ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ

ಶಹಾಬಾದ:ಜೂ.12:ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಹಾಬಾದ ನಗರದ ಬಸ್ ನಿಲ್ದಾಣದಲ್ಲಿ ಗ್ರೇಡ್-2 ತಹಶೀಲ್ದಾರ ಗುರುರಾಜ ಸಂಗಾವಿ, ನಗರಸಭೆ ಅಧ್ಯಕ್ಷೆ ಅಂಜಲಿ ಕಂಬಾನೂರ ಚಾಲನೆ ನೀಡಿದರು.

ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅವರು ನೂತನ ಬಸ್‍ಗೆ ಪೂಜೆ ಮಾಡಿದರು. ನಂತರ ಮೊದಲ ಉಚಿತ ಟಿಕೆಟ್ ಪಡೆದು ಪ್ರಯಾಣ ಮಾಡಿದರು. ಗ್ರೇಡ್-2 ತಹಶೀಲ್ದಾರ ಗುರುರಾಜ ಸಂಗಾವಿ ಅವರು ಮಾತನಾಡಿ, ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡಬಹುದು. ಪ್ರಯಾಣ ಮಾಡಲು ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ಇದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಪ್ರಯಾಣಕ್ಕೆ ಅನ್ವಯ ರಾಜ್ಯದಲ್ಲಿ ವಾಸಿಸುವ ಮಹಿಳೆಯರಿಗೆ ರಾಜ್ಯದೊಳಿಗಿನ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಎನ್.ಆರೀಫ್ ಅವರು ಮಾತನಾಡುತ್ತ, ಪ್ರಯಾಣಿಕರಿಗೆ ಉತ್ತಮ ಸೌಲತ್ತು ಕೊಡುವ ಮೂಲಕ ಪ್ರಯಾಣವನ್ನು ಸುಗಮಗೊಳಿಸುವುದು ನಮ್ಮ ಉದ್ದೇಶವಾಗಿದೆ. ಬಡ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದಿಂದ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ನಗರಠಾಣೆಯ ಪಿಎಸ್‍ಐ ಅಶೋಕ, ನಗರಸಭೆ ಡಾ.ಅಹ್ಮದ ಪಟೇಲ್, ಸದಸ್ಯ ಶ್ರವಣಕುಮಾರ, ಬ್ಲಾಕ್ ಅಧ್ಯಕ್ಷ ಎಮ್.ಎ.ರಶೀದ, ದೇವಿಂದ್ರ ಕಾರೋಳ್ಳಿ, ಹಾಶಮ ಖಾನ, ಸುರೇಶ ನಾಯಕ, ಮಹ್ಮದ ರಫೀಕ ಕಾರೋಬಾರಿ, ಸಾಹೇಬಗೌಡ ಬೋಗುಂಡಿ, ರಾಜೇಶ ಯನಗುಂಟಿ, ವಸಂತ ಕಾಂಬಳೆ, ಶಿವರಾಜ ಕೋರೆ, ವೇದಿಕೆಯಲ್ಲಿದ್ದರು.

ನಿಲ್ದಾಣದ ಸಂಚಾರಿ ನಿರೀಕ್ಷಕಿ ಶಾಂತಾ, ಶಿಕ್ಷಕಿ ಸುನೀತಾ ಪೋಲೆ, ಮುಖಂಡ ಮಹೇಬೂಬ, ಕಿರಣ ಚವ್ಹಾಣ್, ರಾಜು ಜಂಬಗಿ, ಅನ್ವರ ಪಾಶಾ, ನಿಂಗಣ್ಣ ಪೂಜಾರಿ, ವೆಂಕಟೇಶ ಪವಾರ, ಶರಣು ಪಗಲಾಪುರ, ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಚಾಲಕ, ನಿರ್ವಾಹಕರು, ಇತರರು ಪಾಲ್ಗೊಂಡಿದರು. ದೇವರಾಜ ನಿರೂಪಿಸಿದರು.