ಮಹಿಳಾ ಶೋಷಣೆಯ ಗಟ್ಟಿಧ್ವನಿ ಸಾರಾ ಅಬೂಬಕ್ಕರ್

ವಾಡಿ:ಜೂ.28: ಮುಸ್ಲಿಂ ಧರ್ಮದಲ್ಲಿ ಜನಸಿದ್ದ ನಾಡೋಜ ಡಾ.ಸಾರಾ ಅಬೂಬಕ್ಕರ್ ಅನ್ಯಾಯ ಹಾಗೂ ಶೋಷಣೆಗಳಂತಹ ವಿರುದ್ಧ ಸಮರಸಾರಿದ ದಿಟ್ಟ ಮಹಿಳೆಯಾಗಿದ್ದರು ಎಂದು ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ದಯಾನಂದ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಕಾಲೊನಿಯ ಸಿದ್ದಾರ್ಥ ಭವನದಲ್ಲಿ ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ, ನಾಡೋಜ ಡಾ.ಸಾರಾ ಅಬೂಬಕ್ಕರ್ ಅವರ “ಕೃತಿ ಚಪ್ಪಲಿಗಳು ಆಯ್ದ ಕಥೆಗಳು” ಪುಸ್ತಕ ಓದು ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಶಿಕ್ಷಣದ ಅವಶ್ಯಕತೆ ಇಲ್ಲ, ಗಂಡ ಮನೆ ಮಕ್ಕಳ ಚಾಕರಿ ಮಾಡಿಕೊಂಡು ಇದ್ದರೆ ಸಾಕು. ಗಂಡನ ಅಡಿಯಾಳಾಗಿ ಬದುಕಬೇಕು ಎನ್ನುವ ಧೋರಣೆಯನ್ನು ಸಾರಾ ಅಬೂಬಕರ್ ಅವರು ತೀವ್ರವಾಗಿ ಖಂಡಿಸಿದರು.

ಇಸ್ಲಾಂ ಧರ್ಮದಲ್ಲಿನ ಅವೈಜ್ಞಾನಿಕ ಪದ್ಧತಿಗಳ ವಿರುದ್ಧ ತನ್ನ ಸಾಹಿತ್ಯದ ಖಡ್ಗ ಛಳಪಿಸಿದರು. ಮಹಿಳೆಗೂ ಸಹ ಪುರುಷನಷ್ಟೇ ಘನತೆಯಿಂದ ಬದುಕುವ ಹಕ್ಕು ಇದೆ. ಸಮಾಜದಲ್ಲಿ ಎಲ್ಲರಂತೆ ಹೆಣ್ಣು ಮಕ್ಕಳು ಸಹ ಯಾವುದಕ್ಕೂ ಕಡಿಮೆ ಇಲ್ಲದಂತೆ ಜೀವಿಸಬೇಕು ಎನ್ನುವ ಉದಾತ್ತ ಆಶಯ ಹೊತ್ತು ಹಲವು ಲೇಖನಗಳನ್ನು ಅವರು ಬರೆದರು. ಅಂದಿನ ಮತಾಂದರ ಕೈಗೆ ಸಿಲುಕಿ ಮಲಗಿದರು. ಜೀವ ಬೆದರಿಕೆ ಮಧ್ಯೆಯೂ ಛಲದಿಂದ ಹೋರಾಟ ನಡೆಸಿರುವ ಅವರ ಜೀವನ ಹೋರಾಟ ಹಾಗೂ ಸಮಾನತೆಯ ತತ್ವಗಳು ನಮಗೆ ದಾರಿದೀಪವಾಗಬೇಕಾಗಿದೆ ಎಂದು ಹೇಳಿದರು.

                                                            ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ಪುಸ್ತಕ ಓದುವದರಲ್ಲಿ ಮಗ್ನರಾದರೆ ನಮ್ಮಲ್ಲಿ ಜ್ಞಾನದ ಶಕ್ತಿ ಹೆಚ್ಚುತ್ತದೆ. ಪುಸ್ತಕಗಳ ಓದುವ ಗೀಳು ಅಂಟಿಸಿಕೊಳ್ಳಬೇಕು. ಪುಸ್ತಕ ಓದಿನ ಅಂತಹ ರುಚಿಕರ ಸ್ವಾದಿಷ್ಟ ಮತ್ತೊಂದಿಲ್ಲ ಎಂದರು.

ಶಿಕ್ಷಕಿ ರಜನಿ ಜೆ.ಪಾಟೀಲ ಮಾತನಾಡಿ, ನಾವು ಉತ್ತಮ ಸಾಹಿತ್ಯಯುಳ್ಳ ಪುಸ್ತಕ ಓದಬೇಕು. ಒಳ್ಳೆಯ ಸಾಹಿತ್ಯದ ಅಧ್ಯಯನದಿಂದ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.

ವೇದಿಕೆಯ ಅಧ್ಯಕ್ಷ ಕಾಶೀನಾಥ್ ಹಿಂದಿನಕೇರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರವಿಕುಮಾರ ಕೊಳಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಶ್ರವಣಕುಮಾರ ಮೌಸಲಗಿ ಸ್ವಾಗತಿಸಿದರು. ಶಹಾಬಾದ ವಸತಿ ನಿಲಯದ ಪ್ರಾಂಶುಪಾಲಕ ರವಿಕುಮಾರ, ಹರಿಶ್ಚಂದ್ರ ಕರಣಿಕ, ವೀರಣ್ಣ ಯಾರಿ, ರಘುವೀರ ಪವಾರ, ದೇವಿಂದ್ರ ಕರದಳ್ಳಿ, ಭೀಮರಾಯ ಗಂಗನೋರ ಮಹಿಳಾ ಪ್ರತಿನಿಧಿ ಮಹಾಲಕ್ಷ್ಮೀ ಕೋಳಕೂರ್, ಶರಣಮ್ಮ ನಂದೂರಮಠ ಇದ್ದರು. ಶೋಭಾ ನಿಂಬರ್ಗಾ ಸ್ವಾಗತಿಸಿದರು. ಸಿದ್ಧಯ್ಯಶಾಸ್ತ್ರಿ ನಂದೂರಮಠ ನಿರೂಪಿಸಿ, ವಂದಿಸಿದರು.