ಮಹಿಳೆಯರಿಂದ ಸುಸಂಸ್ಕøತ ಸಮಾಜ ನಿರ್ಮಾಣ: ಕವಿತಾ ಯಲಬುರ್ಗಿ

ಬೀದರ್,ಮಾ.14-“ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ. ಹೆಣ್ಣು-ಗಂಡು ಎಂಬ ಭೇದ-ಭಾವ ಬೇಡ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಮಹಿಳೆಯರು ನಮ್ಮ ಸಂಸ್ಕøತಿಯನ್ನು-ಹಿರಿಮೆಯನ್ನು ಎತ್ತಿ ಹಿಡಿಯಬೇಕು, ಮಹಿಳೆಯರಿಂದಲೇ ಸುಸಂಸ್ಕøತ ವಾತಾವರಣ/ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಎಲ್‍ಐಸಿ ಆಫ್ ಇಂಡಿಯಾ ಬೀದರ್ ಶಾಖೆಯ ವ್ಯವಸ್ಥಾಪಕರಾದ ಕವಿತಾ ಯಲಬುರ್ಗಿ ಹೇಳಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‍ಪಿಎಐ) ಬೀದರ ಶಾಖೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಫ್‍ಪಿಎಐ ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗೇಶ ಪಾಟೀಲ್ ಅವರು ಮಾತನಾಡಿ, “ಹೆಣ್ಣು ಭ್ರೂಣಹತ್ಯೆ ತಡೆಯಬೇಕು, ಹೆಣ್ಣು ಅಬಲೆಯಲ್ಲ-ಸಬಲೆ. ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸಶಕ್ತೀಕರಣ ಹೊಂದಿ ಅಭಿವೃದ್ದಿ ಹೊಂದಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೀದರನ ಸಮಾಜ ಸೇವಕರು ಆದಂತಹ ಡಾ.ನೀತಾ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ “ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಗುರಿ ಹಾಗೂ ಸಾಧನೆ ಮಾಡಬಹುದು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಮಹಿಳೆಯರು ಕಾನೂನು-ಕಾಯಿದೆಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು ಹಾಗೂ ಪ್ರತಿಯೊಬ್ಬ ಮಹಿಳೆಯ ಯಶಸ್ಸಿನ ಹಿಂದೆ ಪುರುಷರ ಪಾತ್ರ ಕೂಡ ಮಹತ್ವದಾಗಿದೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಫ್‍ಪಿಎಐ ಸಂಸ್ಥೆ ಮುಂಬೈಯ ಕೇಂದ್ರ ಕಛೇರಿಯ ಮಾಜಿ ಖಜಾಂಚಿಗಳು ಹಾಗೂ ಎಫ್‍ಪಿಎಐ ಬೀದರ ಶಾಖೆಯ ಮಾಜಿ ಅಧ್ಯಕ್ಷರು ಆದ ಡಾ.ಆರತಿ ರಘು, ಉಪಾಧ್ಯಕ್ಷರಾದ ಡಾ. ಸವಿತಾ ಚಾಕೋತೆ ಇವರುಗಳು ಕಾರ್ಯಕ್ರಮದ ಕುರಿತು ಮಾತನಾಡಿ ಮಹಿಳೆಯರಿಗೆ ಹುರಿದುಂಬಿಸಿದರು. ಸೋನಿ ಟಿವಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋನ ಭಾಗಾರ್ಥಿಯಾದ ಕು. ಶಿವಾನಿ ಸ್ವಾಮಿ ಇವರು ಮಹಿಳೆಯರ ಕುರಿತು ಹಾಡು ಹಾಡಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಎಫ್‍ಪಿಎಐ ಸಂಸ್ಥೆಯ ಬಿಎಸ್‍ಸಿ ಸದಸ್ಯರಾದ ಸುಬ್ರಮಣ್ಯ ಪ್ರಭು ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಫ್‍ಪಿಎಐ ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಕಾರ್ಯಕ್ರಮದ ಕುರಿತು ಮಾತನಾಡಿ ಸ್ವಾಗತಿಸಿದರು.
ಎಫ್‍ಪಿಎಐ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ. ಆಕಾಶ ಇವರು ವಂದಿಸಿದರು.
ಈ ಶುಭ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರು, ಈPಂI ಬೀದರ ಶಾಖೆಯ ಮಾಜಿ ಅಧ್ಯಕ್ಷರು ಹಾಗೂ ಗರ್ಭನಿರೋಧಕ ಇಂಪ್ಲಾಂಟ್ ನ ತರಬೇತಿದಾರರಾದ ಡಾ.ಆರತಿ ರಘು ಹಾಗೂ ಸೋನಿ ಟಿವಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ, ಕರ್ನಾಟಕ ಕೋಗಿಲೆ ಎಂದು ಬಿರುದು ಪಡೆದ ಕು. ಶಿವಾನಿ ಶಿವದಾಸ ಸ್ವಾಮಿ ಇವರುಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ 80 ಕ್ಕೂ ಅಧಿಕ ಮಹಿಳೆಯರು ಹಾಗೂ ಎಫ್‍ಪಿಎಐ ಸಂಸ್ಥೆಯ ಸಿಬ್ಬಂದಿವರ್ಗದವರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.