ಮಹಿಳೆಗೆ ಸಮಾನ ಅವಕಾಶ ಸಿಕ್ಕಾಗ ಸಮಾಜ ಅಭಿವೃದ್ದಿ ಸಾಧ್ಯ


ಜಗಳೂರು ನ.೨೦; ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೇಸ್ ಪ್ರಿಯದರ್ಶಿನಿ ವಿಭಾಗ ರಾಜ್ಯ ಸಂಚಾಲಕಿ ದಿವ್ಯನರಸಿಂಹಮೂರ್ತಿ ಹೇಳಿದರು.
ಪಟ್ಟಣದ ಕಾಂಗ್ರೇಸ್ ಮುಖಂಡ ಸುದೀರ್‌ರೆಡ್ಡಿ ನಿವಾಸದ ಆವರಣದಲ್ಲಿ ಮಹಿಳಾ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಹಾಗೂ ಪ್ರಿಯದರ್ಶಿನಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೇಸ್ ಪಕ್ಷಕ್ಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತನ್ನದೇ ಕೊಡುಗೆ ನೀಡಿ ಒಬ್ಬ ಮಹಿಳೆ ಒಂದು ದೇಶವನ್ನು ಸಮರ್ಥವಾಗಿ ಆಡಳಿತ ನಡೆಸ ಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದು, ಅವರ ವಿಚಾರದಾರೆಗಳಿಗೆ ಪ್ರಭಾವಿತಳಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಯಿಂದ ಪ್ರಿಯದರ್ಶಿನಿ ಎಂಬ ವಿಭಾಗದಡಿ ಯಲ್ಲಿ ಮಹಿಳೆಯರ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಮಹಿಳಾ ಶೋಷಣ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತೀ ತಾಲೂಕು ಮಟ್ಟದಲ್ಲೂ ಸಂವಾದ ನಡೆಸುವ ಮೂಲಕ ಕಾಂಗ್ರೇಸ್ ಪಕ್ಷದ ಸಿದ್ದಾಂತಗಳಿಗೆ ಮಹಿಳೆಯರನ್ನು ಸೆಳೆಯ ಲಾಗುವುದು ಎಂದರು. ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ ಪ್ರಿಯದರ್ಶಿನಿ ಎಂದೇ ಖ್ಯಾತವಾಗಿದ್ದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರು ಸಂಕಷ್ಟದ ಸಮಯದಲ್ಲೂ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವ ಮೂಲಕ ಗರಿಭಿಹ ಠವೋ ಯೋಜನೆಯಡಿ ಗ್ರಾಮೀಣ ಭಾಗದ ಬಡ ಜನರ ಮಹಿಳೆಯರ ಹಾಗೂ ಎಲ್ಲಾ ವರ್ಗದ ಜನರ ಹಿತಾಕಾಯುವಲ್ಲಿ ಶ್ರಮವಹಿಸಿದ್ದು, ಅವರ ಆದರ್ಶದ ಕೊಡುಗೆಗಳೇ ಇಂದಿನ ಕಾಂಗ್ರೇಸ್ ಪಕ್ಷದ ಉನ್ನತಿಗೆ ಕಾರಣವಾಗಿದೆ. ಆದರೆ ಇತ್ತೀಚೆಗೆ ಏನೂ ಮಾಡದ ಬಿಜೆಪಿ ಪಕ್ಷ ಕೇವಲ ಸುಳ್ಳು ಹೇಳಿ ಯುವಕರನ್ನು ದಾರಿ ತಪ್ಪಿಸಿ ಭಾವನಾತ್ಮಕ ವಿಚಾರದಾರೆಗಳನ್ನು ಮುಂದಿ ಟ್ಟುಕೊಂಡು ಮತ ಕೇಳುತ್ತಿದೆ. ಇದುವರೆಗೂ ಅಭಿವೃದ್ದಿಯಲ್ಲಿ ಹಿಂದುಳಿದಿದ್ದು, ದೇಶಕ್ಕೆ ಅವರ ಕೊಡುಗೆ ಶೂನ್ಯವಾಗಿದೆ.ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಕಾಂಗ್ರೇಸ್ ಪಕ್ಷ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅತ್ಯಂತ ಶ್ರೀಮಂತ ಕುಟುಂಬ ವಾಗಿದ್ದ ಇಂದಿರಾಗಾಂಧಿ ಅವರ ಕುಟುಂಬ ಕೇವಲ ಸ್ವಾರ್ಥಕ್ಕಾಗಿ ಬದುಕದೇ ದೇಶದ ಉನ್ನತಿಗಾಗಿ ತಮ್ಮ ಪ್ರಾಣವನ್ನೇ ಪಣವಾ ಗಿಟ್ಟಂತಹ ಕುಟುಂಬವಾಗಿದೆ. ಆದರೆ ಏನೂ ಮಾಡದ ಬಿಜೆಪಿ ಪಕ್ಷದವರು ಎಲ್ಲಾ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪ್ರತೀ ಚುನಾವಣೆಯಲ್ಲೂ ಕಾಂಗ್ರೇಸ್‌ನ ಕೊಡುಗೆಯನ್ನು ಕಾರ್ಯಕರ್ತರು ಹೇಳಿ ಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಆದ್ದರಿಂದ ನಮಗೆ ಹಿನ್ನಡೆಯಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ಕಾರ್ಯಕರ್ತರು ಪಕ್ಷದ ಕೊಡುಗೆ ಮತ್ತು ಸಾಧನೆಗಳನ್ನು ಪ್ರತಿ ಮನೆಮನೆಗೂ ತಿಳಿಸಬೇಕಿದೆ ಎಂದರು.ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಾಗರತ್ನಮ್ಮಮಲ್ಲೇಶಪ್ಪ ಮಾತನಾಡಿ ಹಿಂದೂ ಧರ್ಮ ಎನ್ನುವುದು ಬಿಜೆಪಿ ಗುತ್ತಿಗೆ ಹಿಡಿದಿರುವಂತೆ ಮಾತನಾಡುತ್ತಿದೆ. ಕಾಂಗ್ರೇಸ್‌ನಲ್ಲಿ ಇರುವವರೂ ಸಹ ಹಿಂದೂಗಳೇ ಇದ್ದೇವೆ. ಅಭಿವೃದ್ದಿ ಪರ ಚರ್ಚೆ ಮಾಡುವುದು ಬಿಟ್ಟು ಕೇವಲ ದೇಶಪ್ರೇಮ, ಧರ್ಮಾಧಾರಿತವಾಗಿ ಜನರಲ್ಲಿ ಕೋಮುಭಾವನೆ ಮೂಡಿಸುತ್ತಿರುವ ಬಿಜೆಪಿ ಪಕ್ಷ ಅಭಿವೃದ್ದಿಯನ್ನು ಮರೆಮಾಚಿ ಸುಳ್ಳು ಭರವಸೆ ಹೇಳುವ ಮೂಲಕ ಅಧಿಕಾರ ನಿಭಾಯಿಸುತ್ತಿದ್ದು, ಶೀಘ್ರವೇ ಇಡೀ ದೇಶದಲ್ಲಿ ಇವಿಎಂ ಮಿಷನ್ ವಿರುದ್ದ ಹೋರಾಟ ನಡೆಸುವ ಲಕ್ಷಣಗಳು ಕಾಣುತ್ತಿದ್ದು, ಬಿಜೆಪಿ ಬಣ್ಣ ಬಯಲಾಗುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾಶಿವಾನಂ ದಪ್ಪ, ತಾಲೂಕು ಪಂಚಾಯ್ತಿ ಸದಸ್ಯ ಕುಬೇಂದ್ರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ರಾದ ರವಿಕುಮಾರ್, ಶಕೀಲ್‌ಅಹಮದ್, ಮಹಮ್ಮದ್‌ಖಾಸೀಂ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ರಾಜೇಶ್ವರಿಲೋಕೇಶ್, ಪ್ರಿಯದರ್ಶಿನಿ ವಿಭಾಗದ ಜಿಲ್ಲಾ ಸಂಚಾಲಕಿ ಸುಧಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಂಷೀರ್ ಅಹಮದ್, ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಕೆಂಚಮ್ಮಧನ್ಯಕುಮಾರ್, ಉಪಾಧ್ಯಕ್ಷೆ ಬಸಮ್ಮರಾಜಪ್ಪ, ಪ್ರಧಾನ ಕಾರ್ಯದರ್ಶಿ ಸಾವಿತ್ರಮ್ಮ, ಕರುನಾಡ ರಕ್ಷಣಾ ಪಡೆ ಜಿಲ್ಲಾಧ್ಯಕ್ಷೆ ಎಸ್.ಕೆ.ಇಂದಿರಾ, ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಪ್ಪ, ಕೆಪಿಸಿಸಿ ಎಸ್ಸಿ ವಿಭಾಗ ಸದಸ್ಯ ತಿಪ್ಪೇಸ್ವಾಮಿ, ಕಾಂಗ್ರೇಸ್ ಎಸ್ಟಿ ಘಟಕದ ಅಧ್ಯಕ್ಷ ಬಿ.ಲೋ ಕೇಶ್, ಎಸ್ಸಿ ಘಟಕದ ವೆಂಕಟೇಶ್, ಯುವ ಕಾಂಗ್ರೇಸ್ ಅಧ್ಯಕ್ಷ ಅಜಾಮುಲ್ಲಾ, ರಾಜೀ ವ್‌ಗಾಂಧಿ ಬ್ರೀಗೆಡ್ ಅಧ್ಯಕ್ಷ ಬಿ.ಹೆಚ್.ನಾಗ ರಾಜ್, ಸೇವಾದಳದ ಅಧ್ಯಕ್ಷ ಬೊಮ್ಮಲಿಂಗ, ಸಾಮಾಜಿಕ ಜಾಲತಾಣ ತಮಲೇಹಳ್ಳಿ ಶ್ರೀನಿವಾಸ್ ಸೇರಿದಂತೆ ಕಾಂಗ್ರೇಸ್‌ನ ಮು ಖಂಡರು ಕಾರ್ಯಕರ್ತರು ಹಾಜರಿದ್ದರು.