ಮಹಿಳಾ ಪೊಲೀಸ್ ಠಾಣೆಗೆ ಪ್ರಸ್ತಾವನೆ- ಶಶಿಕಲಾ ಜೊಲ್ಲೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ17: ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸದಾಗಿ ಮಹಿಳಾ ಪೊಲೀಸ್‍ಠಾಣೆಯ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಕೆ.ಅರುಣ್‍ಗೆ ಸೂಚಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತೂವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನದ ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಒಟ್ಟು ಅಭಿವೃದ್ಧಿ ದೃಷ್ಟಿಕೋನವನ್ನು ಮುಂದಿಟ್ಟು ಕಾರ್ಯಯೋಜನೆ ಮಾಡಲಾಗಿದೆ ಯಾದರೂ ಜಿಲ್ಲಾ ಹಂತದಲ್ಲಿ ಒಂದು ಮಹಿಳೆಯರಿಗೆ ಪ್ರತೇಕ ಪೊಲೀಸ ಠಾಣೆಯ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಲಾಗಿದ್ದು ಸೋಮವಾರವೇ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದ್ದು ಗೃಹ ಸಚಿವರೊಂದಿಗೆ ಮಾತನಾಡಿ ತ್ವರಿತವಾಗಿ ಅನುಮತಿ ನೀಡಲಾಗುವುದು ಎಂದರು.
 ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು ಜಿಲ್ಲಾ ಮಟ್ಟದ ಕಚೇರಿಗಳು ಸೇರಿದಂತೆ ಅನೇಕ ಇಲಾಖೆಗಳು ಅವುಗಳ ನಿರ್ವಹಣೆಗೆ ಅಗತ್ಯ ಅನುದಾನ ನೀಡಿಲಾಗಿದೆ. ಮೂಲಸೌಕರ್ಯ ಅಭಿವೃದ್ದಿಯಲ್ಲಿ ಯಾವುದೆ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಆದಷ್ಟು ಬೇಗ ಬಹುತೇಕ ಜಿಲ್ಲಾ ಹಂತದ ಕಚೇರಿಗಳು ಕಾರ್ಯಾರಂಭ ಮಾಡಲಿವೆ ಎಂದರು. ಕ್ರೀಡೆ, ಶಿಕ್ಷಣ, ಪ್ರತೇಕ ಮಹಿಳಾ ಕಾಲೇಜು ಈ ಬಾರಿಯ ಅಭಿವೃದ್ಧಿಯ ವಿಶೇಷವಾಗಲಿವೆ ಎಂದರು.
ದೇವಸ್ಥಾನ ಅಭಿವೃದ್ಧಿ ಸಮಿತಿಗಳ ನೇಮಕಕ್ಕೆ ಕ್ರಮವಹಿಸುವುದಾಗಿ ತಿಳಿಸಿದ ಅವರು ಯಾವ ಸಮಿತಿಗಳ ಪೊಲೀಸ ಪರಿಶೀಲನೆಯಾಗಿದೆಯೋ ಆ ಎಲ್ಲಾ ಸಮಿತಿಯ ಅಂತಿಮಗೊಳಿಸವುದಾಗಿ ತಿಳಿಸಿದರು. ಮರಿಯಮ್ಮನಹಳ್ಳಿ ಸೇರಿದಂತೆ ಪಾವಗಡ ಯೋಜನೆ ದಾರಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.