(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.11: ನಗರದ ಹೊಸ ಬಸ್ ನಿಲ್ದಾಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಹಿಳೆಯರು ರಾಜ್ಯದಲ್ಲಿನ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುವ ಶಕ್ತಿ ಯೋಜನೆಗೆ, ಅಲ್ಲದೆ ಆರು ಹೊಸ ಬಸ್ ಗಳಿಗೂ ಈ ಸಂದರ್ಭದಲ್ಲಿ ಚಾಲನೆ ನೀಡಿದರು.
ನಗರ ಶಾಸಕ ಭರತ್ ರೆಡ್ಡಿ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಡಾ.ಸೈಯ್ಯದ ನಾಸೀರ್ ಹುಸೇನ್ ಪವನ್ ಕುಮಾರ್ ಮಾಲಪಾಟಿ, ಹೆಚ್ಚುವರಿ ಎಸ್ಪಿ ನಟರಾಜ್, ಉಪ ಮೇಯರ್ ಜಾನಕಿ,
ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ವಿವೇಕ್, ವಿ.ಕುಬೇರ್, ಮಾಜಿ ಮೇಯರ್ ರಾಜೇಶ್ವರಿ, ಮುಖಂಡರುಗಳಾದ ಎ.ಮಾನಯ್ಯ, ಶಿವರಾಜ್ ಹೆಗಡೆ, ಕಮಲಮ್ಮ, ಪಿ.ಜಗನ್ನಾಥ, ವಿಷ್ಣು ಬೋಯಪಾಟಿ, ಮುಂಡ್ರಿಗಿ ನಾಗರಾಜ್, ಪಕ್ಷದ ಜಿಲ್ಲಾ ಅಧ್ಯಕ್ಷೆ ಮಂಜುಳ,
ಬಳ್ಳಾರಿ ವಿಭಾಗದ ಡಿಸಿ ದೇವರಾಜ್ ಮೊದಲಾದವರು ಇದ್ದರು.
ಡಿ.ಕಗ್ಗಲ್ಲು ದೊಡ್ಡ ಬಸವ ಗವಾಯಿ ಮತ್ತವರ ತಂಡ ಪ್ರಾರ್ಥನೆ ಮಾಡಿತು.
ವೇದಿಕೆ ಮೇಲೆ ಪ್ರೋಟೋ ಕಾಲ್ ?:
ಸರ್ಕಾರದ ಪ್ರೊಟೋಕಾಲ್ ಇಲ್ಲದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಪಾಲಿಕೆ ಸದಸ್ಯರ ಪತಿಯಂದಿರು ಒಟ್ಟಾರೆ ಶಾಸಕರು, ಸಚಿವರು ತಮಗ್ಯಾರು ಬೇಕು ಅವರನ್ನು ಕರೆದು, ಕರೆದು ವೇದಿಕೆ ಮೇಲೆ ಕೂರಿಸಿಕೊಂಡರು.
ಈ ಹಿಂದೆ ವಿಮ್ಸ್ ನಲ್ಲಿ ಪ್ರೊಟೋ ಕಾಲ್ ಎಂದು ಇದೇ ಡಿಸಿ ಪವನ್ ಕುಮಾರ್ ಮಾಲಪಾಟಿ ಅವರು ಆ ದಿನ ಮೇಯರ್ ರಾಜೇಶ್ವರಿ ಅವರ ಪತಿ ಸುಬ್ಬರಾಯಡು ಸೇರಿದಂತೆ ಹಲವರನ್ನು ವೇದಿಕೆಯಿಂದ ಕೆಳಗೆ ಇಳಿಸಿ ಕಳಿಸಿದ್ದರು. ಆದರೆ ಇಂದು ಅದೇ ಡಿಸಿ ಅವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು.
ಮತ್ತೊಂದೆಡೆ ವೇದಿಕೆ ಮೇಲೆ ಕುಳಿತಿದ್ದ ಕಾಂಗ್ರೆಸ್ ನ ಮಾಜಿ ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀ ಅವರನ್ನು ವೇದಿಕೆಯಿಂದ ಎಬ್ಬಿಸಿದ್ದರಿಂದ ಅವರು ಸಿಟ್ಟಾಗಿ ಹೊರ ನಡೆದರು.
ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಳ್ಳಾರಿ ವಿಭಾಗದಲ್ಲಿ ಆರು ಘಟಕಗಳಿದ್ದು ಐದು ತಾಲೂಕುಗಳಲ್ಲಿ ಹತ್ತು ಬಸ್ ನಿಲ್ದಾಣ ಇವೆ, 1698 ಜನ ಸಿಬ್ಬಂದಿ ಇದೆ. 436 ಬಸ್ ಇವೆ ಇವೆ. 1.27 ಲಕ್ಷ ಕಿಲೋಮೀಟರ್ ಬಸ್ ಓಡುತ್ತವೆ. 1.25 ಲಕ್ಷ ಜನ ಪ್ರಯಾಣ ಮಾಡುತ್ತಾರೆ.