ಮಹಿಳಾ ಸಾಧಕರಿಗೆ ಸನ್ಮಾನ

ಆನೇಕಲ್, ಮಾ. ೯- ಹೆಬ್ಬಗೋಡಿ ಸರ್ಕಾರಿ ಶಾಲಾ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಠೀಯ ಯುವ ಪ್ರಶಸ್ಥಿ ವಿಜೇತ ಡಾ|| ಚಿನ್ನಪ್ಪ ಚಿಕ್ಕಹಾಗಡೆ ರವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಮಹಿಳಾ ಸಾದಕರನ್ನು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ಥಿ ವಿಜೇತ ಚಂದಾಪುರ ಮಹೇಶ್, ಹೆಬ್ಬಗೋಡಿ ಪೋಲಿಸ್ ಠಾಣೆಯ ರತ್ನಮ್ಮ, ಮಹಿಳಾ ಮುಖಂಡರಾದ ಹೆಬ್ಬಗೋಡಿ ಮಂಜುಳ ಸೇರಿದಂತೆ ಆಶಾ ಕಾರ್ಯಕರ್ತೆಯರು ಬಾಗವಹಿಸಿದ್ದರು.