ಮಹಿಳಾ ವಿವಿ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಯತ್ನಾಳ

ವಿಜಯಪುರ, ನ.10-ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳರವರು ತೊರವಿ ರಸ್ತೆಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಚನ ಸಂಗಮ ತೊರವಿ ವಿಜಯಪುರ. ಗಿರಿಜನ ಉಪಯೋಜನೆ (ಟಿ.ಎಸ್.ಪಿ) ಅಡಿಯಲ್ಲಿ ನಿರ್ಮಿಸಿದ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಿ ಮಾತನಾಡಿದರು.
ಹಿಂದೆ ನಾನು ಎಂ.ಪಿ ಇದ್ದಾಗ, ನನ್ನನ್ನು ಸೇರಿ ಎಲ್ಲ ಎಂ.ಪಿ ಗಳಿಗೂ ಸಹ ಲ್ಯಾಪ್‍ಟಾಪ ನೀಡಿದ್ದರು, ಆವಾಗ ನಾನು ಯಾವ ಯಾವ ಹಳ್ಳಿಗಳಿಗೆ ಹೋಗಿ ಸಾರ್ವಜನಿಕರ ಸಮಸ್ಯಗಳನ್ನು ಬೇಡಿಕೆಗಳನ್ನು, ಸಂಗ್ರಹಿಸಿದ್ದೆನೋ ಅವನ್ನೆಲ್ಲ ಆ ಲ್ಯಾಪ್‍ಟಾಪ್ ನಲ್ಲಿ ಎಂಟ್ರಿ ಮಾಡಿಕೊಳ್ಳುತ್ತಿದ್ದೆ ಎಂದರು.
ಅಂದು ಅಟಲ್‍ಬಿಹಾರಿ ವಾಜಪೇಯಿಯವರು ಎರಡು ಸ್ಕೀಮ್ ಈ ದೇಶದಲ್ಲಿ ಲಾಗೂ ಮಾಡಿದ್ದರು, ಒಂದು ಸರ್ವ ಶಿಕ್ಷಣ ಅಭಿಯಾನ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಡಿ.ಡಿ.ಪಿ.ಐ ಪಿ.ಎಂ.ಜಿ.ಎಸ್.ಆಯ್ ನಿಂದ ವಿಶೇಷ ಇಲಾಖೆಯನ್ನು ಮಾಡಿದ್ದರು ಅವರು ಒಮ್ಮೆಲೆ ರಸ್ತೆ, ಹಾಗೂ ಶಾಲಾ ಕಟ್ಟಡ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಎಂ.ಪಿ ಗಳೇ ಲಿಸ್ಟ ಕೋಡಬೇಕೆಂದಾಗ ನನ್ನ ಹತ್ತಿರ ಕೈಗೆತ್ತಿಕೊಳ್ಳಬೇಕಾದ ಎಲ್ಲ ಕಾಮಗಾರಿಗಳ ಪಟ್ಟಿ ತಯಾರಿದ್ದಿದ್ದರಿಂದಾಗಿ ಆಗಿಂದಾಗೆ ಕೊಟ್ಟೆ. ಆ ರೀತಿಯಾಗಿ ಹಳ್ಳಿ ಹಳ್ಳಿಗಳಿಗೆ ಸುತ್ತಿ ಕೆಲಸ ಮಾಡಿದ್ದೇನೆ ಎಂದು ತಮ್ಮ ಸಂಸದರಾಗಿದ್ದಾಗಿನ ಲ್ಯಾಪ್‍ಟಾಪ್ ವಿಷಯವನ್ನು ನೆನಪಿಸಿಕೊಂಡರು.
ವಿದ್ಯಾರ್ಥಿಗಳು ಸರಕಾರ ನೀಡಿರುವಂತಹ ಈ ಲ್ಯಾಪ್‍ಟಾಪ್‍ಗಳನ್ನು ತಮ್ಮ ಉತ್ತಮ ವಿದ್ಯಾರ್ಜನೆಗಾಗಿ ಬಳಸಿಕೊಂಡು, ರಾಷ್ಟ್ರದಲ್ಲಿ ಉತ್ತಮ ಸಾಧಕರಾಗಿ ಹೊರಹೊಮ್ಮಿ ಎಂದು ಕರೆ ನೀಡಿದರು.
ಆಧುನಿಕ ಯುಗದಲ್ಲಿ ಗಣಕಯಂತ್ರದ ಪಾತ್ರ ಬಹು ಮುಖ್ಯವಾಗಿದ್ದು, ಜಗತ್ತು ಅಂಗೈಯಲ್ಲಿ ಎಂಬಂತೆ ಎಲ್ಲವನ್ನು ಸಹ ಈ ಗಣಕಯಂತ್ರದ ಮೂಲಕವೇ ಮಾಡುವಂತಹ ವ್ಯವಸ್ಥೆ ನಿರ್ಮಾಣವಾಗಿದ್ದು ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಎಂದರು.
ರಾಜ್ಯದಲ್ಲಿ ಎಲ್ಲ ವಿಶ್ವವಿದ್ಯಾಲಯಗಳು ಸಹ ಅಭಿವೃದ್ದಿಯಾಗಬೇಕಾಗಿದೆ, ಅಂದಾಗ ಮಾತ್ರ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದಂತಾಗುತ್ತದೆ. ಅದರಂತೆಯೇ ವಿಜಯಪುರ ಜಿಲ್ಲೆಗೂ ಸಹ ವೈದ್ಯಕೀಯ ಕಾಲೇಜು ಅವಶ್ಯವಿದ್ದು ಆದಷ್ಟು ಶೀಘ್ರವಾಗಿ ವೈದ್ಯಕೀಯ ಕಾಲೇಜು ತರಲು ಪ್ರಯತ್ನಿಸಲಾಗುವುದು ಎಂದರು.
ವಿಜಯಪುರ ನಗರದಲ್ಲಿ ಸುಮಾರು 30 ಕಡೆ ಓಪನ್ ಜಿಮ್‍ಗಳನ್ನು ಮಾಡಲಾಗಿದ್ದು ಈ ವಿಶ್ವವಿದ್ಯಾಲಯದಲ್ಲಿಯೂ ಸಹ ಶಾಸಕರ ಅನುದಾನದಲ್ಲಿ ಓಪನ್ ಜಿಮ್ ಮಾಡಲಾಗುವುದು ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಎಂ.ರಾಮಚಂದ್ರಗೌಡ, ಹಣಕಾಸು ಅಧಿಕಾರಿಗಳಾದ ಪ್ರೊ.ಡಿ.ಎನ್.ಪಾಟೀಲ, ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಮ್.ಹುರಕಡ್ಲಿ, ನಿರ್ದೇಶಕರಾದ ಡಾ.ಪರಶುರಾಮ ಬನ್ನಿಗಿಡದ, ಪಿ.ಡಬ್ಲೂ.ಡಿ ಅಭಿಯಂತರರಾದ ಬಿ.ಬಿ.ಪಾಟೀರ್ಳ, ಗುತ್ತಿಗೆದಾರರಾದ ಗುರು ಕೌಲಗಿ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.