ಮಹಿಳೆಯರಿಗೆ ಗೌರವ ನೀಡಿ

ಚಿಂಚೋಳಿ,ಮಾ.19-ಪಟ್ಟಣದ ಚಂದಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಕೋವಿಡ್-19 ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಚಿಂಚೋಳಿಯ ಹಿರಿಯ ಶ್ರೇಣಿ ನ್ಯಾಯಧೀಶ ವಿಜಯಕುಮಾರ ಜಟಲಾ ಅವರು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ ಭಾರತದಲ್ಲಿ ಮಹಿಳೆಯರಿಗೆ ಪುರುಷರಂತೆ ಸಮಾನತೆ, ಮೀಸಲಾತಿಯನ್ನು ನೀಡಲಾಗಿದ್ದು, ದೇಶದಲ್ಲಿ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯದ ಹಕ್ಕಿದೆ ಅದರ ಉಪಯೋಗ ಪಡೆದುಕೊಳ್ಳಬೇಕು ಮಳೆಯರಿಗಾಗಿ ಸರಿಸಮಾನವಾಗಿ ಹಕ್ಕು ಸಿಗಲಿ ಎಂದು ಪ್ರತಿ ವರ್ಷ ಮಾ.8 ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಇದರ ದುರುಪಯೋಗ ಪಡೆದುಕೊಳ್ಳಬೇಕು. ಕಾನೂನು ಉಲ್ಲಂಘನೆ ಮಾಡಬಾರದು. ಮಹಿಳೆ ಮನೆ ಸ್ವರ್ಗ ಮಾಡುತ್ತಾಳೆ. ಮಹಿಳೆಗೆ ಗೌರವ ನೀಡಿ ಮಹಿಳೆಯರಿಗೆ ಸ್ವಾತಂತ್ರ್ಯವಿದೆ. ದೇಶದಲ್ಲಿ ಅನೇಕ ಮಹಿಳೆಯರು ಪುರುಷರಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ದೇಶದ ಎಲ್ಲಾ ಮಹಾ ಗಣ್ಯರಿಗೆ ಜನ್ಮ ನೀಡಿದವರು ಮಹಿಳೆಯರು. ಹೆತ್ತು ಹೊತ್ತು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಂಪೂರ್ಣ ಪೋಷಣೆ ನೀಡುವವಳು ತಾಯಿ. ಆದ್ದರಿಂದ ನಾವು ಎಲ್ಲರೂ ಕೂಡ ಮಹಿಳೆಯರಿಗೆ ಗೌರವವನ್ನು ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ. ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರೇಮ ಕುಮಾರ, ಚಿಂಚೋಳಿಯ ನ್ಯಾಯಾಲಯದ ಎಪಿಪಿಗಳಾದ ಶಾಂತಕುಮಾರ .ಜಿ. ಪಾಟೀಲ, ಬಾಬಾಸಾಬ .ಎಸ್. ಕಣ್ಣಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನೀಲಕುಮಾರ ರಾಠೋಡ, ಶಿಶು ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ತಾಲೂಕಾ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ ಅಧ್ಯಕ್ಷೆ ನರಸಮ್ಮ ಲಕ್ಷ್ಮಣ ಆವುಂಟಿ, ಪಿಯು ಕಾಲೇಜ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಮೂರ, ಚಿಂಚೋಳಿಯ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಹನುಮಂತ ಹಿರೇಮನಿ, ನ್ಯಾಯವಾದಿಗಳಾದ ವಿಶ್ವನಾಥ ಬೆಂಕಿನ, ವೀರಶೆಟ್ಟಿ ದೇಶಮುಖ, ಚಂದ್ರಶೇಖರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.