ಮಹಿಳಾ ವಿಚಾರಗೋಷ್ಠಿ, ಸಾಧನಾ ಸಮಾವೇಶ


ಶಿರಹಟ್ಟಿ,ಮಾ.6: ಸ್ತ್ರೀಶಕ್ತಿಯಿಂದಲೇ ಜಗತ್ತು ನಡೆಯುತ್ತಿದೆ ಎಂಬ ಮಾತು ಪುರಾತನ ಕಾಲದಿಂಲೂ ಕೇಳಿಬರುತ್ತಿದೆ. ಸ್ತ್ರೀ ಮನಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪ್ರಸ್ತುತ ಸಮಾಜದಲ್ಲಿ ಪುರಷನಷ್ಟೇ ಸ್ತ್ರೀಯರಿಗೆ ಸಮಾನತೆ ಬುರುವುದು ಅಗತ್ಯವಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಗ್ರಾಮಪಂಚಯತ ಬೆಳ್ಳಟ್ಟಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪದದಲ್ಲಿ ಹೇಳುವಂತೆ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ತಾಯಿ ಸ್ಥಾನವನ್ನು ತುಂಬುವ ಸ್ತ್ರೀ ಸಹನಾ ಮೂರ್ತಿಯಾಗಿದ್ದು, ಕುಟುಂಬವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಪುರುಷರ ಜವಾಬ್ದಾರಿ ಕಡಿಮೆ ಇದೆ ಆದ್ದರಿಂದ ಸ್ತ್ರೀಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹ ಮಠದದ ಬಸವರಾಜ ಸ್ವಾಮಿಜಿಗಳು ಉದ್ಘಾಟನೆ ನೆರವೇರಸಿ ಮಾತನಾಡಿ, ಸಮಾಜ ಸುಸ್ಥಿತಿಯಲ್ಲಿರಬೇಕಾದರೆ ಮನೆಯ ಒಡತಿ ಸುಶಿಕ್ಷಿತಳಾಗಿರಬೇಕು. ಸಮಾಜದ ಎಲ್ಲ ದೃಷ್ಠಿಕೋನಗಳನ್ನು ಅರಿತುಕೊಂಡು ಮುನ್ನಡೆಯ ಬೇಕಾಗಿದೆ. ಕುಟಂಬದ ಸಮತೋಲನವನ್ನು ಕಾಪಾಡಿಕೊಳ್ಳಲು ಸಮಗ್ರಜ್ಞಾನವನ್ನು ಹೊಂದುವುದು ಅಗತ್ಯವಿದೆ. ಆದ್ದರಿಂದ ವಿಚಾರಗೋಷ್ಠಿಯ ಸಾರ್ಥಕವಾಗಬೇಕಾದರೆ ಇಲ್ಲಿ ಜರಗುವ ಎಲ್ಲ ವಿಚಾರಗೋಷ್ಠಿಗಳನ್ನು ಚನ್ನಾಗಿ ಅರಿತುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಬದುಕು ಕಟ್ಟಿಕೊಳ್ಳಲು ಹೊರಾಟ ನಡೆಸುತ್ತಿರುವ ಹಲವಾರು ಕುಟುಂಬಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆರ್ಥಿಕ ಸಹಾಯ ಮಾಡುವ ಮೂಲಕ ಪುನ:ಚೇನತಗೊಳಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕಾರ್ಯಕ್ರಮದಲ್ಲಿನ ತಾಲೂಕ ಯೋಜನಾಧಿಕಾರಿ, ಶಿವಣ್ಣ ಎಸ್. ಪ್ರಾಸ್ತಾವಿಕ ಮಾತನಾಡಿದರು. .ಯೋಜನೆಯ ಪ್ರಾದೇಶಿ ನಿರ್ದೇಶಕ ಗಣೇಶ ಬಿ ಜ್ಞಾನ ವಿಕಾಶ ಯೋಜನೆ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಶಿರಹಟ್ಟಿ ಜ.ಫಕ್ಕಿರ ಸಿದ್ದರಾಮ ಮಹಾಸ್ವಾಮಿಜಿಗಳು ಕುಂಭ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವೇಕಾನಂದ ಶಾಲಾ ಆವರಣದಲ್ಲಿ ಮುಕ್ತಾಯಗೊಂಡಿತು.