ಕೋಲಾರ, ಜೂ. ೨೭:ಮಹಿಳಾ ಪ್ರಯಾಣಿಕರೊಂದಿಗೆ ಕೆ.ಎಸ್.ಆರ್.ಟಿ.ಸಿ.ಯ ಕೆಲವು ನಿರ್ವಾಕರು ಹಾಗೂ ಚಾಲಕರು ಅನುಚಿತವಾಗಿ ವರ್ತಿಸುತ್ತಿದ್ದಾರೆಂಬ ದೂರುಗಳು ಬಂದ ಹಿನ್ನಲೆಯಲ್ಲಿ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದರೆ ಶಿಸ್ತು ಕ್ರಮ ಜರುಗಿಸಲು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜೂನ್ ೧೧ ರಿಂದ ಜಾರಿಗೆ ಬಂದಿದೆ. ಮಹಿಳೆಯರು ಅತ್ಯಂತ ಸಂತಸದಿಂದ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯು ಜಾರಿಯಾದ ಬಳಿಕ ಬಹುತೇಕ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚು ಪ್ರಯಾಣಿಸುತ್ತಿರುವುದು ಕಂಡು ಬರುತ್ತಿದೆ. ಬಸ್‌ಗಳಲ್ಲಿ ನಿಗಧಿತ ಸೀಟ್‌ಗಳಿಗಿಂತ ಹೆಚ್ಚು ಮಂದಿ ಪ್ರಯಾಣಿಕರು ಇರುವುದರಿಂದ ಬಸ್‌ನಲ್ಲಿ ಸೀಟ್ ಹಿಡಿಯಲು ನುಗ್ಗಾಟ ತಳ್ಳಾಟಗಳು ಸಹಜವಾಗಿದೆ. ಇದಕ್ಕೆ ಕಾರಣ ಬಸ್‌ಗಳ ಸಂಖ್ಯೆ ಕಡಿಮೆ ಇರುವುದಾಗಿದೆ.
ಅದರೆ ಕಳೆದ ಒಂದು ವಾರದಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಇದರಿಂದ ಬೇಸತ್ತಿರುವ ಬಸ್‌ನ ಚಾಲಕರು ಮತ್ತು ನಿರ್ವಾಹಕರು ಮಹಿಳೆಯರ ಬಳಿ ಸೌಜನ್ಯದಿಂದ ವರ್ತಿಸದೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಮಹಿಳೆಯರಿಂದ ವರದಿಯಾಗುತ್ತಿದೆ. ಕೆಲವಡೆ ಪ್ರಯಾಣಿಕರ ಮತ್ತು ನಿರ್ವಾಕರ ನಡುವೆ ಹೊಡೆದಾಟಗಳು ಸಹ ಸಮಾಜಕ ಜಾಲತಾಣಗಳಲ್ಲಿ ವೈರಲ್ ಅಗಿರುವುದು,
ಈ ಕುರಿತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗಿದ್ದು ಕೊಡಲೇ ತಮ್ಮ ಸಿಬ್ಬಂದಿಗಳಿಗೆ ಎಚ್ಚರಿಕೆಯ ಅದೇಶವನ್ನು ರವಾನಿಸಿದೆ. ಉಚಿತವಾಗಿ ಪ್ರಯಾಣಿಸುವ ಮಹಿಳೆಯರೊಂದಿಗೆ ಅಗೌರವದಿಂದ ನಡೆದು ಕೊಂಡ ದೂರುಗಳು ಬಂದಲ್ಲಿ ಅಂಥವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು. ಅದಕ್ಕೆ ಅವಕಾಶಗಳು ಕಲ್ಪಿಸದಂತೆ ಸೌಜನ್ಯದಿಂದ, ಗೌರವದಿಂದ ವರ್ತಿಸ ಬೇಕೆಂದು ಸೂಚಿಸಿ ಸೊತ್ತೂಲೆಯನ್ನು ಜಾರಿ ಮಾಡಲಾಗಿದೆ.
ಪ್ರಯಾಣಿಸುವ ಮಹಿಳೆಯರಿಗೆ ವಿತರಿಸುವ ಟಿಕೆಟ್ ಮೊತ್ತವನ್ನು ಸರ್ಕಾರವು ಪಾವತಿಸಿರುತ್ತದೆ. ಇದನ್ನು ಅದಾಯವೆಂದು ಪರಿಗಣಿಸ ಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ನಿಗಮದ ಎಲ್ಲಾ ಚಾಲಕರು ಮತ್ತು ನಿರ್ವಾಹಕರು ಈ ಹಿಂದಿನಂತೆ ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವುದು ಇಳಿಸುವುದ ಎಂದಿನಂತೆ ಮುಂದುವರೆಸ ಬೇಕು. ಪ್ರಯಾಣಿಕರ ಸೇವೆಯಲ್ಲಿ ಯಾವೂದೇ ಬದಲಾವಣೆಗಳು ಇಲ್ಲದೆ ಈ ಹಿಂದಿನಂತೆ ಸೇವೆಯನ್ನು ಮುಂದುವರೆಸ ಬೇಕು, ಪ್ರಯಾಣಿಕರ ಬಳಿ ಸೌಜನ್ಯದಿಂದ ವರ್ತಿಸ ಬೇಕೆಂದು ಖಡಕ್ ಅದೇಶ ಜಾರಿ ಮಾಡಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.