ಮಹಿಳೆಯರಿಗಾಗಿ ಶೋಷಣೆರಹಿತ ಸಮಾಜಕಟ್ಟುವುದು ಇಂದಿನ ಅಗತ್ಯ

ಧಾರವಾಡ,ಮಾ7 : ಪುರಾತನ ಕಾಲದಿಂದಲೂ ಇಂದಿಗೂ ಅಂತರ್-ಬಹಿರ್ ಶಕ್ತಿಗಳು ಪ್ರಬಲವಾಗಿದ್ದರಿಂದ ಮೌನವಾಗಿರಬೇಕಾದ ಪರಿಸ್ಥಿತಿ ಅಂದು ಮಹಿಳೆಗಿತ್ತು. ಆದರೆಆಧುನಿಕ ಮಹಿಳೆ ಪಡೆದ ಶಿಕ್ಷಣ ಹಾಗೂ ಅನುಭವದಿಂದಾಗಿಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಿರುವುದುಅತ್ಯಂತ ಪ್ರಶಂಸನೀಯಎಂದು ಪ್ರೊ.ಸರಸ್ವತಿ ಕಳಸದ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ದಿನಾಚರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮನೆಯಲ್ಲಿಜಗವನ್ನು, ಜಗದಲ್ಲಿ ಮನೆಯನ್ನುಕಟ್ಟಬಲ್ಲ ಮಹಿಳೆ ಮಾನವೀಯತೆಯಗುರು.ಮನೆಯು ಮಹಿಳೆಯ ಮೌಲಿಕವಾದಕ್ಷೇತ್ರ.ತನ್ನ ಸಹನೆ, ಪ್ರೀತಿ, ಸೇವೆ ತ್ಯಾಗಗುಣದಿಂದಾಗಿ ಅವಳು ಹೋದಲ್ಲೆಲ್ಲಾಒಂದು ಹೊಸ ಮಾನವೀಯಜಗತ್ತನ್ನುಕಟ್ಟುವಂತಅದ್ಭುತ ಶಕ್ತಿ ಹೊಂದಿರುತ್ತಾಳೆ ಎಂದರು.
ಜಗದಲ್ಲೊಂದು ಮನೆಯಕಟ್ಟೋಣ' ಮೊದಲ ಗೋಷ್ಠಿಯಅಧ್ಯಕ್ಷತೆ ವಹಿಸಿದ್ದ ಸಾಹಿತಿಡಾ.ವಿನಯಾಒಕ್ಕುಂದ ಮಾತನಾಡಿ, ತುಳಿದಂತೆ ಮೇಲೆಳುವ ಹುಲ್ಲುಗರಿಯಂತೆ ಮಹಿಳೆಯಲ್ಲಿ ಅದ್ಭುತ ಹೋರಾಟದ ಶಕ್ತಿ ಇದೆ.ಮಹಿಳೆಯರ ಶೋಷಣೆಜಗತ್ತಿನಲ್ಲಿ ಹಿಂದೆ, ಇಂದು ಈಗಲೂ ನಡೆದೆಇದೆ.ನಮ್ಮ ಸಮಾಜ ನಿರಕ್ಷರಿ, ದಲಿತ, ಬಡ, ಹಿಂದುಳಿದ ಮಹಿಳೆಯರ ಮೇಲೆ ದಿನಬೆಳಗಾದರೆ ನಡೆಯುತ್ತಿರುವ ಶೋಷಣೆ ನಿಲ್ಲದಾಗಿರುವುದುದುರದೃಷ್ಟಕರ.ಆದ್ದರಿಂದ ಮಹಿಳೆಯರು ಸಂಘಟಿತರಾಗಿ ಈ ದಿಕ್ಕಿನಲ್ಲಿ ಶ್ರಮಿಸಬೇಕಾಗಿದೆಎಂದರು. ಮೊದಲ ಗೋಷ್ಠಿಯಲ್ಲಿ ಶ್ರೀಮತಿ ಶಾರದಾದಾಬಡೆ - ಸಮಾಜಕಾರ್ಯಕರ್ತೆಯಾಗಿ ಮಹಿಳೆ, ಡಾ.ಗೀತಾ ಭರತ (ಉತ್ತೂರ) - ವೈದ್ಯೆಯಾಗಿ ಮಹಿಳೆ, ಶ್ರೀಮತಿ ಪ್ರಫುಲ್ಲಾ ನಾಯಕ - ನ್ಯಾಯವಾದಿಯಾಗಿ ಮಹಿಳೆ ಕುರಿತು ವಿಷಯ ಮಂಡಿಸಿದರು.ಡಾ. ಬಸು ಬೇವಿನಗಿಡದ ಸಹ ಸ್ಪಂದನ ನಡೆಸಿಕೊಟ್ಟರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಮತಿ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು. ಮಧ್ಯಾಹ್ನಜರುಗಿದಮನೆಯಲ್ಲೊಂದುಜಗವಕಟ್ಟೋಣ’ ಎರಡನೇ ಗೋಷ್ಠಿಯಅಧ್ಯಕ್ಷತೆಯನ್ನು ವಿದ್ಯಾರಣ್ಯ ಪ.ಪೂ. ಕಾಲೇಜಿನ ಪ್ರಾಚಾರ್ಯೆಡಾ.ಶರಣಮ್ಮ ಗೊರೆಬಾಳ ವಹಿಸಿದ್ದರು.
ಸುನಂದಾಕಡಮೆ-ಗೃಹಿಣಿಯಾಗಿ ಮಹಿಳೆ, ರತಿ ಶ್ರೀನಿವಾಸನ್-ಸ್ವಯಂಉದ್ಯೋಗಿಯಾಗಿ ಮಹಿಳೆ, ಶಶಿರೇಖಾ ಚಕ್ರಸಾಲಿ-ಉದ್ಯೋಗಸ್ಥಳಾಗಿ ಮಹಿಳೆ ಕುರಿತು ವಿಷಯ ಮಂಡಿಸಿದರು. ವೆಂಕಟೇಶ ಮಾಚಕನೂರ ಸಹ ಸ್ಪಂದನ ನಡೆಸಿಕೊಟ್ಟು ಹಾಸ್ಯಭರಿತವಾಗಿ, ತಮ್ಮ ಮೌಲಿಕವಾದ ವಿಚಾರ ಹಂಚಿಕೊಂಡುಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಭಾರತೀಯ ನಾರಿಯರ ವೇಷಭೂಷಣ ಸ್ಪರ್ಧೆ' ಮತ್ತುಕೇಶ ವಿನ್ಯಾಸ ಸ್ಪರ್ಧೆ’ಯಲ್ಲಿ ಸುಮಾರು 20 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.ನಿರ್ಣಾಯಕರಾಗಿಡಾ.ಧನವಂತ ಹಾಜವಗೋಳ, ಡಾ. ಅರುಣಾ ಹಳ್ಳಿಕೇರಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ವೀರಣ್ಣಒಡ್ಡೀನ, ಗುರು ಹಿರೇಮಠ, ಡಾ.ಜಿನದತ್ತ ಹಡಗಲಿ, ಶಾರದಾ ವಿ. ಸುಜಾತಾ ಹಡಗಲಿ, ಸೇರಿದಂತೆಅನೇಕರು ಭಾಗವಹಿಸಿದ್ದರು.