ಮಹಿಳೆಯರಿಗೆ ಹೆಚ್ಚು ಗೌರವ ಕೊಡಬೇಕು

ಚಿತ್ರದುರ್ಗ. ಮಾ.೧೪:ಮನೆಯಲ್ಲಿ ಗೃಹಿಣಿಯರಿಗೆ ತಾಯಂದಿರಿಗೆ ಹೆಣ್ಣು ಮಕ್ಕಳಿಗೆ ಕೆಲಸ ಎಷ್ಟಿದೆ ಎಂಬುದನ್ನು ತಿಳಿಯಲು ನಾವು ಮನೆಯಲ್ಲಿ ಕೆಲಸ ಮಾಡಿದಾಗ ಗೊತ್ತಾಗುತ್ತದೆ. ಮನೆಯಲ್ಲಿ ಒಂದು ಸಾಮಾನು ಬಿದ್ದಿದ್ದರೂ ಸಹ ನಾವು ಬಗ್ಗಿ ತೆಗೆದುಕೊಳ್ಳುವುದಿಲ್ಲ, ಅದೇ ಹೆಣ್ಣು ಮಕ್ಕಳು, ತಾಯಂದಿರುಗಳು ಎಷ್ಟು ಸಾರಿ ನಮಗೆ ಸಾಮಾನುಗಳನ್ನು ಬಗ್ಗಿ ತೆಗೆದುಕೊಂಡು ಬಂದು, ಸಮಾನದಾನದಿಂದ ಸಂಸಾರ ನಿಭಾಯಿಸುತ್ತಿರುತ್ತಾರೆ, ಆ ಸಮಾಧಾನ ನಾವು ಕಲಿತುಕೊಳ್ಳಬೇಕಾಗಿದೆ ಎಂದು ಶ್ರೀಮತಿ ಮೇಷ್ಟ್ರ ಬೋರಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಎನ್ ಎಸ್ ಮಹೇಶ್ ರವರು ಕರೆ ನೀಡಿದರು.ಅವರು ಚಿತ್ರದುರ್ಗಾ ನಗರದ ಸೀಕೆಪುರದ ಶ್ರೀಮತಿ ಮಾಸ್ಟರ್ ಬೋರಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ರೋಟರಾಕ್ಟ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನ  ಉದ್ಘಾಟಿಸಿ ಮಾತನಾಡುತ್ತಿದ್ದರು.ಹೆಣ್ಣು ಎಲ್ಲಿ ಗೌರವಿಸಲ್ಪಡುತ್ತಾಳೆ ಅಲ್ಲಿ ದೇವರು ನೆಲೆಸಿರುತ್ತಾನೆ, ಮಹಿಳಾ ದಿನಾಚರಣೆ ಯಶಸ್ವಿ ಆಗಬೇಕಾದರೆ ಮಹಿಳೆಯರಿಗೆ ಗೌರವ ಕೊಡಬೇಕು, ಹೆಣ್ಣು ದೀಪದಂತೆ ಉರಿದು ಬೇರೆ ಎಲ್ಲಾ ಕಡೆ ಬೆಳಕನ್ನು ಕೊಡುತ್ತಾಳೆ, ಹಿಂದೆ ಭಾರತ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಬಹಳಷ್ಟು ಗೌರವವಿತ್ತು, ಭಾರತೀಯ ನಾರಿಯ ವೇಶಭೂಷಣ ಗೌರವಪೂರ್ಣವಾಗಿತ್ತು, ಈಗ ಪಾಶ್ಚಿಮಾತ್ಯ ಸಂಸ್ಕೃತಿ ಬಂದಾಗನಿಂದ ಬದಲಾಗಿದೆ, ಸ್ವಲ್ಪ ಮಟ್ಟಿಗೆ ಅದು ಕಾಣೆಯಾಗುತ್ತಿದೆ. ಮಗುವನ್ನ ಸಾಕುವುದು, ಬೆಳೆಸುವುದು, ಶಿಕ್ಷಣ ಕೊಡುವುದು ಸಂಸ್ಕಾರ ಕೊಡುವುದು, ಮಹಿಳೆಯರಿಗೆ ಸುಲಭವಾದ ಕೆಲಸವಾಗಿದೆ.  ಇಂಥ ಮಹಿಳಾ ದಿನಾಚರಣೆಗಳು ನಿತ್ಯ ಉತ್ಸವವಾಗಬೇಕು, ಮಹಿಳೆಯರಿಗೆ ಉತ್ತಮವಾದ ಸ್ಥಾನಮಾನಗಳು ಸಿಗಲಿ ಎಂದು ಆಶಿಸಿದರು.