ಮಹಿಳೆಯರಿಗೆ ಉಚಿತ ಎಂಬ್ರೇಡಿಂಗ್ ತರಬೇತಿ

ಲಿಂಗಸೂಗೂರು,ಜ.೨೧- ಪಟ್ಟಣದ ಅರ್ಫಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಿಂಗಸುಗೂರು, ಹಟ್ಟಿ ಹಾಗೂ ಮುದಗಲ್ ಎಂಬ್ರೇಡಿಂಗ್ ತರಬೇತಿ ಮಹಿಳೆಯರಿಗಾಗಿ ಉಚಿತ ಕೇಂದ್ರ ಸರ್ಕಾರ ಯೋಜನೆ ಅಡಿಯಲ್ಲಿ, ಸದರಿ ತರಬೇತಿಯನ್ನು ಲಿಂಗಸುಗೂರು ಹಟ್ಟಿ ಹಾಗೂ ಮುದಗಲ್‌ನಲ್ಲಿ ಆಯೋಜಿಸಲಾಗುವುದು.
ತರಬೇತಿಯನ್ನು ಮೂರು ತಿಂಗಳು ನಡೆಯುತ್ತದೆ. ತರಬೇತಿಗೆ ಬೇಕಾದ ವಸ್ತುವನ್ನು ಅರ್ಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೂರೈಕೆ ಮಾಡಲಾಗುವುದು. ಕೇವಲ ೩೫ ಸೀಟು ಮಾತ್ರ ಆಸಕ್ತಿಯುಳ್ಳ ಮಹಿಳೆಯರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜಾತಿ ಪ್ರಮಾಣ ಪತ್ರ, ಎರಡು ಫೋಟೊ ಈ ದಾಖಲಾತಿ ನೀಡಿ ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ಕನೀಜಾ ಫಾತೀಮಾ ಪ್ರತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೯೦೩೫೬೬೭೯೭೦ ಸಂಪರ್ಕಿಸಿರಿ.೮೧೪೭೫೨೬೨೯೧