ರಾಯಚೂರು, ಆ.೦೩- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಿಶು ಅಭಿವೃದ್ಧಿ ಯೋಜನೆ ಗಿಲ್ಲೇಸೂಗೂರು ತಾಲೂಕು ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ ನಾಯಕ ಅವರು ಸ್ವಾತಂತ್ರ ಸಂಗ್ರಾಮದಿಂದ ಮಹಾತ್ಮ ಗಾಂಧಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟರು.
ಅಹಿಂಸಾ ಮೂಲಕ ದೇಶ ರಕ್ಷಣೆಯಲ್ಲಿ ಆತ್ಮ ಗಾಂಧೀಜಿಯವರ ಆದರ್ಶ ಅತ್ಯಂತ ಮಹತ್ವವಾಗಿದೆ. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯಬೇಕೆಂದು ಕರೆ ನೀಡಿದರು.
ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತ ಸರ್ವಕಾಲಿಕ ಶ್ರೇಷ್ಠವಾದುದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಎಂದರು.
ಈ ಸಂದರ್ಭದಲ್ಲಿ ಅಮರಮ್ಮ ಪಾಟೀಲ್, ಯಲ್ಲವ್ವ, ತಯಾರಾಸುಲ್ತಾನ್, ಬಸಮ್ಮ, ರೇಖಾ, ಸ್ತ್ರೀ ಶಕ್ತಿ ಒಕ್ಕೂಟ ತಾಲೂಕು ಅಧ್ಯಕ್ಷ ಈರಮ್ಮ, ಸೃಜನ, ನರಸರೆಡ್ಡಿ, ಜಗದೀಶ, ರಾಜೇಶ್ವರಿ, ರಾಜೇಶ್ವರಿ ಸೇರಿದಂತೆ ಉಪಸ್ಥಿತರಿದ್ದರು.