ಮಹಿಳೆಯರಿಗೆ ಮುಕ್ತ ಅವಕಾಶ ದೊರೆತಲ್ಲಿ ದೇಶ ಅಭಿವೃದ್ಧಿ


ಸಂಜೆವಾಣಿ ವಾರ್ತೆ
ಸಂಡೂರು:ಅ: 20:  ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಮುಗಿದರೂ ಸಹ ನಾವು ನಮ್ಮ ಹೆಣ್ಣುಮಕ್ಕಳನ್ನು ಮುಕ್ತವಾಗಿ ಕೆಲಸ ಮಾಡಲು ಬಿಡಲಿಲ್ಲ, ಬಿಟ್ಟಿದ್ದರೆ ಜಪಾನಂತಹ ರಾಷ್ಟ್ರದಂತೆ ಮುಂದುವರೆದ ರಾಷ್ಟ್ರವಾಗುತ್ತಿತ್ತು ಎಂದು ತಾಲೂಕಿನ ಯಶವಂತನಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಸಿದ್ದರಾಮೇಶ್ವರ ಸ್ವಾಮಿಗಳು ತಿಳಿಸಿದರು.
ಅವರು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಅರ್.ಪಿ.ಸಿ.ಎಲ್. ಕಂಪನಿಯವತಿಯಿಂದ ಉಚಿತವಾಗಿ ಮಹಿಳೆಯರಿಗೆ ಟೈಲರಿಂಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈಗ ಕಂಪನಿಗಳು, ಕುಟುಂಬದವರು ಮಹಿಳೆಯರಿಗೆ ಅವಕಾಶಗಳನ್ನು ನೀಡಿ ಮಹಿಳೆಯರು ಕೆಲಸ ಮಾಡಲು ಪ್ರಾರಂಭಿಸಿದ ಪರಿಣಾಮ ಕುಟುಂಬ ದೇಶ ಬೆಳೆದು ಬಲಿಷ್ಠವಾಗುತ್ತಿದೆ, ಅದ್ದರಿಂದ ಗ್ರಾಮದಲ್ಲಿ ಮಹಿಳೆಯರಿಗೆ ಬಿಕೆಜಿ ಕಂಪನಿಯ ಸಂಸ್ಥೆಯಾದ ಅರ್.ಪಿ.ಸಿ.ಎಲ್. ಘಟಕದಿಂದ ಉಚಿತವಾಗಿ ಮಹಿಳೆಯರಿಗೆ 6 ತಿಂಗಳಕಾಲ ಟೈಲರಿಂಗ್ ತರಬೇತಿಯನ್ನು ನೀಡುತ್ತಿದ್ದು ಸ್ತ್ರೀ ಸ್ವಾವಲಂಬಕ್ಕೆ ತಂದ ಬಹುದೊಡ್ಡ ಯೋಜನೆಯಾಗಿದೆ, ಅಲ್ಲದೆ ಈ ಸಂಸ್ಥೆ ಯಶವಂತನಗರ ಗ್ರಾಮದ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿದೆ, ಇಂತಹ ಕಾರ್ಯಗಳು ಹೆಚ್ಚು ನಡೆಯಬೇಕು, ಕಾಯಕದ ಮೇಲೆ ವಿಶ್ವಾಸವಿಟ್ಟರೆ ಅನ್ನ, ಆರೋಗ್ಯ, ಶಿಕ್ಷಣ ಸಾಧ್ಯ, ಅವರೇ ಸತ್ಯ ಕಾಯ ಮಾಡುವವರು ಶರಣರು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೂಸೂಫ್ ಮಾತನಾಡಿ ತರಬೇತಿಯಲ್ಲಿ ಮಹಿಳೆಯರು ಭಾಗಿಯಾಗುವ ಮೂಲಕ ಉತ್ತಮವಾಗಿ ಕಲಿತು ಮನೆಗೆ ದುಡಿಯುವ ವ್ಯಕ್ತಿಯಾದಾಗ ಅ ಕುಟುಂಬ ಅರ್ಥಿಕವಾಗಿ ಸಬಲವಾಗುತ್ತದೆ ಎಂದರು. ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹೆಚ್.ಮಲಿಯಪ್ಪ ಮಾತನಾಡಿ ಬಿಕೆಜಿ ಕಂಪನಿಯು ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಅವುಗಳನ್ನು ಬಳಸಿಕೊಂಡು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ, ವೈಯಕ್ತಿಕ ಪ್ರಗತಿಯ ಜೊತೆಗೆ ಗ್ರಾಮದ ಪ್ರಗತಿಯೂ ಅಗುತ್ತದೆ, ಪ್ರಮುಖವಾಗಿ ಬೀದಿ ದೀಪ, ಶುದ್ದಕುಡಿಯುವ ನೀರಿನ ಘಟಕ, ಮಠದ ಅಭಿವೃದ್ದಿ ಮಹಿಳೆಯರ ಪ್ರಗತಿಗೆ ಅತಿ ಹೆಚ್ಚು ಸಹಾಯ ಮತ್ತು ಸಹಕಾರವನ್ನು ನೀಡುತ್ತಿರುವು ಉತ್ತಮವಾದುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾಪರಶುರಾಮಪ್ಪ, ಅರ್.ಪಿ.ಸಿ.ಎಲ್. ಕಂಪನಿಯ ಅಧಿಕಾರಿಗಳಾಧ ನರೇಂದ್ರಬಾಬು, ರಾಜಶೇಖರ ಬೆಲ್ಲದ್, ರಮೇಶ್, ಇವರು ಮಾತನಾಡಿದರು. ಟೈಲರಿಂಗ್ ಮಹತ್ವವನ್ನು ಎ.ಎಂ. ಶಿವಮೂರ್ತಿ ಸ್ವಾಮಿ ಉದಾಹರಣೆ ಸಮೇತವಾಗಿ ಅದರ ಲಾಭವನ್ನು ವಿವರಿಸಿ ಬಿಕೆಜಿ ಸಂಸ್ಥೆ ಈಗಾಗಲೇ ಧರ್ಮಾಪುರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿ ಉತ್ತಮ ಸ್ವಾವಲಂಬಿಗಳನ್ನಾಗಿಸಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಸುರೇಶ್, ತಿಪ್ಪೇಸ್ವಾಮಿ, ಬುಡೇನ್ ಸಾಬ್, ಷಾಹಜಾದೀ ಬೇಗಂ, ಹೆಚ್.ಮಲಿಯಪ್ಪ, ಜಿ. ಅಬ್ದುಲ್‍ನಬಿ, ಎನ್. ಓಬಳೇಶ್, ರಾಜಭಕ್ಷಿ, ಶರ್ಮಸ್‍ವಲಿ  , ಸೂರ್ಯಪ್ರಕಾಶ್, ಎಸ್. ತಿಪ್ಪೇಸ್ವಾಮಿ, ಬಷೀರ್ ಅಹ್ಮದ್, ಸೂರಯ್ಯ, ಹಾಗೂ 40 ಮಹಿಳೆಯರು ತರಬೇತಿ ಪಡೆಯಲು ಅಗಮಿಸಿದ್ದರು.
 ಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಗೋಪಾಲ್ ಹೆಚ್.ಅರ್. ಸ್ವಾಗತಿಸಿ, ನಿರೂಪಿಸಿ ವಂದಿಸಿದರು.