
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.26 :- ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಂಬ ಕೀಳಿರಿಮೆ ಬಿಡಿ ಅವಳು ಪುರುಷನಷ್ಟೇ ಸರಿಸಮನಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸುತ್ತಿದ್ದು ಬೇಧ ಭಾವ ತೋರದೇ ಅವಳನ್ನು ಗೌರವಿತವಾಗಿ ಕಾಣುವಂತೆ ವಿಜಯನಗರ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಮಹಿಳಾ ವಿಭಾಗದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಮಹಿಳೆಯರು ಪುರಷರಷ್ಟೇ ಸಮಾನರು. ಆದರೂ, ಅವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿರುವುದು ನಿಂತಿಲ್ಲ.ಎಂದು ಕಳವಳ ವ್ಯಕ್ತಪಡಿಸಿ ಮಹಿಳೆಯರು ಅಬಲೆಯರನ್ನುವ ಕೀಳರಿಮೆಯಿಂದ ಹೊರಬಂದು ಸಬಲರೆಂಬ ಆತ್ಮಸ್ಥೈರ್ಯ ದೊಂದಿಗೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ತೋರುವ ಮೂಲಕ ಪುರುಷ ಸಮಾಜದ ಹೀನ ಮನಸ್ಥಿತಿಗೆ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್‌ಕುಮಾರ್ ಮಾತನಾಡಿ, ಪುರುಷ ಪ್ರಧಾನ ಸಮಾಜವಾದರೂ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡುತ್ತಿದ್ದೇವೆ ಎನ್ನುವುದಕ್ಕೆ ದೇಶವನ್ನು ಭಾರತಮಾತೆ, ರಾಜ್ಯವನ್ನು ಕನ್ನಡಾಂಬೆ ಹಾಗೂ ನದಿಗಳಿಗೆ ಗಂಗಾ ಯಮುನಾ, ತುಂಗೆ ಕಾವೇರಿ ಎಂಬಿತ್ಯಾದಿ ಹೆಸರುಗಳು ತಾಯಿ ಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸುವ ಸಂಸ್ಕೃತಿ ನಮ್ಮದಾಗಿದೆ ಭಾರತಾಂಬೆಯ ಮಡಿಲಲ್ಲಿ ಇರುವ ಪ್ರತಿಯೊಬ್ಬರು ಮಹಿಳೆಯರ ಬಗ್ಗೆ ಹೆಚ್ಚಿನ ಗೌರವ ತೋರಬೇಕು. ಅಲ್ಲದೆ, ಅವರಿಗೆ ಸರಿ ಸಮಾನ ಅವಕಾಶಗಳನ್ನು ನೀಡಿ ಪುರಷರಷ್ಟೇ ಸಮಾನರು ಎಂಬಂಥ ಭಾವನೆ ಹೊಂದಿದಾಗ ಮಾತ್ರ ಸಮಾಜದ ಏಳ್ಗೆ ಸಾಧ್ಯವಿದೆ ಎಂದರು.
ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ, ಕೊಟ್ಟೂರು ತಾಲೂಕು ಅಧ್ಯಕ್ಷ ಜಗದೀಶ್, ಕೂಡ್ಲಿಗಿ ಸರಕಾರಿ ಆಸ್ಪತ್ರೆ ವೈದ್ಯ ಶಿವಕರಣ, ರಾಜ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ವಿಜಯನಗರ ಜಿಲ್ಲಾಧ್ಯಕ್ಷೆ ಮಂಜುಳಾ, ಕೂಡ್ಲಿಗಿ ತಾಲೂಕು ಅಧ್ಯಕ್ಷೆ ಶಿವರುದ್ರಮ್ಮ, ಸಂಘದ ಪದಾಧಿಕಾರಿಗಳು ಹಾಗೂ ಪಿಎಚ್‌ಸಿಒಗಳಾದ ಗಿರಿಜಾ ಅಂಜಿನಪ್ಪ, ಪಿ.ಸುನಿತಾ, ಭವ್ಯಶ್ರೀ, ಶೈಲಾಕ್ಷಿ, ನೇತ್ರಾವತಿ, ಉಮಾದೇವಿ, ಶೀಲಾ ಗುಡೇಕೋಟೆ, ಸುಪ್ರಿಯಾ ಕಾನಹೊಸಹಳ್ಳಿ, ಶಶಿಕಲಾ, ಲಕ್ಷ್ಮಿದೇವಿ ಆಲೂರು ಸೇರಿ ಇತರರಿದ್ದರು.