ಮಹಿಳೆಯರಿಗೆ ಅವಕಾಶ ದೊರೆತರೆ ಉತ್ತಮ ಸಾಧಕರಾಗಲು ಸಾಧ್ಯ: ನಾಗಠಾಣ ಅಭಿಮತ

ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.15:12ನೇ ಶತಮಾನದ ಶರಣೆಯರು ನಮಗೆಲ್ಲಾ ಮಾದರಿ. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಮಹಿಳಾ ಘಟಕ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಸರಿಯಾದ ಅವಕಾಶಗಳು ದೊರೆತಲ್ಲಿ ಉತ್ತಮ ಸಾಧಕರಾಗುತ್ತಾರೆ ಎಂದರು.
ಅತಿಥಿ ಉಪನ್ಯಾಸಕಿ ಸುರೇಖಾ ಪಾಟೀಲ ಮಾತನಾಡಿ, ಮಹಿಳೆ ಹಿಂದಿನಿಂದಲೂ ಶೋಷಿತಳಾಗುತ್ತಲೆ ಬಂದಿದ್ದಾಳೆ. ಅವನ್ನೆಲ್ಲ ಮೆಟ್ಟಿ ನಿಂತು ಸೂಕ್ತ ವೇದಿಕೆ ಆರಿಸಿಕೊಳ್ಳುವ ಚಿತ್ತ ಹರಿಸಬೇಕು ಎಂದರು.
ವಿದ್ಯಾವತಿ ಅಂಕಲಗಿ, ಡಾ. ಉಷಾದೇವಿ ಹಿರೇಮಠ ಮಾತನಾಡಿದರು. ಡಾ. ಬನುದೇವಿ ಸಂಕಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಮಹಿಳೆ ದ್ಯಾಮವ್ವ, ರಕ್ತದಾನಿ ಶಕುಂತಲಾ ಮೂಸಲಗಿ, ದಿವ್ಯಾಂಗ ಮಕ್ಕಳಿಗೆ ಬೆಳಕಾದ ಸುಜಾತಾ ರೇಶ್ಮಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಿಳೆಯರಿಗಾಗಿ ಸಿರಿಧಾನ್ಯಗಳ ಆಹಾರ ಸ್ಪರ್ಧೆ, ಒಡಪುಗಳ ಬಿಡಿಸುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ನಡೆಸಲಾಯಿತು. ಅಕ್ಕಮಹಾದೇವಿ ಬುರ್ಲಿ, ಸೋಮಶೇಖರ ವಾಲಿ, ಶೈಲಜಾ ಮೋದಿ, ದ್ರಾಕ್ಷಾಯಣಿ ಹಿರೇಮಠ, ನಿತ್ಯಾ ಬಾಗಲಕೋಟ ಹಾಗೂ ಅನಿತಾ ಡೊಳ್ಳಿ ನಿರ್ಣಾಯಕರಾಗಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳಾದ ಮಲ್ಲಮ್ಮ, ಸುವರ್ಣ ಕುರ್ಲೆ, ಮೀನಾಕ್ಷಿ ಉಟಗಿ, ಪದ್ಮಜಾ ಪಾಟೀಲ, ವಿದ್ಯಾ ಕೋಟೆನ್ನವರ, ಪುಷ್ಪಾ ಮಹಾಂತಮಠ, ಜ್ಯೋತಿ ಬಾಗಲಕೋಟ, ರೇಖಾ ಪಂಡಿತ, ಸುವರ್ಣಾ ತೇಲಿ, ಶೈಲಜಾ ಇಜೇರಿ, ನಿರ್ಮಲಾ, ರೇಖಾ, ಗುರುದೇವಿ, ಶಿವಲೀಲಾ, ಮಂಜುಳಾ, ಶಕುಂತಲಾ, ಪೂಜಾ, ಎಂ.ಎಂ. ಅವರಾದಿ, ಡಾ. ವಿ.ಡಿ. ಐಹೊಳ್ಳಿ, ಬಿ.ಎಚ್. ಬಾದರಬಂಡಿ, ವೀರಣ್ಣ ತೊಂಡಿಕಟ್ಟಿ, ಬ್ಯಾಕೋಡ, ಅಂಕಲಗಿ, ಗೀತಾ ಕೋರಿ, ಶೈಲಾ ತುಂಗಳ, ಪೂರ್ಣಿಮಾ, ರೂಪಾ ನಾಗಾವಿ ಉಪಸ್ಥಿತರಿದ್ದರು.
ಶಾರದಾ ಐಹೊಳ್ಳಿ, ದ್ರಾಕ್ಷಾಯಣಿ ಬಿರಾದಾರ ನಿರೂಪಿಸಿದರು. ಭಾರತಿ ಭುಯ್ಯಾರ ವಂದಿಸಿದರು.