ಮಹಿಳಾ ಮಕ್ಕಳ ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ


ಹೊಸಪೇಟೆ ಸೆ20: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಹೆಚ್) ಹಾಗೂ ಕಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ನಗರದ ಜನನಿ ಮಹಿಳಾ ಸಬಲೀಕರಣ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ..
ಹೊಸಪೇಟೆ ಜಿಲ್ಲಾ ಕೇಂದ್ರವಾಗಿರುವುದರಿಂದ ನಾನಾ ಭಾಗಗಳಿಂದ ನಿತ್ಯ ಹತ್ತಾರು ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಾರೆ. 60 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಕ್ಯಾನಿಂಗ್ ಸೆಂಟರ್ ಆರಂಭಿಸಬೇಕು. ಕೆಲವೊಂದು ರಕ್ತ ಪರೀಕ್ಷೆಗೆ ಹೊರಗಡೆ ಕಳಿಸಲಾಗುತ್ತಿದ್ದು ಎಲ್ಲಾ ರೀತಿಯ ರಕ್ತ ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ಲಭ್ಯವಿರುವ ಪ್ರಯೋಗಾಲಯದಲ್ಲೇ ಮಾಡಲು ಕ್ರಮ ಕೈಗೊಳ್ಳಬೇಕು. ಶೌಚಾಲಯಗಳು ಹಾಗೂ ಶೌಚಗೃಹಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವನಿಕರು ಹಾಗೂ ಸಂಘಸಂಸ್ಥೆಗಳ ಜೊತೆ ಸಿಬ್ಬಂದಿಯವರ ವರ್ತನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸುವುದು ಇತರೆ ಬೇಡಿಕೆಗಳನ್ನು
ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜನನಿ ಸಮಿತಿಯ ಅಧ್ಯಕ್ಷ ಗೀತಾಶಂಕರ್, ಪ್ರಧಾನ ಕಾರ್ಯದರ್ಶಿ ಹುಲಿಗೆಮ್ಮ, ಉಪಾಧ್ಯಕ್ಷೆ ರೋಫಿಯಾ, ಕಾರ್ಯದರ್ಶಿ ಉಮಾ, ಸಂಚಾಲಕ ಶ್ರೀದೇವಿ, ಸಹ ಸಂಚಾಲಕ ಅಂಬಿಕಾ, ಸದಸ್ಯ ಸುಮಾನಾಯ್ಕ್ ಹಾಗೂ ಖೈರುನ್ ಇತರರು ಪಾಲ್ಗೊಂಡಿದ್ದರು.