ಕೋಲಾರ,ಸೆ,೨೭- ತಾಲ್ಲೂಕಿನ ವಕ್ಕಲೇರಿ ಶ್ರೀಶಕ್ತಿ ವಿನಾಯಕ ಭಕ್ತ ಮಂಡಳಿ ವತಿಯಿಂದ ಗ್ರಾಮದಲ್ಲಿ ಹಿಮಾಲಯ ಪರ್ವತದಲ್ಲಿ ಶಿವಲಿಂಗ ಹೊತ್ತ ಗಣಾಧಿಪತಿ ಶಿವಗಣಪನ ಮೂರ್ತಿಯನ್ನು ಪ್ರತಿಷ್ಟಾಪಿಸಿ ವಿಶಿಷ್ಟ ರೀತಿಯಲ್ಲಿ ವಿನಾಯಕೋತ್ಸವ ಆಚರಿಸಲಾಯಿತು,
ಅದರ ಅಂಗವಾಗಿ ಸೆ.೨೬ರಂದು ಗೌರಿಪೂಜೆ, ಸುಮಂಗಲಿ ಪೂಜೆ ಅಂಗವಾಗಿ ಮಹಿಳೆಯರಿಗೆ ಹರಿಸಿನ ಕುಂಕುಮ ಬಳೆ ವಿತರಿಸುವ ಕಾರ್ಯಕ್ರಮ ಮತ್ತು ಸಂಗೀತ ರಸಂಸಂಜೆ ಕಾರ್ಯಕ್ರಮ ನಡೆದಿದ್ದು, ಗೌರಿ ಮಾತೆಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ವಕ್ಕಲೇರಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.