ಮಹಿಳಾ ಪೊಲೀಸ್ ತರಬೇತುದಾರರಿಗೆ ಸಾಹಸ ಕ್ರೀಡೆಗಳ ತರಬೇತಿ

ಬಳ್ಳಾರಿ ನ 22 : ನೊಪಾಸನ ಸಂಸ್ಥೆಯಿಂದ ನಗರದ ಕೋಟೆಯಲ್ಲಿ 57 ಮಹಿಳಾ ಪೊಲೀಸ್ ತರಬೇತುದಾರರಿಗೆ ಸಾಹಸ ಕ್ರೀಡೆಯ ತರಬೇತಿಯನ್ನು ನೀಡಲಾಯಿತು. ಕೋಟೆಯ ಇತಿಹಾಸ, ಚಾರಣ, ಗುಹೆ ಅನಿವೇಶನ ಮತ್ತು ರಾಕ್ ಕ್ಲೈಂಬಿಂಗ್, ಈ ಕ್ರೀಡೆಗಳ ಮುಖಾಂತರ ಅವರಿಗೆ ಬೆಟ್ಟ ಗುಡ್ಡಗಳು ಹತ್ತೋದು, ಕತ್ತಲಿನಲ್ಲಿ ಹೋಗುವುದು, ಬಾವಿ ಹಳ್ಳ ಮತ್ತು ಕಟ್ಟಡಗಳಲ್ಲಿ ರಕ್ಷಣಾ ಕಾರ್ಯಚರಣೆ ಮಾಡುವ ಸಂದರ್ಬದಲ್ಲಿ ಬೇಕಾಗುವ ವಿಶೇಷ ತರಬೇತಿಯನ್ನು ನೀಡಿಲಾಯಿತು.
ಈ ಸಂದರ್ಭದಲ್ಲಿ ಡಿಎಆರ್ ಡಿವೈಎಸ್ಪಿ ಸರದಾರ್, ನೊಪಾಸನ ಸಂಸ್ಥೆಯ ನಿರ್ದೇಶಕ.ಎಂ.ಎ.ಷಕೀಬ್, ಉಪಸ್ಥಿತರಿದ್ದರು. ನೊಪಾಸನ ತಂಡದ ಉಮೇಶ್, ಹನುಮಂತಪ್ಪ, ಆನಂದ್, ಶಾಹಿದಾ ಮತ್ತು ಪವನ್ ಕುಮಾರ್ ಇವರು ತರಬೇತಿ ನೀಡಿದರು.