ಮಹಿಳೆಯರಿಗೆ ಶಕ್ತಿ ನೀಡಿದ ಶಕ್ತಿ ಯೋಜನೆ: ಡಾ.ಭಾಗ್ಯಶ್ರೀ ಎಸ್ ಪಾಟೀಲ್ :ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಸೇಡಂನ ಮಹಿಳೆಯರು

ಸೇಡಂ,ಜೂ,12: ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಿ ಕೆಲಸ ಮಾಡುವಂತಹ ಬಡ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದಿನಿಂದ ಮಹಿಳೆಯರಿಗೆ ಶಕ್ತಿ ನೀಡಿದೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಧರ್ಮಪತ್ನಿ ಶ್ರೀಮತಿ ಭಾಗ್ಯಶ್ರೀ ಎಸ್ ಪಾಟೀಲ್ ಹೇಳಿದರು. ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ನೀಡುತ್ತಿರುವ ಅಂಗವಾಗಿ ಪಟ್ಟಣದ ಬಸ್ ಸ್ಟ್ಯಾಂಡ್ ನಲ್ಲಿ ಶಕ್ತಿ ಯೋಜನೆಗೆ ಆಧಾರ್ ಕಾರ್ಡ್ ನೀಡಿ ಉಚಿತ ಬಸ್ ಟಿಕೆಟ್ ಪಡೆಯುವುದರ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಹಿಳೆಯರು ಹೆಚ್ಚಿನ ಸಂತೋಷದಿಂದ ಕೆಲಸ ಕಾರ್ಯಗಳು ಮಾಡುವುದರ ಜೊತೆಗೆ ಗೃಹಲಕ್ಷ್ಮಿ ಯೋಜನೆ, ಸೇರಿದಂತೆ ಇನ್ನಿತರ ಯೋಜನೆಗಳು ಹಣ ಸಂಗ್ರಹಿಸುವಲ್ಲಿ ಮಹಿಳೆಯರು ಎತ್ತಿದ ಕೈ ಎಂದು ಅಭಿಪ್ರಾಯಪಟ್ಟರು.ಈ ವೇಳೆಯಲ್ಲಿ ತಹಸಿಲ್ದಾರ್ ಶಿವರಾಜ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಥೋಡ್ ಸಿಪಿಐ ಸಂದೀಪಸಿಂಗ್ ಮುರಗೋಡ, ಪುರಸಭೆ ಮುಖ್ಯಾಧಿಕಾರಿ ಗ್ವಾಲೇಶ್ ಹೊನ್ನಳ್ಳಿ, ಸಚಿವರ ಸಹೋದರ ಬಸವರಾಜ್ ಪಾಟೀಲ್ ಊಡಗಿ, ವಿಶ್ವನಾಥ್ ಪಾಟೀಲ್ ಕುಕುಂದಾ, ಅಬ್ದುಲ್ ಕಪೂರ್, ಹೇಮರೆಡ್ಡಿ ಪಾಟೀಲ್, ಅಶೋಕ್ ಸಾಹು, ಹಾಜಿ ನಾಡೇಪಲ್ಲಿ ಸತೀಶ್ ಪೂಜಾರಿ, ರುದ್ರುಪಿಲ್ಲಿ, ಅನಂತಯ್ಯ ಮುಸ್ತಾಜರ್, ಸತ್ತರ್ ನಾಡೇಪಲ್ಲಿ, ಗೋಪಾಲ್ ರಾಥೋಡ್, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಯಾಕಾಪೂರ, ಶೋಭಾ ವಾಲಿಕಾರ, ಬಸಮ್ಮ ಪಾಟೀಲ್, ಜಯಶ್ರೀ ಚವ್ಹಾಣ, ವೀರಮ್ಮ ಪಾಟೀಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.


ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಮಹಿಳೆಯರ ಪರವಾಗಿ ಅಭಿನಂದನೆಗಳ ಸಲ್ಲಿಸುತ್ತೇನೆ.

ಬಸವರಾಜ್ ಪಾಟೀಲ್ ಊಡಗಿ
ಕಾಂಗ್ರೆಸ್ ಹಿರಿಯ ಮುಖಂಡರು ಸೇಡಂ


ನುಡಿದಂತೆ ನಡೆಯುವ ಸರಕಾರ ಅದರಂತೆ ನಮ್ಮ ಪ್ರಣಾಳಿಕೆಯಂತೆ ಇಂದು ಮುಖ್ಯಮಂತ್ರಿಗಳು ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯ ಶಕ್ತಿ ತುಂಬುವ ಶಕ್ತಿ ಯೋಜನೆಗೆ ಚಾಲನೆ ನೀಡು ಮೊದಲನೇ ಗ್ಯಾರೆಂಟಿ ಆರಂಭಿಸಿದ್ದಾರೆ ಸಮಸ್ತ ಮಹಿಳೆಯರ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ವಿಶ್ವನಾಥ್ ಪಾಟೀಲ್ ಕುಕುಂದಾ
ಕಾಂಗ್ರೆಸ್ ಹಿರಿಯ ಮುಖಂಡರು


ರಾಜ್ಯ ಸರ್ಕಾರದ ಶಕ್ತಿ ಯೋಜನೆ ರಾಜ್ಯದ ಮಹಿಳೆಯರಿಗೆ ಬಲ ತುಂಬಿತು ಅದರಂತೆ ಇದರ ಸದುಪಯೋಗ ಪ್ರತಿಯೊಬ್ಬ ಮಹಿಳೆಯರು ಪಡೆದುಕೊಳ್ಳಬೇಕು ಆರ್ಥಿಕವಾಗಿ ಅಭಿವೃದ್ಧಿಗೆ ಮಹತ್ವ ನೀಡಿ ಸರ್ಕಾರ.

ಶಿವರಾಜ್ ತಹಸಿಲ್ದಾರರು ಸೇಡಂ


ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಇಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದ್ದು ಪ್ರತಿ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಶಂಕರ್ ರಾಥೋಡ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೇಡಂ


ಶಕ್ತಿ ಯೋಜನೆ ಪ್ರತಿಯೊಬ್ಬ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯಾಗಿದ್ದು ಇದರ ಸದುಪಯೋಗಕ್ಕೆ ಸರ್ಕಾರದ ನಿಯಮದಂತೆ ಆಧಾರ್ ಕಾರ್ಡ್ ಇನ್ನಿತರ ಐಡಿ ಕಾರ್ಡ್ ಗಳು ಇಟ್ಟುಕೊಂಡು ಪ್ರಯಾಣಿಸಬಹುದು ಅದರ ಜೊತೆಗೆ ಗ್ರಾಮ ಕೇಂದ್ರದಲ್ಲಿ ಶಕ್ತಿ ಕಾರ್ಡ್ ಪಡೆಯಲು ಅವಕಾಶವಿದೆ.

ಯೋಗಿನಾಥ್ ಸರಸಂಬಿ
ಬಸ್ ಘಟಕ ವ್ಯವಸ್ಥಾಪಕರು ಸೇಡಂ


ಕಾಂಗ್ರೆಸ್ ಸರ್ಕಾರ ಬಡ ಬಗ್ಗರ ಮಹಿಳೆಯರ ಪರವಾಗಿ ಇರುವಂತ ಸರ್ಕಾರವಾಗಿದೆ ಅವರು ಅಂದುಕೊಂಡಿದ್ದು ಸಾಧಿಸಿ ತೋರಿಸುವಂತಹ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದೆ, ಇಂದು ಶಕ್ತಿ ಯೋಜನೆ ಚಾಲನೆ ನೀಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯದ ಮುಖ್ಯಮಂತ್ರಿಗಳಿಗೆ ಉಪಮುಖ್ಯಮಂತ್ರಿಗಳಿಗೆ ಸಾರಿಗೆ ಸಂಸ್ಥೆಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇವೆ.
ಸೇಡಂ ಮಹಿಳೆಯರ ಅಭಿಪ್ರಾಯ.