ಮಹಿಳೆಯರಿಗೆ ವೃತ್ತಿಪರ ಶಿಕ್ಷಣ ಅಗತ್ಯ

ಬೆಂಗಳೂರು,ಮಾ.೧೨: ಮಹಿಳೆಯರಿಗೆ ವೃತ್ತಿಪರ ಶಿಕ್ಷಣಗಳನ್ನು ನೀಡಿದರೆ ಮಹಿಳೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಿಂಗನಾಯಕನಹಳ್ಳಿ ರೈತಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್ ಅಭಿಪ್ರಾಯಪಟ್ಟರು.
ಸ್ನೇಹಲೋಕ ಲೇಡಿಸ್ ಕ್ಲಬ್‌ವತಿಯಿಂದ ಮಾರಸಂದ್ರದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ‘ಮಹಿಳಾ ಉತ್ಸವದಲ್ಲಿ ಮಾತನಾಡಿದ ಅವರು, ಮಹಿಳೆಯರು ಅಬಲೆಯರಲ್ಲ.ಪ್ರಸಕ್ತ ದಿನಗಳಲ್ಲಿ ಎಲ್ಲಾ ರಂಗದಲ್ಲೂ ಮುಂಚೂಣೊಯಲ್ಲಿದ್ದೇವೆ. ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. ಮಹಿಳೆಯರಿಗೆ ವೃತ್ತಿಪರ ಶಿಕ್ಷಣ ನೀಡಿದಾಗ ಸ್ವಾವಲಂಬಿ ಬದುಕು ಸಾಧ್ಯ ಎಂದರು. ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಆದ್ಯತೆ ನೀಡಿದೆ. ರಾಜಕೀಯದಲ್ಲಿ ಶೇ೫೦ ಭಾಗ ಸಿಕ್ಕಿದೆ. ಮುಂದಿನ ವರ್ಷಗಳಲ್ಲಿ ವಿಧಾನಸಭೆಯಲ್ಲೂ ಶೇ೩೩ ಭಾಗ ಮಹಿಳೆಯರಿಗೆ ಮೀಸಲಾತಿ ನೀಡಿರುವುದು ಶ್ಲಾಘನೀಯ.ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.
ವಿಶ್ವವಾಣಿ ಫೌಂಡೇಶನ್‌ವತಿಯಿಂದ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಟೈಲರಿಂಗ್, ಬ್ಯೂಟಿಷಿಯನ್ ಸೇರಿದಂತೆ ಇನ್ನಿತರ ತರಬೇತಿಗಳನ್ನು ಆಯೋಜಿಸುತ್ತಿದೆ.ತರಬೇತಿ ಪಡೆದವರಿಗೆ ಟೈಲರಿಂಗ್ ಯಂತ್ರ ವಿತರಿಸಲಾಗುತ್ತಿದೆ. ಜೊತೆಗೆ ಸರ್ಕಾರದ ಸಾಲಸೌಲಭ್ಯ ನೀಡಲಾಗುತ್ತಿದೆ. ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಹಿಳೆಯರಿಗೆ ತಿಳಿಸಿದರು.
ಈ ವೇಳೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಕಡತನಮಲೆ ಸತೀಶ್, ಜಿಎಎಸ್‌ಎಸ್ ಕಾರ್ಯನಿರ್ವಾಹಕ ನಿರ್ದೇಶಕಿ ಅಮಲಿನಾಯಕ್, ಮಕ್ಕಳ ಕಲ್ಯಾಣ ಸಮಿತಿ ಬೆಂ.ಗ್ರಾ.ಜಿಲ್ಲಾಧ್ಯಕ್ಷ ಹೆಚ್.ರಾಮು ಜೋಗಿಹಳ್ಳಿ, ವಿದ್ಯಾಗೋಕುಲ ಚಾರಿಟಬಲ್ ಟ್ರಸ್ಟ್ ರೂಪ.ಎಂಎಸ್, ವಿವಿಧ ಕ್ಷೇತ್ರದ ಸಾಧಕಿಯರಾದ ಲೀಲಾವತಿ ಆರ್.ಎನ್, ಸುಜಾತಮ್ಮ, ಉಮಾದೇವಿ, ಮೋನಿಷಾ, ಅರಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಉಪಾಧ್ಯಕ್ಷೆ ಪದ್ಮಾಮುನಿಕೃಷ್ಣ, ಸ್ನೇಹ ಲೋಕ ಲೇಡಿಸ್ ಕ್ಲಬ್ ಅಧ್ಯಕ್ಷೆ ಉಷಾದೇವಿ ಹಾಗೂ ಪದಾಧಿಕಾರಿಗಳು, ಬಿಜೆಪಿ ಮುಖಂಡ ಮುನಿದಾಸಪ್ಪ ಸೇರಿ ಪ್ರಮುಖರಿದ್ದರು.