ಮಹಿಳಾ, ಮಕ್ಕಳ ರಕ್ಷಣಾವೇದಿಕೆಯಿಂದ ಮಹಿಳಾ ದಿನಾಚರಣೆ

ಲಿಂಗಸಗೂರು,ಮಾ.೧೩- ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಇದೆ ಸಂದರ್ಭದಲ್ಲಿ ಕೊರೊನಾದಲ್ಲಿ ತಮ್ಮ ಜೀವನದ ಹಂಗು ತೊರೆದು ಕೆಲಸ ನಿರ್ವಹಿಸಿದ ಹಲವಾರು ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ರಕ್ಷಣಾ ತಾಲೂಕಾ ಅಧ್ಯಕ್ಷರಾದ ಜ್ಯೋತಿ ಸುಂಕದ ನೇತೃತ್ವದಲ್ಲಿ ನಡೆದ ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗೀತಾ ಕರಿಯಪ್ಪ ವಜ್ಜಲ್, ಚನ್ನಮ್ಮ ಸಕ್ರಿ, ಲಕ್ಷ್ಮೀ ದೇವಿ ನಡುವಿನಮನಿ, ಶಿವಮ್ಮ ಪಟ್ಟದಕಲ್ಲು, ಜಯಶ್ರಿ ಸಕ್ರಿ, ಶೈಲಜಾ ಹಿರೇಮಠ, ಸರಸ್ವತಿ ವಜ್ಜಲ್ ಆಗಮಿಸಿ ಕೊರೊನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಿರ್ಭಯವಾಗಿ ಕೆಲಸ ನಿರ್ವಹಿಸಿ ಕೊರೊನಾ ತಡೆಗೆ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ವೆಂಕಮ್ಮ ನಾಯಕ, ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ಗಂಗಮ್ಮ ಪರಿವಿನ್ ಬೇಗಂರವರಿಗೆ ಸನ್ಮಾನಿಸಲಾಯಿತು.
ನಂತರ ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಮನೆಯಿಂದ ಹೊರಬರುವುದೆ ಕಷ್ಟ ಅಂತಹ ಸಂದರ್ಭದಲ್ಲಿ ಜೀವದಹಂಗು ತೊರೆದು ಕೆಲಸ ನಿರ್ವಹಿಸಿದ್ದು, ಪ್ರಶಂಸನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಮಿತಾ ಅಂಗಡಿ, ಶಿಲ್ಪಾನಾಗರಾಜ, ಭಾನುಮತಿ, ಸರೋಜಾ, ಅಯ್ಯಮ್ಮ, ಜಯಶ್ರೀ, ಸಾವಿತ್ರಿ,ರೋಹಿಣಿ, ಪರವಿನ್ ಮುಶ್ವಾನ್ ಭಾನು ಸೇರಿದಂತೆ ಇದ್ದರು.