ಮಹಿಳೆಗೆ ಅನ್ನನಾಳದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿ

• ಡಾ.ಅವಿನಾಶ ಭಾವಿಕಟ್ಟಿ ಸಾಧನೆ
• ಆಸ್ಪತ್ರೆಯಿಂದ ರೋಗಿ ಬಿಡುಗಡೆ
• ಚಿಕಿತ್ಸೆಗೆ 80 ಸಾವಿರ ರೂ. ಖರ್ಚು

ಗಂಗಾವತಿ ನ.18: ಅನ್ನನಾಳದ ಕ್ಯಾನ್ಸರ್‍ನಿಂದ ಬಳ್ಳುತ್ತಿದ್ದ 52 ವರ್ಷದ ಮಹಿಳೆಗೆ ಯಶಸ್ವಿಯಾಗಿ ಡಯಾಗ್ನೋಸಿಸ್ ಶಸ್ತ್ರಚಿಕಿತ್ಸೆ ನೆರವೇರಿಸಿ ಗುಣಪಡಿಸಲಾಗಿದೆ ಎಂದು ನಗರದ ಭಾವಿಕಟ್ಟಿ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸಾ ಆಸ್ಪತ್ರೆಯ ಎಂಡೋಸ್ಕೋಪಿಕ್ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್, ಡಾ.ಅವಿನಾಶ ಭಾವಿಕಟ್ಟಿ ಹೇಳಿದರು.
ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅನ್ನನಾಳದ ಕ್ಯಾನ್ಸರ್‍ಗೆ ಡಯಾಗ್ನೋಸಿಸ್ (Diougnosis) ಶಸ್ತ್ರಚಿಕಿತ್ಸೆ (surgery) ಮೂಲಕ ಯಶಸ್ವಿಯಾಗಿ ನೆರವೇರಿಸಿದ ಗಂಗಾವತಿಯಲ್ಲಿ ಮೊದಲ ಆಸ್ಪತ್ರೆ ಎಂಬ ಕೀರ್ತಿ ಭಾವಿಕಟ್ಟಿ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸಾ ಆಸ್ಪತ್ರೆಗೆ ಸಲ್ಲುತ್ತದೆ ಎಂದರು.
ಗಂಗಾವತಿ ನಗರದ 52 ವರ್ಷದ ಮಹಿಳೆ ಅನ್ನನಾಳದ ಕ್ಯಾನ್ಸರ್ (carcinoma esophagus) ರೋಗದಿಂದ ನರುತ್ತಿದ್ದರು. ಇವರು ನಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಕಾಯಿಲೆ ವಾಸಿಯಾಗಿದ್ದಿಲ್ಲ. ಬಳಿಕ ನಮ್ಮ ಆಸ್ಪತ್ರ್ರೆಗೆ ಚಿಕಿತ್ಸೆಗೆ ಆಗಮಿಸಿದಾಗ ಅವರನ್ನು ಸಿಟಿ ಸ್ಕ್ಯಾನಿಂಗ್ ಸೇರಿ ವಿವಿಧ ತಪಾಸಣೆ ನಡೆಸಲಾಯಿತು. ಬಳಿಕ ವರದಿ ನೋಡಿದಾಗ ಈ ಮಹಿಳೆಗೆ ಅನ್ನನಾಳದ ಕ್ಯಾನ್ಸರ್ ದೃಢಪಟ್ಟಿತ್ತು. ನ.8 ರಂದು ಬೆಳಗ್ಗೆ 8 ರಿಂದ 5 ತಾಸು ಆಪರೇಷನ್ ಮಾಡಿ ರೋಗ ಗುಣಪಡಿಸಲಾಗಿದೆ. ಆಸ್ಪತ್ರೆಯಿಂದ ರೋಗಿಯನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ ಎಂದರು.
ಈ ಚಿಕಿತ್ಸೆಗೆ ಸುಮಾರು 2ರಿಂದ 3 ಲಕ್ಷ ರೂ.ಖರ್ಚಾಗುತ್ತಿದೆ. ಈ ರೋಗಿಯ ಕುಟುಂಬ ತೀರ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ಭಾವಿಕಟ್ಟಿ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸಾ ಆಸ್ಪತ್ರೆಯು, ಈ ಮಹಿಳೆಗೆ 80 ಸಾವಿರ ರೂ. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಅನ್ನನಾಳದ ಕ್ಯಾನ್ಸರ್ ರೋಗ ಗುಣಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅನ್ನನಾಳದ ಕ್ಯಾನ್ಸರ್ (carcinoma esophagus) ಪುರಷರಲ್ಲಿ ಪ್ರಧಾನವಾಗಿ ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಬೆರಳಣಿಕೆಷ್ಟು ಮಹಿಳೆಯರಲ್ಲಿ ಈ ಕ್ಯಾನ್ಸ್‍ರ್ ಬರುತ್ತಿದೆ.
ಆಹಾರ ನುಂಗುವುದರಲ್ಲಿ ತೊಂದರೆ ಅನ್ನನಾಳದ ಕ್ಯಾನ್ಸ್‍ರ್‍ನ ಮೊದಲ ಲಕ್ಷಣವಾಗಿದ್ದು, ಆ ಮೇಲೆ ಮೃದು ಆಹಾರ, ದ್ರವ ಪದಾರ್ಥವೂ ಒಳ ಹೋಗುವುದಕ್ಕೆ ತೊಂದರೆಯಾಗುತ್ತಿದೆ. ವೈದ್ಯಕೀಯ ಭಾಷೆಯಲ್ಲಿ ಅನ್ನನಾಳ ಕ್ಯಾನ್ಸ್‍ರ್‍ಗೆ ಗ್ಯಾಸ್ಟ್ರೋ ಇಂಟೆಸ್ಟೈನಲ್ ಎಂದು ಕರೆಯಲಾಗುತ್ತಿದೆ ಎಂದರು.
ಆಪರೇಷನ್ ತಂಡದಲ್ಲಿ ಡಾ.ಅವಿನಾಶ ಭಾವಿಕಟ್ಟಿ, ಡಾ.ಶಿವಾನಂದ ಭಾವಿಕಟ್ಟಿ, ಡಾ.ಪ್ರಜ್ವಾಲ್, ಸಿಬ್ಬಂದಿ ವೀರೇಶ, ಮಂಜುನಾಥ, ಮಹಾಂತೇಶ ಇದ್ದರು.

ನಶಿಪುಡಿ ತಿಕ್ಕಿದ ಮಹಿಳೆಗೆ ಅನ್ನನಾಳ ಕ್ಯಾನ್ಸರ್
ಸಿಗೆರೇಟ್, ಮದ್ಯಪಾನ, ಗುಟ್ಕಾ ಸೇರಿ ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಅನ್ನನಾಳದ ಕ್ಯಾನ್ಸರ್ ಕಂಡು ಬರುತ್ತದೆ. ಈ ಕಾಯಿಲೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಚಿಕಿತ್ಸೆ ಪಡೆದ ಮಹಿಳೆಯು ಹೆಚ್ಚಾಗಿ ನಶಿಪುಡಿ ತಿಕ್ಕಿದ ಪರಿಣಾಮ ಅನ್ನನಾಳದ ಕ್ಯಾನ್ಸರ್ ಬಂದಿದೆ ಎನ್ನುತ್ತಾರೆ ಡಾ.ಅವಿನಾಶ ಭಾವಿಕಟ್ಟಿ.


ಭಾವಿಕಟ್ಟಿ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸಾ ಆಸ್ಪತ್ರೆಯ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿದ್ದು, 52 ವರ್ಷದ ಬಡ ಮಹಿಳೆಯ ಜೀವ ರಕ್ಷಿಸಿರುವುದು ಹೆಮ್ಮೆಯಾಗುತ್ತಿದೆ.
-ಡಾ.ಶಿವಾನಂದ ಭಾವಿಕಟ್ಟಿ, ಎಂಬಿಬಿಎಸ್