ಮಹಿಳಾ ಸಾಹಿತ್ಯ ಸಮಾವೇಶ

ಧಾರವಾಡ,ಏ12 : ಸೃಜನಶೀಲ ಸಾಹಿತ್ಯ ಭಾವನೆಗಳ ಅಭಿವ್ಯಕ್ತಿಗೆ ಸಾಧನವಾಗಿದೆ. ಜಾನಪದ ಗರತಿಯರಲ್ಲಿ ಆಗಾಧವಾದ ಸೃಜನಶೀಲತೆ ಇತ್ತು ಎಂದು ಬೆಳಗಾವಿಯ ವಿಮರ್ಶಕಿ ಹಾಗೂ ಚಿಂತಕರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಸುವರ್ಣ ಕರ್ನಾಟಕ ಸಂಭ್ರಮದ ನಿಮಿತ್ತ ಆಯೋಜಿಸಿದ್ದ ಮಹಿಳಾ ಸಾಹಿತ್ಯ ಸಮಾವೇಶ ಕಾರ್ಯಕ್ರಮದಲ್ಲಿಸೃಜನ ಹಾಗೂ ಸೃಜನೇತರ ಸಾಹಿತ್ಯ’ ಕುರಿತ ಸಾಹಿತ್ಯ ಗೋಷ್ಠಿಯಲ್ಲಿ ಮಾತನಾಡಿದರು.
ಸೃಜನಶೀಲ ಸಾಹಿತ್ಯ ಬುದ್ಧಿ-ಭಾವದ ಪ್ರಧಾನವಾದರೆ ಸೃಜನೇತರ ಸಾಹಿತ್ಯವೆಲ್ಲ ಜ್ಞಾನದ ಪ್ರಧಾನವಾಗಿವೆ. ಕಥೆ, ಕಾದಂಬರಿ, ನಾಟಕ, ಕಾವ್ಯಗಳು ಸೃಜನಶೀಲವಾದರೆ, ತರ್ಕಶಾಸ್ತ್ರ ವಿಮರ್ಶೆ, ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಶಾಸ್ತ್ರ, ಮಾನಸಿಕ ಶಾಸ್ತ್ರ ಹಾಗೂ ಶಾಸನ ಸಂಶೋಧನೆಗಳು ಸೃಜನೇತರ ಸಾಹಿತ್ಯವಾಗಿವೆ. ಉತ್ತರಕರ್ನಾಟಕದಲ್ಲಿ ಸೃಜನೇತರ ಸಾಹಿತ್ಯಕ್ಕೆಡಾ. ಹನುಮಾಕ್ಷಿ ಗೋಗಿ ಹಾಗೂ ರಾಯಚೂರಿನಕವಿತಾ ಮಿಶ್ರಾರಕೊಡುಗೆಅನನ್ಯದಾದದ್ದು. ಸೃಜನೇತರ ಸಾಹಿತ್ಯಕ್ಕೂ ವಿಫುಲ ಅವಕಾಶ ಲಭ್ಯವಾಗಬೇಕೆಂದು ಹೇಳಿದರು.
ವಿದ್ಯಾರಣ್ಯ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯೆಡಾ.ಶರಣಮ್ಮ ಗೋರೇಬಾಳ ಮಹಿಳೆ ಮತ್ತು ಸಾಹಿತ್ಯಕುರಿತು ಮಾತನಾಡಿ, ಮಹಿಳೆ ಎಂದರೇನೇ ಸಾಹಿತ್ಯ.ತ್ಯಾಗ, ಕರುಣೆ, ಪ್ರೀತಿ, ವಾತ್ಸಲ್ಯದ ಮಹಿಳೆ ತನ್ನ ಭಾವನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತಿದ್ದಳು. 12 ನೇ ಶತಮಾನದಲ್ಲಿ 33 ಜನ ಮಹಿಳಾ ವಚನಗಾರ್ತಿಯರುಜೀವನಮುಖಿ ಕಾಳಜಿಯೊಂದಿಗೆ ವಚನ ಸಾಹಿತ್ಯರಚಿಸುತ್ತಿದ್ದರು. ಇಂದು ಮಹಿಳೆಯರಿಗೆ ವಿಫುಲ ಅವಕಾಶಗಳಿದ್ದು ಸಾಹಿತ್ಯರಚನೆಯಲ್ಲಿ ಮುಂದಾಗಬೇಕು.ಮಹಿಳೆಯರನ್ನು ಎರಡನೇದರ್ಜೆ ಪೌರರಂತೆಕಾಣುವದು ಸರಿಯಲ್ಲಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಾಸನ ಶಾಸ್ತ್ರ ಸಂಶೋಧಕಿ ಹನುಮಾಕ್ಷಿ ಗೋಗಿ ಮಾತನಾಡಿ, ಸೃಜನ, ಸೃಜನೇತರ ಸಾಹಿತ್ಯದ ವ್ಯಾಪ್ತಿ ವಿಸ್ತಾರವಾಗಿದೆ.ಇದಕ್ಕೆ ಸಮಯದ ಮಿತಿಇರಲಾರದು.ಇಂದು ಮಹಿಳಾ ಸಾಹಿತ್ಯಜಾತಿಗುಂಪುಗಾರಿಕೆ ಮೀರಿ ಬೆಳೆಯುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಶ್ವೇಶ್ವರಿ ಹಿರೇಮಠಇದ್ದರು, ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರ, ಡಾ.ಮಹೇಶ ಹೊರಕೇರಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ಮಲ್ಲಿಕಾಘಂಟಿ, ಪ್ರೊ. ಶಾಂತಾಇಮ್ರಾಪೂರ, ರಾಧಾ ಶ್ಯಾಮರಾವ, ಪ್ರಭಾ ನೀರಲಗಿ, ವಿಜಯಲಕ್ಷಿಕಲ್ಯಾಣಶೆಟ್ಟರ ಹಾಗೂ ಶಿವಾನಂದ ಭಾವಿಕಟ್ಟಿ, ವಿವಿಧಕಾಲೇಜಿನ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸೇರಿದಂತೆಅನೇಕರು ಪಾಲ್ಗೊಂಡಿದ್ದರು.