ಮಹಿಳಾ ಸಮಾನತೆಗಾಗಿ ಬಸವಣ್ಣ ಮನೆ ತೊರೆದ: ಡಾ. ವೈಶಾಲಿ

ಬೀದರ:ಮಾ. 9 :ಪುರುಷ ಮತ್ತು ಮಹಿಳೆ ಇಬ್ಬರೂ ಪ್ರಕೃತಿಯ ಪ್ರತಿರೂಪಗಳು. ಇಬ್ಬರಿಗೂ ಸಮಾನವಾದ ಅವಕಾಶ ನೀಡಿದೆ. ಆದರೆ ಮಾನವ ನಿರ್ಮಿತ ಸಮಾಜ ತನ್ನ ಸ್ವಾರ್ಥಕ್ಕಾಗಿ ಜನ್ಮಕೊಟ್ಟ ತಾಯಿಯನ್ನೂ ಎರಡನೆ ದರ್ಜೆಯಲ್ಲಿ ಇಡಲಾಯಿತು. ಒಡಹುಟ್ಟಿದ ಅಕ್ಕನಿಗೆ ಧರ್ಮಸಂಸ್ಕಾರ ನೀಡುವಾಗ ಮಾಡಿದ ತಾರತಮ್ಯದ ವಿರುದ್ಧ ಪ್ರತಿಭಟಿಸಿ ಮಹಿಳೆಗೆ ಗೌರವ ಇಲ್ಲದಲ್ಲಿ ನಾನಿರಲಾರೆ ಎಂದು ಬಸವಣ್ಣ ತನ್ನ 9 ನೇ ವರ್ಷದಲ್ಲಿ ಮನೆ ಬಿಟ್ಟ ಉದಾಹರಣೆ ಪ್ರಪಂಚದಲ್ಲಿ ಸಿಗುವದಿಲ್ಲ ಎಂದು ಹೇಳಿದರು.

ನಗರದ ನೌಬಾದ ಹೌಸಿಂಗಬೋರ್ಡ ಕಾಲೋನಿಯ ದಕ್ಷಿಣಮುಖಿ ಹನುಮಾನ ಮಂದಿರದ ಸಾಂಸ್ಕøತಿಕ ಭವನದಲ್ಲಿ ಅಕ್ಕಮಾಹಾದೇವಿ ಮಹಿಳಾ ಮಂಡಳ ಅಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ ವಿಶ್ವದ ಮೊದಲ ಸಂಸತ್ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟಿದ್ದು ಪ್ರಪಂಚದಲ್ಲೆ ಮೊದಲು. ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾದ ಸಾಧನೆ ಮಾಡುವಲ್ಲಿ ಮಹಿಳೆಯರ ಇಂದಿನ ವಾತಾವರಣಕ್ಕೆ ಅಂದಿನ ಮಹಿಳಾಮಣಿ ಅಕ್ಕಮಾಹಾದೇವಿಯ ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡೂ ಅಲ್ಲ ಎಂಬ ಮಾತು ಇಂದಿನ ವಿಜ್ಞಾನ ಒಪ್ಪಿಕೊಂಡಿದೆ ಎಂದು ಡಾ. ವೈಶಾಲಿ ತಿಳಿಸಿದರು.

ಕೇಕ್ ಕಟ್ ಮಾಡುವ ಮೂಲಕ ಕಾಯರ್ಯಕ್ರಮವನ್ನು ಉಮಾ ಜಾಂತಿಕರ ಉದ್ಘಾಟಿಸಿದರು. ಮೊದಲಿಗೆ ಸುರೇಖಾ ಮಜಗೆ ಪ್ರಾರ್ಥನೆಗೀತೆ ಹೇಳಿದರು. ಸುರೇಖಾ ಸಿಗ್ಲಿ ಅದ್ಯಕ್ಷತೆ ವಹಿಸಿದ್ದರೆ, ಶೈಲಜಾ ಚಾಳಕಾಪುರೆ ವೇದಿಕೆ ಮೇಲಿದ್ದರು. ಸಂಗೀತಾ ಸ್ವಾಮಿ, ಸ್ವಾಗತಿಸಿದರೆ, ಲಕ್ಷ್ಮಿ ದೇವಪ್ಪಾ ವಂದಿಸಿದರು. ಕೀರ್ತಿ ಮಸೂದಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಓಣಿಯ ಎಲ್ಲಾ ಮಹಿಳೆಯರು, ಮಕ್ಕಳು, ಪುರುಷರು ಸೇರಿ ಹೋಳಿ ಆಚರಿಸಿದರು.