ಮಹಿಳಾ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಸ್ಮರಣೀಯ

ಕಲಬುರಗಿ,ಜ.4: ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಪ್ರಗತಿ ಅವಶ್ಯ. ಈ ದಿಸೆಯಲ್ಲಿ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಸದಾ ಸ್ಮರಣೀಯವಾದುದು ಎಂದು ಸಾಹಿತಿ ಧರ್ಮಣ್ಣ ಎಚ್ ಧನ್ನಿ ಹೇಳಿದರು.
ನಗರದ ಎಸ್ ಆರ್ ಕಾಂಪ್ಲೆಕ್ಷ ಸಭಾಂಗಣದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಮಹಿಳಾ ಘಟಕ ಹಾಗೂ ಡಾ. ಅಂಬೇಡ್ಕರ ಸೇನೆಯ ಸಹಯೋಗದಲ್ಲಿ ಏರ್ಪಡಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಶಿಕ್ಷಣದಿಂದ ಸಾದ್ಯ ಎಂದರಿತ ಫುಲೆ ದಂಪತಿಗಳು ಶಾಲೆಯೊಂದು ತೆರೆದು ಶಿಕ್ಷಣಕ್ಕೆ ಬುನಾದಿ ಹಾಕಿದರು. ಬುದ್ಧ, ಬಸವ ಡಾ. ಅಂಬೆಡ್ಕರವರ ಚಿಂತನೆಗಳು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಪ್ರಬುದ್ಧ ಭಾರತ ಕಟ್ಟಬೇಕಾಗಿದೆ ಎಮದರು.
ಮರಾಠಿ ಕವಯತ್ರಿ ಅಮರಪಾಲಿ ಘಾಳೆಪ್ಪ ರತನಶೀಲ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣ ಕೇಂದ್ರಗಳನ್ನು ಆರಂಭಿಸಿ ಸ್ತ್ರೀ ಕುಲದ ಉದ್ಧಾರಕ್ಕೆ ಶ್ರಮಿಸಿದರು. ಫು;ಲೆ ದಂಪತಿಗಳು ಬಾಲ್ಯ ವಿವಾಹ ನಿಷೇಧ, ಸತಿಸಹಗಮನ ಪದ್ಧತಿ, ಜಾತಿ ಅಸಮಾನತೆ ನಿರ್ಮೂಲನೆಗಾಗಿ ಅವಿರತ ಹೋರಾಟ ಕೈಗೊಂಡು ಯಸಶ್ವಯಾದರು ಎಂದರು.
ಡಾ. ಅಂಬೆಡ್ಕರ ಸೇನೆಯ ಮಹಿಳಾ ಘಟಕಧ್ಯಕ್ಷೆ ಶೀಲಾ ಗಾಯಕವಾಡ ಅಧ್ಯಕ್ಷತೆ ವಹಿಸಿದರು.
ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವಕುಮಾರ ಮಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ಶಿಕ್ಷಕಿ ಗೀತಾ ಭರಣಿ, ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಈರಣ್ಣ ಜಾನಿ, ಶಿವನಿಂಗಮ್ಮ ಸಾವಳಗಿ, ಯಶೋಧಾ ಕುಸನೂರ ಮಾತನಾಡಿದರು. ಮುಖಂಡರಾದ ಮಾರುತಿ ಲೆಂಗಟಿ, ರಾಜು ಹರಸೂರ, ಸುನೀಲ ಕೋರವಾರ ಹಾಗೂ ಮತ್ತಿತರರು ಭಾಗವಹಿವಹಿಸಿದರು. ಕಲಾವಿದ ಎಂ ಎನ್ ಸುಗಂಧಿ ರಾಜಾಪೂರ ಅವರು ಪ್ರಾರ್ಥನಾ ಗೀತೆ ಹಾಗೂ ನಿರೂಪಣೆ ಮಾಡಿದರು.