆ ಗಮನಕ್ಕೆ ತರಬೇಕು ಎಂದರು. ಹಾಗೂ ಅದ್ಯಕ್ಷಕರು,
ಸಮಾರಂಭದಲ್ಲಿ ಎಲ್ಲ ಅತಿಥಿಗಳು ಅಕ್ಷರದ ಅವ್ವ ಸಾವಿತ್ರಿಬಾಯಿ ಪೂಲೆಯವರ ಕೋಡುಗೆಯನ್ನು ಸ್ಮರಿಸಿ ಅವರಿಗೆ ನುಡಿನಮಗಳನ್ನು ಸಲ್ಲಿಸಿದರು.
ಆರಂಭದಲ್ಲಿಯೇ ಕಾರ್ಯಕ್ರಮದ ಸಂಚಾಲಕರಾದ ಡಾ. ಶೀಲಾ ಎನ್. ಎಸ್. ಅವರು ಮಹಿಳಾ ದಿನಾಚರಣೆ ಕಾರ್ಯಕ್ರಮದ ಕುರಿತು ಮಾತನಾಡುತ್ತ ಮಹಿಳೆಯರ ಸ್ಥಾನ ಮಾನದ ಅರಿವು ಮೂಡಿಸುವುದು ಕಾರ್ಯಕ್ರಮ ಇದಾಗಿದೆ. ಅಲ್ಲದೆ ಅವರ ಗುರಿ ಉದ್ದೇಶ ಹಾಗೂ ಅವರ ಜವಾಬ್ದಾರಿಗಳು ಮನನ ಮಾಡಿಕೋಳ್ಳುವ ಕಾರ್ಯಕ್ರಮ ಇದಾಗಿದೆ ಎಂದು ಕಾರ್ಯಕ್ರಮದಲ್ಲಿ ಸದರಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದೆ ವಿವಿಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತ್ತು ಅಲ್ಲದೆ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಅರ್ಜುಮಂದ ಅಜರ, ಡಾ. ರಾಜಕುಮಾರ ಆಲ್ಲೂರೆ, ಡಾ. ಸುಚಿತಾನಂದ ಮಲ್ಕಾಪೂರೆ ಉಪಸ್ಥಿತರಿದ್ದರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತ್ತರ ಸಿಬ್ಬಂದಿಗಳು ಹಾಜರಾಗಿದ್ದರು, ಡಾ. ಮಹಾದೇವಿ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು, ಪಾಳೇದ
ಮಹೇಶ್ವರಿ ವಂದಿಸಿದರು.