ಮಹಿಳಾ ಮಂಡಳಿಯಿಂದ ದಹಿ ಹಂಡಿ ಹಾಗೂ ಭಜನಾ ಕಾರ್ಯಕ್ರಮ

ಬೀದರ :ಜು.17:ಆಷಾಢ ನಿಮಿತ್ಯವಾಗಿ ಬೀದರ ನಗರದ ಚೌಬಾರಾ ಸಮೀಪದ ಐತಿಹಾಸಿಕ ಪಾಂಡುರಂಗ ಮಂದಿರದಲ್ಲಿ ಮಹಿಳಾ ಮಂಡಳಿಯಿಂದ ದಹಿ ಹಂಡಿ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.

ಬಡಾವಣೆಯ ಮಹಿಳೆಯರು ಎಲ್ಲರೂ ಸೇರಿಕೊಂಡು ಸಂಭ್ರಮ ಹಾಗೂ ಹರ್ಷೋಲ್ಲಾಸದ ಮಧ್ಯೆ ಜಿಟಿ ಜಿಟಿ ಮಳೆಯಲ್ಲೂ ವಿಠ್ಠಲ-ರುಕ್ಮೀಣಿ ಭಕ್ತರು ಪಾಂಡರಂಗನ ದಿಂಡಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೀದರ ಜಿಲ್ಲೆಯ ವಿವಿಧ ಭಜನಾ ಮಂಡಳಿ ತಂಡಗಳಿಂದ ಭಜನೆ ಹಾಗೂ ಕೀರ್ತನೆಯೊಂದಿಗೆ ಪಾಂಡುರಂಗ ದಿಂಡಿ ಕಾರ್ಯಕ್ರಮ ಮಧ್ಯಾಹ್ನ ಪ್ರಾರಂಭಗೊಂಡು ರಾತ್ರಿ ಭಜನಾ ಮಂಡಳಿಯ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಂಪನ್ನಗೊಳಿಸಿ ನಂತರ ದಹಿ-ಹಂಡಿ ಒಡೆಯಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಪಾಂಡುರಂಗ ಭಗವಾನ ಕೀ ಜೈ ಪಂಡರಿನಾಥ ಮಹಾರಾಜ ಕೀ ಜೈವೆಂದು ಜಯಘೋಷ ಕೂಗಿದರು.

ಮಹಿಳೆಯರು ಹಾಗೂ ಪುರಷರು, ಯುವಕರು ಸೇರಿದಂತೆ ಸಾವಿರಾರು ಭಕ್ತಿ-ಭಾವದಲ್ಲಿ ತಲ್ಲಿನರಾಗಿ ಭಕ್ತರು ಫುಗಡಿವಾಟವಾಡಿ ಸಂಭ್ರಮಿಸಿದರು.

ರಾತ್ರಿ ದೇವಸ್ಥಾನದಲ್ಲಿ ಮಹಾಪ್ರಸಾದ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಾಡುರಂಗ ದೇವಸ್ಥಾನ ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಡಿ.ವ್ಹಿ ಸಿಂಧೋಲ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೆÇೀಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ ದೇವಸ್ಥಾನದ ಅರ್ಚಕರಾದ ವಿಜಯ ಪೂಜಾರಿ ಹಾಗೂ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿಯ ಮಹಿಳೆಯರಾದ ನಿವೃತ್ತ ಶಿಕ್ಷಕಿ ತಾರಾ ಜೋಶಿ, ಉಷಾ ದಿಕ್ಷೀತ್, ರೇಣುಕಾ ಜೋಶಿ, ವನ್ಮಲಾಬಾಯಿ ಪಾಟಕ್, ಸುವರ್ಣ ಕುಲಕರ್ಣಿ, ಚಂಪಾಬಾಯಿ, ಪುಟ್ಟಕ್ಕ, ಸುನೀತಾಬಾಯಿ, ಗಿರಿಜಾಬಾಯಿ, ಮಂಗಲಾಬಾಯಿ, ಸ್ವರೂಪ ರಾಣಿ, ಚಂದ್ರಕಲಾ, ಪ್ರಭಾವತಿ ದಿಕ್ಷಿತ, ಆಶಾ ಪಾಟಕ, ಆಶಾ ಕುಲಕರ್ಣಿ, ಸುರೇಖಾ ಜೋಶಿ, ಮಕ್ಕಳು, ಯುವಕರು, ಯುವತಿಯರು, ವಯೋವೃದ್ಧರು, ಪುರಷರು ಸೇರಿದಂತೆ ಸಾವಿರಾರು ಭಕ್ತರು ಇದ್ದರು.