ಮಹಿಳಾ ಸಮಾನತೆಗೆ ಬಸವಾದಿ ಶರಣರ ಕೊಡುಗೆ ಮರೆಯುವಂತಿಲ್ಲ

ಕಲಬುರಗಿ:ಮಾ.25: ಮಹಿಳೆ ಪುರುಷನ ಜೊತೆ ಸಮನಾಗಿರಲು ಸಾಧ್ಯವಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಜೀವಿಸಬೇಕೆಂಬ ಕಟ್ಟಳೆಯಲ್ಲಿ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆಯ ಸಂಕೇತವಾದ ಇಷ್ಟಲಿಂಗವನ್ನು ನೀಡಿ, ಅನುಭವ ಮಂಟಪದಲ್ಲಿ ಶರಣರಷ್ಟೇ, ಶರಣೆಯರನ್ನು ಸಮಾನವಾಗಿ ಅವಕಾಶ ಕಲ್ಪಿಸಿಕೊಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿಹಾಡಿರುವುದು ಮಹಿಳೆಯರು ಎಂದಿಗೂ ಕೂಡಾ ಮರೆಯುವಂತಿಲ್ಲವೆಂದು ಮಹಿಳಾ ಚಿಂತಕಿ ವಿಜಯಲಕ್ಷ್ಮೀ ಗುತ್ತೇದಾರ ಅಭಿಮತ ವ್ಯಕ್ತಪಡಿಸಿದರು.

      ನಗರದ ಆಳಂದ ರಸ್ತೆಯ ಕೈಲಾಸ ನಗರದಲ್ಲಿ ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲರ ಸುಪುತ್ರಿ ಬಸವಶ್ರೀಯ ದ್ವಿತೀಯ ಜನ್ಮದಿನಾಚರಣೆಯ ಪ್ರಯುಕ್ತ ಬುಧವಾರ ಸಂಜೆ ಜರುಗಿದ ಮಹಿಳಾ ಮಾಸಾಚರಣೆಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸಾಧಕ ಮಹಿಳೆಯರಿಗೆ ಏರ್ಪಡಿಸಿದ್ದ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

     ಸಾಧಕ ಶಿಕ್ಷಕಿ ಜಯಶ್ರೀ ನಾಗಶೆಟ್ಟಿ ಮಾತನಾಡಿ, ಮಹಿಳೆಯರು ಇಂದು ಶಿಕ್ಷಣವನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ. ಆದರೆ ಇಂದಿಗೂ ಕೂಡಾ ಮಹಿಳೆಯರು ಮೌಢ್ಯತೆ, ಕಂದಾಚಾರ, ಅಂದಶೃದ್ಧೆಗಳ ಪಾಲಿಸುತ್ತಿರುವುದು ಕಂಡು ಬರುತ್ತದೆ. ಮಹಿಳೆಯರು ಸಂಪೂರ್ಣವಾಗಿ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಜನ್ಮದಿನದ ನೆಪದಲ್ಲಿ ಸಾಧಕ ಮಹಿಳೆಯರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯ ನಿಜಕ್ಕು ಶ್ಲಾಘನೀಯವಾಗಿದೆಯೆಂದು ಪ್ರಶಂಸೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಜಯಶ್ರೀ ಎಚ್.ಪಾಟೀಲ, ಬಸವಶ್ರೀ ಎಚ್.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ಸುನೀಲಕುಮಾರ ವಂಟಿ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ರಾಜಕುಮಾರ ಬಟಗೇರಿ, ಅಣ್ಣಾರಾಯ ಎಚ್.ಮಂಗಾಣೆ, ಅಮರ ಜಿ.ಬಂಗರಗಿ, ಸಂಗಮೇಶ ಇಮ್ಡಾಪೂರ, ರಮೇಶ, ಮಹಾಂತೇಶ ಬಿ.ಬಿರಾದಾರ, ಗುರುರಾಜ, ಭುವನೇಶ್ವರಿ ಜಿ.ಬಿರಾದಾರ, ವಿಜಯಲಕ್ಷ್ಮೀ ಲೊಡ್ಡೇನ್, ಚನ್ನವೀರ ಎಂ.ಪಾಟೀಲ, ಲೀಲಾವತಿ ಎಂ.ಪಾಟೀಲ, ಚಿನ್ನಮ್ಮ, ಉಮೇಶ, ಈಶ್ವರ,ಸ್ವಾತಿ, ಉಮಾಮಹೇಶ್ವರಿ, ಕಾಶಮ್ಮ ಎಸ್.ಭೋಸಗಿ, ಸತೀಶ ಎಂ.ಭೋಸಗಿ, ಉಮೇಶ ಎಸ್.ಕಾಳಪ್ಪಗೋಳ ಸೇರಿದಂತೆ ಮತ್ತಿತರರಿದ್ದರು.