ಮಹಿಳಾ ಸಬಲೀಕರಣಕ್ಕಾಗಿ ಎಲ್ಲ ರೀತಿಯ ಸಹಾಯ: ಪಾಲಿಕೆ ಆಯುಕ್ತ ಲೋಖಂಡೆ

ಕಲಬುರಗಿ.ಏ.17:ಮಹಿಳಾ ಸಬಲೀಕರಣಕ್ಕಾಗಿ ಅಗತ್ಯವಾಗಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಮಹಾನಗರ ಪಾಲಿಕೆಯ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಂಡ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಟಾರ್ಟ್ ಅಪ್‍ನ್ನು ಮಾಡಲು ಸರ್ಕಾರದ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾನೋಮೀ ಸ್ಟುಡಿಯೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನು ಕಸ್ಕರ್, ಸಿಲ್ವರ್ ಸ್ಪೂನ್ ಸಂಸ್ಥೆಯ ಮಧುಶ್ರೀ ಮತ್ತು ನ್ಯಾಯವಾದಿ ರೇಣುಕಾ ಬಿರಾದಾರ್, ಮೆಡಿಸಿನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಉತ್ತಮ್ ಬಜಾಜ್ ಅವರು ಮಾತನಾಡಿ, ಸ್ಟಾರ್ಟ್ ಅಪ್ ಹೇಗೆ ಮಾಡಬೇಕು ಮತ್ತು ಅದಕ್ಕಾಗಿ ಬ್ಯಾಂಕಿನಿಂದ ಹೇಗೆ ಸಾಲ ಪಡೆದುಕೊಳ್ಳಬೇಕು. ಕಂಪೆನಿ ನೊಂದಣಿ ಹೇಗೆ ಮಾಡಿಸುವುದು, ಜಿಎಸ್‍ಟಿ ಬಗ್ಗೆ ಮತ್ತು ಎಲಿವೇಟ್ ಉನ್ನತಿ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಸಹಾಯ ಸಂಘದ 50ಕ್ಕಿಂತ ಹೆಚ್ಚು ಜನ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.