ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿವಿಧ ಇಲಾಖೆ ವಿವಿಧ ಯೋಜನೆಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ

ಕಲಬುರಗಿ: ಅ. 08: ಒನ್ ಸ್ಟಾಫ್ ಸೆಂಟರ್ ಕೇಂದ್ರ ಸರ್ಕಾರದ ಪ್ರಗತಿಯನ್ನು ಪರಿಶೀಲಿಸಿದರು ಸಖೀ ಕೇಂದ್ರದ ಸಿಬ್ಬಂದಿಯವರಿಗೆ 3 ತಿಂಗಳಿಂದ ಸಂಬಳ ಬಂದಿರುವುದಿಲ್ಲವೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇಲಾಖೆಯ ಪ್ರಧಾನ ಕಛೇರಿಗೆ ಮಾತನಾಡಿ, ಸಂಬಳದ ಅನುದಾನ ಬಿಡುಗಡೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ. ಫೌಜಿಯ್ ತರನ್ನುಮ್ ಅವರು ಸೂಚಿಸಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 2 ಸ್ವಾಧಾರ ಗೃಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಹಾದೇವಿ ತಾಯಿ ವಿದ್ಯಾವರ್ಧಕ ಸಂಸ್ಥೆಯವರು, ಸ್ವಾಧಾರ ಗೃಹ ಕೇಂದ್ರದಲ್ಲಿ 29 ಫಲಾನುಭವಿಗಳಿರುತ್ತಾರೆ. ಅವರಿಗೆ ಟೇಲರಿಂಗ್,ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ ಮತ್ತು ಮನೆಕೆಲಸಗಳಿಗಾಗಿ ಕಳಹಿಸಲಾಗುತ್ತದೆ ಎಂದು ಹೇಳಿದರು. ಸರ್ವೊದಯ ಶಿಕ್ಷಣ ಸಂಸ್ಥೆಯವರು ತಮ್ಮ ಸ್ವಾದಾರ ಗೃಹದ ವಿವರವನ್ನು ಸಲ್ಲಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದ್ಯಸ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಮಾತನಾಡಿ, ಫಲಾನುಭವಿಗಳಿಗೆ ಆಹಾರ ತಯಾರಿಕೆ ಬೇಕರಿ ತಿನ್ನುಸಗಳ ತಯಾರಿಕೆ ಬಗ್ಗೆ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.ಉದ್ಯೋಗಸ್ಥಾ ಮಹಿಳೆಯರು ವಸತಿ ನಿಲಯ ಕಲಬುರಗಿ ನಗರದಲ್ಲಿ ಇಲಾಖೆವತಿಯಿಂದ ಉದ್ಯೋಗಸ್ಥ ಮಹಿಳೆಯರುಗಾಗಿ ವಸತಿ ನಿಲಯ ನಡೆಸಲಾಗುತ್ತಿದೆ 11 ಜನ ಫಲಾನುಭವಿಗಳಿರುತ್ತಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನ ಯು ಅವರು ಹೇಳಿದರು.
(ಲಿಂಗತ್ವ ಅಲ್ಪ ಸಂಖ್ಯಾತರು) ಅಧಿನಿಯಾಮ; ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಟ್ರಾನ್ಸ್ ಜೇಂಡರ್ ಐ.ಡಿ ಮಾಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು. ಟ್ರಾನ್ಸ್ ಜೇಂಡರ್ ಸಂಖ್ಯೆ ನಗರ ಪ್ರದೇಶಗಳಲ್ಲಿ ಜಾಸ್ತಿ ಇರುತ್ತದೆ .ಸರ್ಕಾರದ ವಿವಿಧ ಯೋಜನೆಗಳಡಿ ನಿವೇಶನ ಒದಗಿಸಲು ಕ್ರಮ ಕೈಕೋಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಸಂಬಂಧಿಸಿದ ಗ್ರಾ.ಪಂ. ಯಲ್ಲಿ ನಿವೇಶನ ರಹಿತರ ಹೆಸರನ್ನು ಸೇರ್ಪಡೆ ಮಾಡಲು ತಿಳಿಸಿದರು. ಸಭೆಯಲ್ಲಿ ದಮಾನಿತ ಮಹಿಳೆಯರಿಗೆ ನೀಡುವ ಸೌಲಭ್ಯಗಳ ಕುರಿತು ಮತ್ತು ಜೀವನ ನಿರ್ವಹಣೆ ಚಟುವಟಿಕೆಗಳ ಕುರಿತು ಜಿಲ್ಲಾಧಿಕಾರಿಗಳು ಚರ್ಚಿಸಲಾಯಿತು
ಕೌಟಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಪ್ರಕರಣಗಳ ಕುರಿತು ಚರ್ಚಿಸಲಾಯಿತು. ರಾಜ್ಯ ಮಹಿಳಾ ನಿಲಯದ ಫಲಾನಿಭವಿಗಳ ಕುರಿತು ಚರ್ಚಿಸಲಾಗಿ ರಾಜ್ಯಾ ರಾಜ್ಯ ಮಹಿಳಾ ನಿಲಯಕ್ಕೆ ಕಟ್ಟಡ ನಿರ್ಮಾಣದ ಕುರಿತು ಚರ್ಚಿಸಿ ಇಲಾಖೆ ಮತ್ತು ಕೆ.ಕೆ.ಆರ್.ಡಿ.ಬಿ ವತಿಯಿಂದ ಅನುದಾನ ಪಡೆಯಲು ಜಿಲ್ಲಾಧಿಕಾರಿಗಳು ಸೂಚಿಸಿದರು
ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಸೂಚಿಸಿದರು.
ಬಾಲ್ಯ ವಿವಾಹ: 2023-24 ನೇ ಸಾಲಿನಲ್ಲಿ ದಿನಾಂಕ 31-07-2023 ಸೇಡಂ ತಾಲ್ಲೂಕಿನಲ್ಲಿ ಒಂದು ಬಾಲ್ಯಾ ವಿವಾಹ ಜರುಗಿದ್ದು ಎಫ್ ಆರ್ ದಾಖಲಿಸಲು ಸಿಡಿಪಿಓ ರವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಸ್ಫೂರ್ತಿ ಯೋಜನೆ: ಹದಿಹರೆಯದ ಹೆಣ್ಣು ಮಕ್ಕಳ ಸಬಲೀಕರಣ ಕಾರ್ಯಕ್ರಮ ಕೆ.ಹೆಚ್.ಪಿ.ಟಿ ಸಂಸ್ಥೆಯಿಂದ ನಡೆಯುತ್ತಿದ್ದು, ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು ಸ್ಫೂರ್ತಿ ಯೋಜನೆಯಾಡಿ ತರಬೇತಿ ಪಡೆದ ಬಾಲಕಿಯರ ಜೊತೆಗೆ ಜಿಲ್ಲಾಧಿಕಾರಿಗಳು ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಅಂಬಾರಾಯ ರುದ್ರವಾಡಿ, ಆರ್.ಸಿ.ಎಚ್.ಅಧಿಕಾರಿ ಶರಣಪ್ಪ ಖ್ಯಾತನಾಳ,ಡಾ. ಚಂದ್ರಕಾಂತ ನರಿಬೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ, ಪೋಲಿಸ್ ಇಲಾಖೆ ಅಧಿಕಾರಿಗಳು ತಾಲೂಕಾ ಮಟ್ಟದ ಸಿ.ಡಿ.ಪಿ.ಓ.ಜಿಲಾಮಟ್ಟದ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸೇರಿದಂತೆ ದಮನಿತ ಮಹಿಳೆಯರು ವಿವಿಧ ಸಂಘ ಸಂಸ್ಥೆಗಳು ಸಭೆಯಲ್ಲಿ ಹಾಜರಿದ್ದರು.