ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ”


ಸಂಜೆವಾಣಿ ವಾರ್ತೆ
ಸಿರಿಗೇರಿ.ಜು10. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿನ್ನೆ ಜು.9 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮ.ಮ.ಕ.ಇಲಾಖೆ ಬಳ್ಳಾರಿ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು 02 ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷೆ ಹೊಳಗುಂದೆ ಲಕ್ಷ್ಮೀ ದ್ಯಾವಣ್ಣ  ಅಧ್ಯಕ್ಷತೆ ವಹಿಸಿದ್ದರು. ಮಮಕ ಇಲಾಖೆ ಕೋ ಆರ್ಡಿನೇಟರ್ ಮಂಜುನಾಥ ಪ್ರಾಸ್ತಾವಿಕ ಮಾತನಾಡಿ, ಇತ್ತೀಚೆಗೆ ಬಾಲ್ಯವಿವಾಹ, ಮಕ್ಕಳ ಹಕ್ಕುಗಳು, ಪೋಕ್ಸೋ, ಹೆಣ್ಣುಗಂಡು ಸಮಾನ ಅವಕಾಶ, ಬೇಟಿ ಪಡಾವೋ ಬೇಟಿ ಬಚಾವೋ ವಿಷಯಗಳಿಗೆ ಹೆಚ್ಚು ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಸಮಾಜದ ಸ್ವಾಸ್ಥ್ಯಕ್ಕಾಗಿ ಪೋಷಕರು ಸಂಘಟನೆಗಳ ಮುಖಂಡರು, ಯುವಕರು ಕೈಜೋಡಿಸಿ ಬಾಲ್ಯವಿವಾಹಗಳು ನಡೆಯದಂತೆ, ಮಕ್ಕಳಿಗೆ ಸಿಗುವ ಹಕ್ಕುಗಳನ್ನು ಕೊಡಿಸುವದಕ್ಕಾಗಿ, ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಪ್ರೇಮ, ಲೈಂಗಿಕ ಹಗರಣಗಳಲ್ಲಿ ಸಿಲುಕಿ ಪೋಕ್ಸೋ ಕಾಯಿದೆ ಅಡಿಯಲ್ಲಿ ಜೈಲಿಗೆ ಹೋಗುವದನ್ನು ತಡೆಯಲು, ಗಂಡುಹೆಣ್ಣು ತಾರತಮ್ಯ ಮಾಡದಂತೆ, ಹೆಣ್ಣುಮಗುವನ್ನು ಚನ್ನಾಗಿ ಓದಿಸುವುದು, ಹೆಣ್ಣುಮಗುವಿನ ಮೇಲೆ ಆಗುವ ದೌರ್ಜನ್ಯವನ್ನು ತಡೆಯುವ ಕೆಲಸಗಳಲ್ಲಿ ಆಯಾ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕೆಂದು ತಿಳಿಸಿ, ಇತ್ತೀಚೆಗೆ ನಡೆದಿದೆ ಎನ್ನಲಾದ ಪೋಕ್ಸೊ ಕಾಯಿದೆ ಅಡಿಯಲ್ಲಿ ಬರುವ ಪ್ರಕರಣವೊಂದರ ಮಾಹಿತಿಯ ಉದಾಹರಣೆ ನೀಡಿದರು.
ಈ ಪ್ರಮುಖ ವಿಷಯಗಳ ತಡೆಗಾಗಿ ಅನುಷ್ಠಾನಕ್ಕಾಗಿ ಪ್ರತಿಜ್ಞಾ ವಿಧಿಯನ್ನು ಬೋದಿಸಿ ಸ್ವೀಕರಿಸಲಾಯಿತು. ನಂತರ ಪಿಡಿಓ ಯು.ರಾಮಪ್ಪ ಮಾತನಾಡಿ ಸ್ಥಳೀಯ ಗ್ರಾ.ಪಂ. ಮಟ್ಟದಲ್ಲಿ ಈ ಪ್ರಮುಖ 5ವಿಷಯಗಳ ಮೇಲೆ ಗ್ರಾ.ಪಂ.ಅದ್ಯಕ್ಷರು, ಪಿಡಿಓ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಸಂಘಟನೆ ಮುಖಂಡರನ್ನು ಒಳಗೊಂಡು ಸಮಿತಿ ರಚನೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿಯೇ ಈ ವಿಷಯಗಳು ಹೆಚ್ಚು ನಡೆಯುತ್ತಿರುವುದರಿಂದ ಸಮಿತಿಯಿಂದ ಇವುಗಳ ತಡೆಗಾಗಿ ಪ್ರಯತ್ನಿಸಲಾಗುತ್ತಿದೆ. ಇಂತ ವಿಷಯಗಳು ಯಾರಿಗೇ ಕಂಡುಬಂದರೂ 1098 ಕ್ಕೆ ಕರೆಮಾಡಿ ದೂರು ನೀಡಬಹುದು. ದೂರು ನೀಡಿದವರ ಹೆಸರು ಗೌಪ್ಯವಾಗಿರುತ್ತದೆ. ಧೈರ್ಯವಾಗಿ ಇವುಗಳನ್ನು ತಡೆಯುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಮ.ಮ.ಕ.ಇಲಾಖೆಯ ಕೇಸ್ ವರ್ಕರ್ ಉಮೇಶ್ 5ವಿಷಯಗಳ ಮಾಹಿತಿ ನೀಡಿ ಅವುಗಳ ತಡೆಯುವ ನಿಟ್ಟಿನಲ್ಲಿ ಇಲಾಖೆಗೆ, ಅಧಿಕಾರಿಗಳಿಗೆ ಮಾಹಿತಿ ನೀಡುವ ವಿಧಾನಗಳನ್ನು, ಇವುಗಳಲ್ಲಿ ಪಾಲ್ಗೊಂಡವರಿಗೆ ಕಾನೂನಿನಲ್ಲಿ ಆಗುವ ಶಿಕ್ಷೆಗಳ ಕುರಿತು ತಿಳಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷೆ ರಾಜಮ್ಮಡ್ರೈವರ್‍ಹುಲುಗಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಬಕಾಡೆಈರಯ್ಯ, ಶಾಲೆಯ ಸಹ ಶಿಕ್ಷಕರಾದ ಜ್ಯೋತಿ, ಅನ್ನಿವೇಲು, ವೆಂಕಟೇಶ್, ಮೊಹಮ್ಮದ್‍ಖಾಸಿಂ, ಬಾಲಕಿಯರ ಪ್ರೌಢಶಾಲೆ ದೈ.ಶಿಕ್ಷಕ ಕೃಷ್ಣಮೂರ್ತಿ, ಅಂಗನವಾಡಿ ಮೇಲ್ವಿಚಾರಕಿ ಗಂಗಮ್ಮ, ಅಂಗನವಾಡಿ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.