ಮಹಿಳಾ ಸಂಘಗಳಿಂದ ಮಾಸಿಕ ಸಂತೆಯಲ್ಲಿ
ಅನಾವರಣಗೊಂಡ ಕರಕುಶಲ ಕಲೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.20: ಪ್ರತಿ ಗ್ರಾಮ ಪಂಚಾಯತಿ ಮಹಿಳಾ ಒಕ್ಕೂಟಗಳ ಮಹಿಳೆಯರು ಸಿದ್ದಪಡಿಸಿದ ಕರಕುಶಲ ವಸ್ತುಗಳ ಅನಾವರಣದ ವೇದಿಕೆಯಾಗಿ ಹೊಸಪೇಟೆ ನಗರಸಭೆ ಮುಂದಿನ ರಸ್ತೆ ಬದಲಾಗಿತ್ತು.
ಬುಧವಾರ ವಿಜಯನಗರ ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲೂಕು ಪಂಚಾಯತಿ, ಹೊಸಪೇಟೆಯ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ನಗರಸಭೆಯ ಮುಂದಿನ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಂತೆ ಕಾರ್ಯಕ್ರಮದಲ್ಲಿ ಹೊಸಪೇಟೆಯ 3 ಗ್ರಾಮ ಪಂಚಾಯತಿಗಳ 16 ಸಂಘದ ಮಹಿಳೆಯ ಲಂಬಾಣಿ ಕಸೂತಿ, ಕರವಸ್ತ್ರ, ಕಾಲವಸ್ತ್ರ, ತೋರಣ, ಅಲಂಕಾರಿಕ ವಸ್ತುಗಳು, ಅಡುಗೆ ಮನೆಯ ರೊಟ್ಟಿ, ಖಾದ್ಯಗಳಾದ , ಮಸಾಲಾ ಪದಾರ್ಥಗಳು, ಚಟ್ಟಣ್ನಿಪುಡಿ,  ಸಿಹಿ ತಿನಸುಗಳು, ಮನೆಯಲ್ಲಿಯೆ ಬೆಳೆದ ವಿವಿಧ ತರಕಾರಿಗಳು ಸೇರಿದಂತೆ ಮಹಿಳೆಯರು ಸಿದ್ದಪಡಿಸಿದ ವೈವಿಧ್ಯಮಯ ವಸ್ತುಗಳ ಕಲಾಪ್ರದರ್ಶನ ಚಿತ್ತಾರಗೊಂಡಿತ್ತು.
 ಉದ್ಘಾಟನೆ:
ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಜಿ.ವಿ. ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾರುಕಟ್ಟೆಗೆ ವಿಫುಲವಾದ ಅವಕಾಶಗಳಿದ್ದು ವಿಭಿನ್ನವಸ್ತಗಳು ಸಿದ್ದಪಡಿಸಿದಲ್ಲಿ   ಉತ್ತಮ ಅವಕಾಶ ಸೃಷ್ಟಿಸಲು ಸಾದ್ಯ ಎಂದರು. ಇದೀಗ ಸರ್ಕಾರವೂ ಇಂತಹ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ ಎಂದರು.
ವಿಜಯನಗರ ಜಿಲ್ಲಾ ಪಂಚಾಯತಿ ಯುವ ವೃತ್ತಿಪರ ಅಧಿಕಾರಿ ಕಾವ್ಯ ಮಾತನಾಡಿ, ಮಹಿಳೆ ಎಷ್ಟು ಉತ್ತಮವಾಗಿ ಕಾರ್ಯನಿರ್ವಸುವಳು ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ, ಇನ್ನಷ್ಟು ಮಹಿಳೆಯರು ತೊಡಗಿ ಹೆಚ್ಚು ಹೆಚ್ಚು ವಸ್ತುಗಳನ್ನು ಸಿದ್ದಪಡಿಸಿ ಒಂದು ಮಾದರಿ ಸಂಘಗಳು ಹಾಗೂ ವೃತ್ತಿಪರ ಮಾರುಕಟ್ಟೆ ಕಟ್ಟಿಕೊಳ್ಳಲು ಸಾಧ್ಯ ಎಂದರು.
ಹೊಸೂರು ಗ್ರಾಮ ಪಂ ಅಧ್ಯಕ್ಷೆ ದುರಗಮ್ಮ, ಹೊಸೂರು ಒಕ್ಕೂಟದ ಸದಸ್ಯೆ ಜಯಪದ್ಮಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Attachments area