ಮಹಿಳಾ ಶಿಕ್ಷಣದಿಂದ ದೇಶದ ಅಭಿವೃದ್ದಿ:ಶಾಸಕ ಖಂಡ್ರೆ

ಭಾಲ್ಕಿ:ಸೆ.11:ಯಾಂತ್ರಿಕ,ತಾಂತ್ರಿಕ ಯುಗದಲ್ಲಿ ಮಹಿಳೆಯರು ಗುಣಮಟ್ಟದ ಶಿಕ್ಷಣ ಪಡೆದರೆ ದೇಶ ಸಾಮಾಜಿಕ,ಆರ್ಥಿಕ,ಸಾಂಸ್ಕøತಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೀವೃಗತಿಯಿಂದ ಬೆಳವಣಿಗೆ ಹೊಂದಲು ಸಾಧ್ಯ ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರುಆದ ಶಾಸಕ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅಕ್ಕಮಹಾದೇವಿ ಕನ್ಯೆ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ 2022-23 ನೇ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಭ,`ಶಿಕ್ಷಕರ ದಿನಾಚರಣೆ’ ಹಾಗೂ ಅರ್ಥಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸರ್ವಪಲ್ಲಿ ರಾಧಾಕೃಷ್ಣನ ಅವರು ಮೇಧಾವಿ ಶಿಕ್ಷಕರಾಗಿ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೇರಿ ಶಿಕ್ಷಕ ವೃತ್ತಿಯ ಘನತೆ ಹೆಚ್ಚಿಸಿದರು.ವಿದ್ಯಾರ್ಥಿನಿಯರು ಆಸಕ್ತಿಯಿಂದ ಅಧ್ಯಯನಗೈದು ಹೆತ್ತ ತೆಂದೆ-ತಾಯಿಗಳಿಗೆ,ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು ಎಂದು ಹೇಳಿ, ಆಯಾ ಪರಿಣಿತ ಉಪನ್ಯಾಸಕರಿಂದ ಕಾರ್ಯಾಗಾರ ಹಮ್ಮಿಕೊಂಡು ಫಲಿತಾಂಶ ಸುಧಾರಿಸಲು ಸಲಹೆ ನೀಡಿದರು.ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಚಾರ್ಯ ಅಂಕುಶ ಡೋಲೆಯವರಿಗೆ ತಿಳಿಸಿದರು.
ಪ್ರತಿಭಾವಂತರಿಗೆ ಸತ್ಕಾರ:

ಕಳೆದ ಸಾಲಿನಲ್ಲಿ ದ್ವಿತೀಯ ಪಿಯುನಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಹಾಗು ಕ್ರೀಡಾ ಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಿ,ಗೌರವಿಸಿದರು.

“ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಮತ್ತು ಡಾ.ಭೀಮಣ್ಣ ಖಂಡ್ರೆ ಅವರ ಪರಿಶ್ರಮದ ಫಲದಿಂದ ಅಕ್ಕಮಹಾದೇವಿ ಕನ್ಯೆ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಿರುವುದರಿಂದ ತಾಲೂಕಿನ ಗ್ರಾಮೀಣ ಬಡ ರೈತಾಪಿ ಕುಟುಂಬದ ಮಹಿಳೆಯರು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು.ವ್ಯಾಪಾರೀಕರಣದ ದೃಷ್ಠಿಯಿಂದ ಶಿಕ್ಷಣ ಸಂಸ್ಥೆ ನಡೆಸದೇ,ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಗಾಗಿ ನಡೆಸಲಾಗುತ್ತಿದೆ. ಪೈಪೋಟಿ ಯುಗದಲ್ಲಿ ಮಹಿಳೆಯರು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಸಾಗಿಸಬೇಕು.”ಈಶ್ವರ ಖಂಡ್ರೆ ಅಧ್ಯಕ್ಷರು,ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಭಾಲ್ಕಿ.