ಮಹಿಳೆಗೆ ಮತನೀಡಿ ಗೆಲ್ಲಿಸಿ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.05: ನಗರದ 17 ನೇ ವಾರ್ಡಿನ ಬಿಸಿಲಹಳ್ಳಿ ಮೊದಲಾದ ಪ್ರದೇಶಗಳಲ್ಲಿ  ಇಂದು ಕೆ.ಆರ್.ಪಿ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣಾ ಅವರು ತಮಗೆ ಮತ ನೀಡುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಪಕ್ಷದ ಅಧ್ಯಕ್ಷ ತಮ್ಮ‌ ಪತಿ‌ ಗಾಲಿ ಜನಾರ್ಧನರೆಡ್ಡಿ ಅವರೊಂದಿಗೆ ಇರುವ ಕರ ಪತ್ರವನ್ನು  ಮತದಾರರಿಗೆ ನೀಡಿ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕುಟುಂಬದ ಮುಖ್ಯಸ್ಥೆ  ಮಹಿಳೆಗೆ ಮಾಸಿಕ ಎರೆಡುವರೆ ಸಾವಿರ ರೂಪಾಯಿ ನೀಡಲಿದೆ.
ಮಹಿಳೆಯರು ನೀವು ಮಹಿಳಾ ಅಭ್ಯರ್ಥಿಯಾದ ನನಗೆ ಮತ ನೀಡಿ ಆಶಿರ್ವಾದಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಲಿತ, ಸುಧಾ, ನಂದಿನಿ, ಅಲುವೇಲು, ವರಲಕ್ಷ್ಮಿ, ಅಸುಂಡಿ ಸೂರಿ, ದಿವಾಕರ್, ಯಲ್ಲಪ್ಪ, ರಫೀಕ್, ಅಸುಂಡಿ ಚಂದ್ರು, ಶೇಖರ್ ಮೊದಲಾದವರು ಇದ್ದರು.