ಮಹಿಳೆಯರಿಗಾಗಿ ಅನಿಲ ರಹಿತ ಅಡುಗೆ, ರಂಗೋಲಿ, ವಚನ ಗಾಯನ ಸ್ಪರ್ಧೆ

ಕಲಬುರಗಿ,ಮಾ.16: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಯಾತ್ರಿ ನಿವಾಸದ ಎದುರು ಇರುವ ಗ್ರ್ಯಾಂಡ್ ಹೊಟೇಲ್ ಪಕ್ಕದಲ್ಲಿನ ಶ್ರೀ ಜ್ಞಾನ ಕ್ಷೇತ್ರದಲ್ಲಿ ಮಾರ್ಚ್ 18ರಂದು ಸಂಜೆ 4 ಗಂಟೆಗೆ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿಯೇ ಅನಿಲ ರಹಿತ ಅಡುಗೆ, ರಂಗೋಲಿ, ವಚನ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸ್ಥಳೀಯ ದಿ ಆರ್ಟ್ ಆಫ್ ಲಿವಿಂಗ್‍ನ ಸಾದ್ವಿ ವಾಣಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಖ್ಯಾತ ಗುರುದೇವ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಸುಮಾರು 180 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಳ್ಳೆಯ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ. ಹಾಗಾಗಿ ಮಹಿಳಾ ದಿನಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಮಹಿಳೆಯರಿಗಾಗಿಯೇ ಏರ್ಪಡಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟು 85 ವರ್ಷ ವಯಸ್ಸಿನ ಮಹಿಳೆಯರವರೆಗೂ ಭಾಗವಹಿಸಬಹುದಾಗಿದೆ. ಸ್ಪರ್ಧಾ ವಿಜೇತರರಿಗೆ ಆಕರ್ಷಕ ಬಹುಮಾನಗಳನ್ನು ಕೊಡಲಾಗುವುದು. ಆಸಕ್ತರು ಅನಿಲ ರಹಿತ ಅಡಿಗೆ ಸ್ಪರ್ಧೆಗಾಗಿ ಮಾರ್ಚ್ 18ರಂದು 12ರಿಂದ 1-30ರವರೆಗೆ ಮೊಬೈಲ್ ನಂಬರ್ 829676689, 8073714597, ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ, ಮೊಬೈಲ್ ನಂಬರ್ 8073714597, 8277128665 ಹಾಗೂ ವಚನ ಗಾಯನ ಸ್ಪರ್ಧಿಗಳು ಸಂಜೆ 4ರಿಂದ 6 ಗಂಟೆಯವರೆಗೆ ಭಾಗವಹಿಸಬಹುದಾಗಿದೆ. ಮೊಬೈಲ್ ನಂಬರ್ 8073714595, 8197261209ಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಾದ್ವಿ ಮಧುಬಾಲ, ಕವಿತಾ ನಾಯಕ್ ಮುಂತಾದವರು ಉಪಸ್ಥಿತರಿದ್ದರು.