ಮಹಿಳಾ ಮೀಸಲಾತಿ ಮಸೂದೆ ಮಂಡನೆ ಶಶಿಕಲಾ.ಬಿ. ಪಾಟೀಲ ಹರ್ಷ

ಸೈದಾಪುರ:ಸೆ.21:ಹೊಸ ಪಾರ್ಲಿಮೆಂಟ ಭವನದಲ್ಲಿ ಮೊದಲ ದಿನವೇ ಮಹಿಳೆಯಿರಿಗೆ ಶೇ33 ಸ್ಥಾನ ಮೀಸಲಾತಿ ಮಸೂದೆಯನ್ನು ಸರಕಾರ ಮಂಡನೆ ಮಾಡಿರುವುದು ಶಾಸನ ಸಭೆಯಲ್ಲಿ ಮಹಿಳೆಯರ ಶಕ್ತಿ ಹೆಚ್ಚಾಗುವಂತೆ ಮಾಡಿದೆ ಎಂದು ಸೈದಾಪುರ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಶಿಕಲಾ ಭೀಮಣ್ಣಗೌಡ ಪಾಟೀಲ ಕ್ಯಾತನಾಳ ಹರ್ಷವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 27 ವರ್ಷಗಳಿಂದ ನಿರೀಕ್ಷಣೆಯಲ್ಲಿದ್ದವರಿಗೆ ಮೋದಿಜಿ ಸರಕಾರ ಇದಕ್ಕೆ ಮಹತ್ವ ನೀಡಿ ವಿದೇಯಕ ಮಂಡನೆ ಮಾಡಿರುವುದು ಐತಿಹಾಸಿಕ ನಿರ್ಣವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು. ದೇಶದ ಅರ್ಧದಸ್ಟು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಅವರುಗಳ ಸಮಸ್ಯೆಗಳನ್ನು ಕಂಡುಕೊಳ್ಳಲು ಉತ್ತಮ ವೇದಿಕೆ ಅತಿ ಮುಖ್ಯವಾಗಿದ್ದೂ ಮಿಸಲಾತಿಯ ಕ್ರಮ ಕೈಗೊಂಡರೆ ಅವಕಾಶ ಕಲ್ಪಿಸಿದಂತಾಗಿದೆ. ರಾಜ್ಯ ಸಭೆ ಸೇರಿದಂತೆ ರಾಜ್ಯದ ವಿಧಾನ ಸಭೆಗಳು ಇದಕ್ಕೆ ಬೆಂಬಲ ನೀಡಬೇಕು. ಇದರಿಂದ ಪ್ರಪಂಚದಲ್ಲಿ ಮಾದರಿಯಾದ ಪ್ರಜಾಪ್ರಭುತ್ವ ನಮ್ಮದಾಗುತ್ತದೆ ಎಂದು ಹೇಳಿದರು.