ಮಹಿಳಾ ನೌಕರರ ಕಾರ್ಯಗಾರ
 ಭವಿಷ್ಯದ ದೃಷ್ಟಿಯಿಂದ ಪರಿಸರ ಕಾಳಜಿ ಅವಶ್ಯ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ನ.19- ಮುಂದಿನ ಪೀಳಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಪರಿಸರ ಕಾಳಜಿಯ ಬಗ್ಗೆ ಎಲ್ಲರಲ್ಲೂ ಮೂಡಿಸಬೇಕು ಎಂದು ನಾಡೋಜ ಪದ್ಮಶ್ರೀ ಪುರಸ್ವತ ಸಾಲುಮರದ ತಿಮ್ಮಕ್ಕ ಹೇಳಿದರು.
 ಪಟ್ಟಣದ ಗುರುಭವನದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ನೌಕರ ಕಾರ್ಯಗಾರದಲ್ಲಿ ಮಾತನಾಡಿ  ಜೀವನದಲ್ಲಿ ನಾನು ಹಲವಾರು ಕಷ್ಟಗಳನ್ನು ಎದುರಿಸಿ ರಸ್ತೆಯ ಅಕ್ಕ ಪಕ್ಕ ಸಾಲ ಮರಗಳನ್ನು ಬೆಳೆಸಿ ಅವಗಳಿಂದ ಈ ಮಟ್ಟದ ಕೀರ್ತಿ ಹೆಸರು ಪ್ರಶಸ್ತಿ ಕೊಟ್ಟಿರುವ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇದಲ್ಲದೆ ಸರ್ಕಾರ ನನ್ನನ್ನು ಪರಿಸರ ರಾಯಭಾರಿ ಆಯ್ಕೆ ಮಾಡಿರುವುದು ಜೀವನ ಸಾರ್ಥಕವೆನಿಸಿದೆ. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರವನ್ನು ಬೆಳೆಸಬೇಕು ಎಂದರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಸ್. ಭೀಮಾ ನಾಯ್ಕ್ ನೆರವೇರಿಸಿ ಮಾತನಾಡಿ ಮಹಿಳೆಯರು ಎಲ್ಲಾ ರಂಗದಲ್ಲಿ ಪುರುಷರ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಈಗಿನ ತಂತ್ರಜ್ಞಾನದಲ್ಲಿ ಮಹಿಳೆಯರಿಗೆ ಸಮಾನತೆ ಸ್ವತಂತ್ರವಾಗಿ ಬದುಕುವ ಹಕ್ಕು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರ ಯಾವುದೇ ಸಮಸ್ಯೆಗಳಿದ್ದರೂ ಶಾಸಕನಾಗಿ ನನ್ನ ಕರ್ತವ್ಯವನ್ನು ಮಾಡುತ್ತೇನೆ. ಕಾರ್ಯಕ್ರಮಕ್ಕೆ ವೃಕ್ಷ ಮಾತೆ ತಿಮ್ಮಕ್ಕನನ್ನು ಕರೆಸಿ ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಿರುವುದು ಸಂತೋಷವಾಗಿದೆ ಎಂದರು.
 ಉಪನ್ಯಾಸಕರಾಗಿ ಆಗಮಿಸಿದ ದಾವಣಗೆರೆಯ ಲತೀಕ್ ಶೆಟ್ಟಿ ಮಹಿಳಾ ನೌಕರರ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಕಾರ್ಯಗಾರದ ಉಪನ್ಯಾಸ ನೀಡಿದರು.
 ಮಹಿಳಾ ಸಾಧಕರಿಗೆ ಸನ್ಮಾನಿಸಿ ಗೌರಿಸಲಾಯಿತು.
 ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವಿಕ ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ್ ಮಾತನಾಡಿದರು
 ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಜಿ ಮಲ್ಲಿಕಾರ್ಜುನ ಗೌಡ, ಹರಪನಹಳ್ಳಿ ತಾಲೂಕು ಅಧ್ಯಕ್ಷ ಕೆ ಸಿದ್ದಲಿಂಗನಗೌಡ, ತಾ ಪಂ ಇ ಒ ಡಾ. ಪರಮೇಶ್ವರಪ್ಪ, ಉಪ ತಹಸಿಲ್ದಾರ್ ವಿಶ್ವೇಶ್ವರಯ್ಯ, ಸಿಡಿಪಿಓ ರಾಮನ್ಗೌಡ, ಎ ಇ ಇ ದೀಪಾ, ವನಸಿರಿ ಉಮೇಶ, ಮಹಿಳಾ ಸದಸ್ಯರಾದ ದೀಪಿಕಾ ನಾಗರತ್ನ ನೀಲ ರಘು ನಂದಿನಿ ಭಾರತಿ ಭಾಗ್ಯದೇವಿ ಚೈತ್ರ ಪ್ರಮೋದಿನಿ ಮಮತಾ ಕವಿತಾ ಇತರರಿದ್ದರು
 ದಾದೇಬೀ ಶಾಂತಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.