ಮಹಿಳಾ ಪಿಎಸ್‌ಐ ಕೊಲೆ

ರಾಂಚಿ, ಜು. ೨೦- ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪ್ರಶ್ನಿಸಿದ್ದಕ್ಕೆ ಹರಿಯಾಣದಲ್ಲಿ ಡಿಎಸ್‌ಪಿ ಮೇಲೆ ವಾಹನ ಹರಿಸಿ ಕೊಲೆ ಮಾಡಿದ ಘಟನೆ ನಡುವೆಯೇ ಅಂಥಹದ್ದೇ ಇನ್ನೊಂದು ಕೃತ್ಯ ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ.
ಜಾರ್ಖಂಡ್‌ನಲ್ಲಿ ನಿನ್ನೆ ತಡರಾತ್ರಿ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ನನ್ನು ಕೊಲೆ ಮಾಡಲಾಗಿದೆ
ವಾಹನ ತಪಾಸಣೆಯ ಸಂದರ್ಭದಲ್ಲಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಸಾವನ್ನಪ್ಪಿದ್ದಾರೆ. ಇವರನ್ನು ತೂಪುದಾನ ಪ್ರದೇಶದ ಪ್ರಭಾರಿಯಾಗಿ ನೇಮಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಂಚಿ ಪೊಲೀಸರು ತಿಳಿಸಿದ್ದಾರೆ.
ಹರಿಯಾಣದಲ್ಲಿ ನಿನ್ನೆ ಅಕ್ರಮವಾಗಿ ನಡೆಸಲಾಗುತ್ತಿದ್ದ ಗಣಿ ಪ್ರದೇಶಕ್ಕೆ ತೆರಳಿ ತಪಾಸಣೆ ನಡೆಸುತ್ತಿದ್ದಾಗ ಪೊಲೀಸ್ ವಾಹನದ ಮೇಲೆ ಟ್ರಕ್ ಹತ್ತಿಸಿ ಡಿಎಸ್‌ಪಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ