ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿ

ಬೆಂಗಳೂರು, ಏ. ೫- ರಾಜ್ಯದಲ್ಲೇ ಅತಿ ದೊಡ್ಡ ಹೈಪರ್ ಮಾರ್ಕೆಟ್‌ಗಳಲ್ಲಿ ಒಂದಾದ ಲುಲು ಹೈಪರ್ ಮಾರ್ಕೆಟ್ ಮಹಿಳೆಯರು ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ತರಬೇತಿ ನೀಡಿದೆ ನಗರದ ರಾಜಾಜಿನಗರದ ಲುಲು ಹೈಪರ್ ಮಾರ್ಕೆಟ್‌ನಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಲುಲು ಪ್ರಾದೇಶಿಕ ಮುಖ್ಯಸ್ಥ ಫಹಾಜ್ ಅಶ್ರಫ್ ಉದ್ಘಾಟಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು ೪೦ ಮಹಿಳೆಯರು ಭಾಗವಹಿಸಿದ್ದರು. ಡಿ ೧ ಸೆಕ್ಯೂರಿಟಿ ಸರ್ವೀಸ್‌ನ ಸಿಇಓ ಹಾಗೂ ಮಾಜಿ ಎನ್‌ಎಸ್‌ಜಿ ಕಮಾಂಡೋ ಪ್ರೇಮ್, ಸಿಒಒ ಕವಿತಾ, ಮಾಜಿ ಕರ್ನಲ್ ಮಂಜಿತ್, ಉನ್ನಿತಾನ್ ಅವರು. ಬಾಲಕಿಯರು ಮತ್ತು ಮಹಿಳೆಯರಿಗೆ ಆತ್ಮರಕ್ಷಣೆ ಕುರಿತು ತರಬೇತಿ ನೀಡಲಾಯಿತು.
ಜನರಲ್ ಮ್ಯಾನೇಜರ್ ಮದನ್ ಕುಮಾರ್, ವಾಣಿಜ್ಯ ಮುಖ್ಯಸ್ಥ ಸೈಯದ್ ಆಥಿಕ್, ಹಣಕಾಸು ವ್ಯವಸ್ಥಾಪಕಮೂರ್ತಿ, ಮಾನವ ಸಂಪನ್ಮೂಲ ವ್ಯವಸ್ಥಾಪಕ ಸಿರಾಜ್, ಲುಲು ಮಾಲ್ಸ್ ಜನರಲ್ ಮ್ಯಾನೇಜರ್ ವಿಕಾಸ್ ಶೆಟ್ಟಿ, ವ್ಯವಸ್ಥಾಪಕ ಪಾರ್ಥಿಬನ್, ಸುನಿಲ್, ಎಹ್ತಿಶಮ್, ಸಂಜೀವ್‌ಗೌಡ, ಭರತ್, ಜೋಶಿ, ಈ ಶಿಬರವನ್ನು ಭದ್ರತಾ ವ್ಯವಸ್ಥಾಪಕ ಅಬ್ದುಲ್ ಜಬ್ಬರ್ ಹೀಮ್ ಗುಲ್ಜಾರ್ ಅಹ್ಮದ್ ಆಯೋಜಿಸಿದ್ದರು.