ಮಹಿಳಾ ಮಂಡಳಿಯ ಸಮಾಜಮುಖಿ ಕಾರ್ಯ ಶ್ಲಾಘನೀಯ :ಶಾಂತಿ ದೇಸಾಯಿ

ಕಲಬುರಗಿ:ಮಾ.11: ಮಹಿಳಾ ಮಂಡಳಿಯ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ಶಿಕ್ಷಣ ತಜ್ಞೆ ಡಾ. ಶಾಂತಿ ದೇಸಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸಂಗಮೇಶ್ವರ್ ಮಹಿಳಾ ಮಂಡಲದ 48ನೆಯ ವಾರ್ಷಿಕೋತ್ಸದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಹಿಳಾ ಮಂಡಳವು ಮಹಿಳಾ ಪರವಾಗಿ ಮತ್ತು ಸಮಾಜಮುಖಿಯಾಗಿ ಸುದೀರ್ಘವಾದ ದಾರಿಯನ್ನು ಕ್ರಮಿಸಿರುವುದು ಬಹುದೊಡ್ಡ ಸಾಧನೆಯಾಗಿದ್ದು, ಇದು ನಮಗೆ ಹೆಮ್ಮೆಯ ಸಂಗತಿ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರು ಮಾತನಾಡಿ, ಇನ್ನೆರಡು ವರುಷಗಳಲ್ಲಿ ಅರ್ಧ ಶತಮಾನವನ್ನು ಪೂರೈಸಲಿರುವ ಸಂಗಮೇಶ್ವರ್ ಮಹಿಳಾ ಮಂಡಲವು ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಬಹುದೊಡ್ಡ ದಾಖಲೆ ನಿರ್ಮಿಸಿದೆ. ನಮ್ಮ ಭಾಗದ ಮಾದರಿಯ ಸಂಸ್ಥೆಯಾಗಿರುವ ಇದರ ದಾರಿ ಸುಲಭದ್ದಾಗಿರಲಿಲ್ಲ. ಸಂಗಮೇಶ್ವರ್ ಮಹಿಳಾ ಮಂಡಳದ ಕಾರ್ಯ ಸಾಧನೆ ಬಗ್ಗೆ ಮುಖ್ಯವಾಗಿ ಸರಕಾರಕ್ಕೆ ತಿಳಿಸಬೇಕಾಗಿದೆ ಎಂದರು.
ಮಹಿಳಾ ಮಂಡಲದ ಅಧ್ಯಕ್ಷರಾದ ದೇಶಮುಖ್ ಅವರು ಮಾತನಾಡಿ, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡಬೇಕಾದದ್ದು ಮನುಷ್ಯ ಧರ್ಮ. ಆ ನಿಟ್ಟಿನಲ್ಲಿ ಸಂಗಮೇಶ್ವರ್ ಮಹಿಳಾ ಮಂಡಲವು ಇಲ್ಲಿಯವರೆಗೂ ನಡೆದು ಬಂದಿದೆ. ಅಂದಿನ ಸಾರ್ಥಕದ ಕಾರ್ಯಕ್ಕೆ ಇಂದಿನ ಸಡಗರದ ಕ್ಷಣಗಳು ಅರ್ಥಪೂರ್ಣವೆನಿಸುತ್ತಿದೆ ಎಂದರು.
ಓಂಕಾರ್ ನೃತ್ಯ ಸಾಧನ ಸಂಸ್ಥೆಯ ಅಧ್ಯಕ್ಷೆ ಡಾ. ಶುಭಾಂಗಿ ಸುಧೀಂದ್ರ ಹಾಗೂ ಮಧುರ ಮೈತ್ರಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಛಾಯಾ ಮಳೂರ್ ಅವರಿಗೆ ಸನ್ಮಾನಿಸಲಾಯಿತು. ಜಾನಪದ ಕಲಾವಿದೆ ಶಿಲ್ಪಾ ಮುಡುಬಿ ಅವರು ಜಾನಪದ ಕಲೆಯ ಸತ್ವ ಮತ್ತು ವಿಶೇಷತೆಯ ಬಗ್ಗೆ ಮಾತನಾಡಿ, ತಮ್ಮ ಅನುಭವವನ್ನು ಬಿಚ್ಚಿಟ್ಟು ತುಂತುಣಿಯನ್ನು ನುಡಿಸುತ್ತಾ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಮೇ ಫ್ಲವರ್ ನರ್ಸರಿ ಶಾಲೆಯ ಮಕ್ಕಳಿಂದ ಮತ್ತು ಮಹಿಳಾ ಮಂಡಲದಿಂದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶೃತಿ ವಿ. ಸಗರ್ ಅವರು ಪ್ರಾರ್ಥನಾಗೀತೆ ಹಾಡಿದರು. ಶಾಂತಾ ಭೀಮಸೇನರಾವ್ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಳದ ಸದಸ್ಯರು ಮತ್ತು ಡಾ. ಸ್ವಾಮಿರಾವ್ ಕುಲಕರ್ಣಿ, ಶ್ರೀನಿವಾಸ್ ಸಿರನೂರು, ಮೋಹನ್ ಸೀತನೂರು, ಪ್ರಭಾಕರ್ ಜೋಶಿ, ನಾರಾಯಣ್, ಬಿ.ಎಚ್. ನಿರಗುಡಿ, ಕುಲಕರ್ಣಿ ಕೆ.ಪಿ. ಗಿರಿಧರ್, ರವಿ ಲಾತುರಕರ್, ವಿಠಲ್ ಕಟ್ಟಿ, ಶೀತಲ್ ದೇವಳಗಾಂವ್, ಶಾರದಾ ಕಿತ್ತೂರ್, ನಂದಾ ಕುಲಕರಣಿ, ಸೀತಾ ಮಲ್ಲಾಬಾದಿ ಮುಂತಾದವರು ಉಪಸ್ಥಿತರಿದ್ದರು.