ಮಹಿಳಾ ಮತದಾನ ಹೆಚ್ಚಾಗಿರಲಿ : ಸುಮಿತ್ ಮಾಸ್ಟರ್

ಕಲಬುರಗಿ:ಮೇ.6: ಜಿಲ್ಲೆಯ ಎಮ್. ಜಿ ರಸ್ತೆಯಲ್ಲಿರುವ ಸುಮಿತ ಡ್ಯಾನ್ಸ ಮತ್ತು ಫಿಟ್ನೆಸ್ ಸ್ಟುಡಿಯೋನಲ್ಲಿ ಯೋಗ ತರಬೇತಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಸುಮಿತ್ ಮಾಸ್ಟರ್ ಅವರು ಮಾತನಾಡಿ, ದೇಶದ ಪ್ರಜೆಗಳಾದ ನಾವು ನಾಳೆ ದಿನಾಂಕ ಮೇ 7 ರಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಮತದಾನ ಮಾಡುವಲ್ಲಿ ಹಿಂದೆ ಉಳಿಯಬಾರದು ಎಂದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಮತದಾನ ಶ್ರೇಷ್ಠ ಕಾರ್ಯ, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ತೋರಬೇಕು. ಪ್ರತಿಯೊಬ್ಬರು ಮತದಾನ ಮಾಡಿ ನಿಮ್ಮ ಸುತ್ತುಮುತ್ತಲಿನ ಜನರು ಕೂಡ ಮತದಾನದಿಂದ ಹಿಂದೆ ಉಳಿಯದಂತೆ ನೋಡಿಕೊಳ್ಳಿ, ನಮ್ಮ ಒಂದು ಮತ ನಮ್ಮ ಮುಂದಿನ ಭವಿಷ್ಯ ಬದಲಾಯಿಸಬಹುದು. ಅತೀ ಹೆಚ್ಚು ಮತದಾನ ಆಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ನಮ್ಮ ಮತ ನಮ್ಮ ಹಕ್ಕು ಹೀಗಾಗಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತರಬೇತಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನೂ ತಿಳಿಸಿದರು.

ಇದೇ ಸಂದರ್ಭದಲ್ಲಿ ಟ್ರೇನರ್ ಸೋನಿಯಾ ಪುರೋಹಿತ್, ಯೋಗಾ ವಿದ್ಯಾರ್ಥಿಗಳಾದ ಸವಿತಾ ಪೂಜಾರಿ, ವಿಜಯಲಕ್ಷ್ಮಿ ಇಂಗಿನ್ , ಜ್ಯೋತಿ ಹೂಗಾರ್ , ಪೂಜಾ, ರೇಷ್ಮಾ, ವಿಜಯಲಕ್ಷ್ಮಿ ಗುತ್ತೇದಾರ ಮತ್ತು ಜ್ಯೋತಿ ಸಾಗರ್ ಇದ್ದರು.