ಮಹಿಳಾ ಶ್ರೇಷ್ಠ ಪ್ರಶಸ್ತಿಗೆ ಡಾ. ಜೈಶೀಲಾ ಆಯ್ಕೆ

ಔರಾದ :ಎ.8: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಜೈಶೀಲಾ ಅವರು ಮಹಿಳಾ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಹೈದರಾಬಾದನ ಅಂತರರಾಷ್ಟ್ರೀಯ ನಾಯಕತ್ವ ಅಭಿವೃದ್ಧಿ ಮಂಡಳಿ (ಐಎಲ್ಡಿಸಿ) ಮತ್ತು ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಪ್ರೋಫೆಶನಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಡಾ. ಜೈಶೀಲಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಹಿಳಾ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಡಾ ಜೈಶೀಲಾ ಅವರಿಗೆ ಕಾಲೇಜು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭಕೋರಿ ಅಭಿನಂದಿಸಿದರು.