
ಶಹಾಪೂರ:ಆ.5:ಸಹಕಾರಿ ಕ್ಷೇತ್ರದ ಪ್ರಗತಿ ಮತ್ತು ಬೆಳವಣಿಗೆ ಹೊಂದಲು ಮಹಿಳೆಯರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಸಹಕಾರಿ ಯುನಿಯನ್ನಿನ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ ಹಾಗೂ ಯಾದಗಿರಿ ಜಿಲ್ಲಾ ಸಹಕಾರಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಮಹಿಳಾ ಕ್ಲಸ್ಟರ್ ತರಬೇತಿ ಉದ್ಘಾಟಿಸಿ ಮಾತನಾಡಿದ ಯಾದಗಿರಿ ಜಿಲ್ಲಾ ಸಹಕಾರಿ ಒಕ್ಕುಟದ ವೃತ್ತಿಪರ ನಿರ್ದೇಶಕರಾದ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದರ ಮೂಲಕ ತಾವು ಸಹಕಾರಿಗಳಾಗಬೇಕು ಇಂದು ಅನೇಕ ಸಹಕಾರಿ ಸಂಘಗಳು ಮಹಿಳೆಯರಿಗಾಗಿ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ ಮತ್ತು ಐನುಗಾರಿಕೆ ಸೇರಿದಂತೆ ಸ್ವಯಂ ಉದ್ಯೋಗಕೈಗೊಳ್ಳಲು ತರಬೇತಿ ಮತ್ತು ಆರ್ಥಿಕ ಸಹಕಾರ ನಿಡುತ್ತಿದ್ದು, ಅವುಗಳ ಸಹಕಾರ ಪಡೆದುಕೊಳ್ಳಬೇಕು ಎಂದು ಹೇಳಿದರು. ಎನ್.ಸಿ.ಯು.ಐ ಕಲಬುರಗಿಯ ಯೋಜನಾ ಅಧಿಕಾರಿಗಳಾದ ಎಸ್.ಜಿ ರಾಮಚಂದ್ರ ಅವರು ತರಬೇತಿ ನೀಡಿದರು. ಜಿಲ್ಲಾ ಸಹಕಾರ ಶಿಕ್ಷಕಿ ಸುಜಾತ ಮಠ ಕಾರ್ಯಕ್ತಮದ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಗಳಾದ ಭೀಮಣ್ಣ ಮಾಲಗತ್ತಿ, ಮಲ್ಲಿಕಾರ್ಜುನ ಬಾದ್ಯಾಪೂರ, ಮಲ್ಲಿಕಾರ್ಜುನ ಮುಧೋಳ, ಸ್ವಾಮಿ ವೇದಿಕೆಮೇಲಿದ್ದರು, ಅಮರೇಶ ಮುಷ್ಟಳ್ಳಿ ಸ್ವಾಗತಿಸಿ ವಂದಿಸಿದರು.