
ವಿಜಯಪುರ: ಎ.27:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಆಡಳಿತ ಮತ್ತು ಶೈಕ್ಷಣಿಕ ಪರಿಶೀಲನಾ (ಎಎಎ) ಸಮಿತಿಯು ವಿಶ್ವವಿದ್ಯಾನಿಲಯದ ಶೈಕ್ಷಣಿಕ, ಸಂಶೋಧನಾ, ಆಡಳಿತ ಹಾಗೂ ವಿಸ್ತರಣಾ ಚಟುವಟಿಕೆಗಳ ಮೌಲ್ಯಮಾಪನ ನಡೆಸಿ ಕುಲಪತಿಗಳಿಗೆ ವರದಿ ನೀಡಿತು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೆÇ್ರ. ಟಿ.ಡಿ. ಕೆಂಪರಾಜು ಸಮಿತಿಯ ಅಧ್ಯಕ್ಷರಾಗಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೆÇ್ರ. ಎಸ್. ಟಿ. ಬಾಗಲಕೋಟಿ, ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕ ಪೆÇ್ರ. ಎ. ಎಮ್.ಖಾನ್, ಬೆಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಮಾಜಿ ಡೀನರಾದ ಪೆÇ್ರ. ಕೆ. ಈರೇಸಿ ಸಮಿತಿಯ ಸದಸ್ಯರಾಗಿದ್ದರು.
ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಸಮಿತಿಯನ್ನು ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಬಿ.ಕೆ. ತುಳಸಿಮಾಲ ಸ್ವಾಗತಿಸಿ, ವಿಶ್ವವಿದ್ಯಾನಿಲಯದ ವಿವಿಧ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಬಳಿಕ ಎರಡು ತಂಡವಾಗಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗ, ಕೇಂದ್ರ, ಕೋಶ, ನಿರ್ದೇಶನಾಲಯ ಹಾಗೂ ಘಟಕಗಳಿಗೆ ಭೇಟಿ ನೀಡಿದ ಸಮಿತಿಯು ವಿಶ್ವವಿದ್ಯಾನಿಲಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.
ಸಮಿತಿಯ ನಿರ್ಗಮನ ಸಭೆಯಲ್ಲಿ ಕುಲಸಚಿವ ಪೆÇ್ರ. ಬಿ. ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪೆÇ್ರ. ಎಚ್. ಎಮ್. ಚಂದ್ರಶೇಖರ್, ಐಕ್ಯುಎಸಿ ನಿರ್ದೇಶಕ ಪೆÇ್ರ. ಪಿ. ಜಿ. ತಡಸದ, ಎಎಎ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ರೇಣುಕಾ ಮೇಟಿ, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.