ಕರಜಗಿ:ಸೆ.21:ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಆಗಿರುವುದಕ್ಕೆ ಅಫಜಲಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಸದಸ್ಯೆ ಶಿಲ್ಪಾ ಭೀಮಾಶಂಕರ ಪೂಜಾರಿ ಅವರು ಸ್ವಾಗತಿಸಿದ್ದಾರೆ. ಈ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿದ ಮಹಿಳಾ ಮೀಸಲಾತಿ ಮಾಡಿರುವುದು ಸಂತೋಷದ ವಿಚಾರ.ಇಡೀ ದೇಶವೇ ಹೊಸ ಯುಗಕ್ಕೆ ಸಾಕ್ಷಿಯಾಗಿದೆ.
ಇದೊಂದು ಅದ್ಭುತ ಕಲ್ಪನೆಯಾಗಿದೆ.ಇದೆಲ್ಲವೂ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ಸರ್ಕಾರದ ಚಿಂತನೆಯಾಗಿದೆ.ಇದು ಮಹಿಳೆಯರ ಸಮಯ. ಸ್ವಾತಂತ್ರ್ಯ ಪೂರ್ವದಲ್ಲಿ ಸರೋಜನಿ ನಾಯ್ಡು ಅವರು ಹೋರಾಟ ಮಾಡಿದ್ದರು.ಸದ್ಯ ಪ್ರದಾನಿ ಮೋದಿ ಅವರು ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದಾರೆ.2010 ರಲ್ಲಿ ಸಂಸತ್ ನಲ್ಲಿ ಚರ್ಚೆಯಾಗಿತ್ತು.
ಇಂದು ಮೋದಿ ಅವರು ಮಹಿಳೆಯರಿಗೆ ಒಳ್ಳೆಯ ಸ್ಥಾನವನ್ನು ಕೊಟ್ಟಿದ್ದಾರೆ. ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.