
ಸಂಜೆವಾಣಿ ವಾರ್ತೆ
ಸಂಡೂರು:ಮಾ: 9: ನಮ್ಮನ್ನು ಸಲಹಿದವಳು ಮಾತೆ, ಮಹಿಳೆಗೆ ಸಮಾಜದಲ್ಲಿ ಪ್ರತಿಯೊಂದು ಸಂದರ್ಭದಲ್ಲಿ ಸ್ಥಾನಮಾನವಿದೆ. ಮಹಿಳೆ ಸಮಾಜದಲ್ಲಿ ಗೌರವಸ್ಥಾನಪಡೆದು ಪ್ರತಿಯೊಂದು ರಂಗದಲ್ಲೂ ಮುಂಚೂಣಿಯಲ್ಲಿದ್ದಾಳೆ,
ಇಂದಿನ ಕಾಲದಲ್ಲಿ ಪುರುಷರಿಗಿಂತ ಮಹಿಳೆಯೇ ಮುಂಚೂಣಿಯಲ್ಲಿ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿದ್ದು ಪ್ರಗತಿಯನ್ನು ಸಾಧಿಸಿ ಪುರುಷರಿಗಿಂತ ನಾನೇನು ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ ಎಂದು ಜೆ>ಎಂ.ಎಫ್.ಸಿ. ನ್ಯಾಯಾಧೀಶ ದೇವಾರೆಡ್ಡಿಯವರು ಹೇಳಿದರು.
ಅವರು ನಿನ್ನೆ ಪಟ್ಟಣದ ಮುಖ್ಯ ಬೀದಿಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಿ.ಡಿ.ಪಿ.ಓ ಕಛೇರಿಯ ಮೇಲ್ವಿಚಾರಕಿ ಶರಣಬಸವೇಶ್ವರಿ ಮಾತನಾಡಿ ಕಾನೂನು ತಿಳಿಯುವುದರ ಮೂಲಕ ಶೋಷಣೆ ಮತ್ತು ಘರ್ಷಣೆಯನ್ನು ತಪ್ಪಿಸಬೇಕಾಗಿದೆ. ನಾನು ಬರೀ ಬಾಯಿ ಮಾತಿನಲ್ಲಿ ಮಾತೃದೇವೋ ಭವ ಎನ್ನುವ ಮಾತನ್ನು ಹೇಳುತ್ತೇವೆಯೆ ಹೊರತು ಕೃತಿಯಲ್ಲಿ ಅಲ್ಲಿ ಹೆತ್ತವರಿಗೆ ಮಗಳಾಗಿ ಅಕ್ಕರೆಯ ಸಹೋದರಿಯಾಗಿ ಪತಿಗೆ ಮಡದಿಯಾಗಿ ಮಕ್ಕಳಿಗೆ ತಾಯಾಗಿ ಆತ್ಮೀಯ ಸ್ನೇಹಿತೆಯಾಗಿ ಮನೆಯ ಒಳಗೂ, ಹೊರಗೂ ದುಡಿಯುವ ಎಲ್ಲರ ಬದುಕಿನ ಆಧಾರ ಸ್ಥಂಭ ಮಹಿಳೆ ಎನ್ನುವದನ್ನು ಮರೆಯಬಾರದು. ಆದರೂ ಪುರುಷ ವರ್ಗ ತಾನೇ ಹೆಚ್ಚು ಎಂಬ ಮಮಕಾಋ ಮತ್ತು ಅಹಂಕಾರದಿಂದ ಹೆಣ್ಣಿಗೆ ವಿಪರೀತ ಕಿರುಕುಳ ನೀಡುತ್ತಿದ್ದು ದಬ್ಬಾಳಿಕ , ಶೋಷಣೆ ನಿಲ್ಲಿಸದೇ ಇರುವುದು ವಿಷಾದನೀಯವಾಗಿದೆ ಎಂದರು.ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಅಧ್ಯಕ್ಷತೆ ವಹಿಸಿದ್ದರು
ಜಿಲ್ಲಾ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತ ಎನ್ನುತ್ತೇವೆ, ಧರ್ಮಸ್ಥಳದ ಹೇಮಾವತಿ ಅಮ್ಮನವರು ಮಹಿಳಾ ಸಬಲೀಕರಣಕ್ಕಾಗಿ ಸಣ್ಣ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿದರು, ಇಂದು ಸಂಡೂರೂ ತಾಲೂಕಿನಲ್ಲಿ ಸ್ತ್ರೀಯರು 5 ಕೋಟಿ ಹಣವನ್ನು ಉಳಿತಾಯ ಮಾಡುವ ಮೂಲಕ ಸಬಲತೆಯನ್ನು ಹೊಂದಿದ್ದಾರೆ, ಅಲ್ಲದೆ 90 ಕೋಟಿ ಸಾಲವನ್ನು ಪಡೆಯುವ ಮೂಲಕ ಅತಿ ಹೆಚ್ಚು ಸಾಲವನ್ನು ಪಡೆದು ಸ್ವಾವಲಂಬಿ ಉದ್ಯೋಗ ಮಾಡುತ್ತಿದ್ದಾರೆಂದು ತಿಳಿಸಿದರು. ಇದು ನಿಜವಾದ ಸಬಲೀಕರಣವಾಗಿದೆ, ಅದ್ದರಿಂದ ಮಹಿಳೆಯರು ಇರುವ ಸ್ಥಿತಿಯನ್ನು ಸ್ವೀಕರಿಸಿ ಉತ್ತಮ ಸ್ವಾವಲಂಬಿಗಳಾದಾಗ ಅದುವೆ ನಿಜವಾದ ಮಹಿಳಾ ದಿನಾಚರಣೆ ಎಂದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕಿ ಸುಮಾ, ಲಿಂಗ ತಾರತಮ್ಯ ಇಲ್ಲದೆ ಮಕ್ಕಳನ್ನು ಬೆಳೆಸುವುದು ಹಾಗೂ ಉತ್ತಮ ಶಿಕ್ಷಣಕೊಡಿಸುವಲ್ಲಿ ಪೋಷಕರ ಪಾತ್ರ ವಿಷಯಕುರಿತು ಉಪನ್ಯಾಸ ನೀಡಿದರು, ಸಮಾರಂಭದಲ್ಲಿ ಅತಿಥಿಗಳಾಗಿ ಅಗಮಿಸಿದ ಬಸವರಾಜ ಬಣಕಾರ, ರಮೇಶ್ ಗಡಾದ್, ಅಧ್ಯಕ್ಷತೆ ವಹಿಸಿದ್ದ ಮಂಜುಳಾ ಮಾತನಾಢಿದರು.
ವಿವಿಧ ಸ್ತ್ರೀ ಶಕ್ತಿ ಸಂಘಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ಶುಭಾದೇವಿ, ಸಂಘದ ಎಲ್ಲಾ ಸದಸ್ಯರುಗಳು ವಕೀಲರ ಸಂಘದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.